ಸರ್ಕಾರಿ ಕಚೇರಿಗೆ ಬಂದು ಗಾಂಜಾ ಹೊಡೆಯಲು ಬೆಂಕಿಪೊಟ್ಟಣ ಕೇಳಿದ ವಿದ್ಯಾರ್ಥಿಗಳು!
ಅಬಕಾರಿ ಇಲಾಖೆಯ ಕಚೇರಿಗೆ ತೆರಳಿದ ವಿದ್ಯಾರ್ಥಿಗಳ ಗುಂಪು ಗಾಂಜಾ ತುಂಬಿದ ಬೀಡಿ ಸೇದಲು ಬೆಂಕಿಪೊಟ್ಟಣ ಕೇಳಿದ ಘಟನೆ ವಿದ್ಯಾವಂತರ ನಾಡು ಕೇರಳದಲ್ಲಿ ನಡೆದಿದೆ.
ಆದಿಮಲೈ ಜಿಲ್ಲೆಯ ತ್ರಿಶೂರ್ ನ ಶಾಲೆಯ ವಿದ್ಯಾರ್ಥಿಗಳು ಗಾಂಜಾ ಹೊಡೆಯಲು ಕಾಲೇಜಿಗೆ ಚಕ್ಕರ್ ಹೊಡೆದು ತಿರುಗುತ್ತಿದ್ದರು. ಈ ವೇಳೆ ಗಾಂಜಾ ಮತ್ತಿನಲ್ಲಿ ಆಯತಪ್ಪಿ ಅಬಕಾರಿ ಇಲಾಖೆ ಕಚೇರಿಗೆ ಬಂದು ಗಾಂಜಾ ತುಂಬಿದ ಬೀಡಿ ಸೇದಲು ಬೆಂಕಿಪೊಟ್ಟಣ ಕೇಳಿದ್ದಾರೆ.
ಗಾಂಜಾ ಮತ್ತಿನಲ್ಲಿ ಯಾವುದೋ ಅಂಗಡಿ ಎಂದು ಭಾವಿಸಿದ ವಿದ್ಯಾರ್ಥಿಗಳು ಅಬಕಾರಿ ಇಲಾಖೆ ಕಚೇರಿಗೆ ಬಂದು ಬೆಂಕಿಪೊಟ್ಟಣ ಕೇಳಿದ್ದಾರೆ. ವಿಷಯ ತಿಳಿದು ಅಧಿಕಾರಿಗಳು ಪೊಲೀಸರು ಕರೆದು ಅರೆಸ್ಟ್ ಮಾಡಿಸಿದ್ದಾರೆ.
ವಿದ್ಯಾರ್ಥಿಗಳು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದು, ವಿದ್ಯಾರ್ಥಿಗಳ ಬಳಿ ಗಾಂಜಾ, ಆಶಿಶ್ ಆಯಿಲ್, ಬೀಡಿ ಸೀಗರೇಟಿಗೆ ತುಂಬಲು ಬೇಕಾದ ವಸ್ತುಗಳೊಂದಿಗೆ ಹಿಡಿದ ಪೊಲೀಸರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಹೋಟೆಲ್ ನಲ್ಲಿ ಊಟ ಮಾಡಿದ ವಿದ್ಯಾರ್ಥಿಗಳು ಗಾಂಜಾ ಹೊಡೆಯಲು ಜಾಗ ಹುಡುಕುತ್ತಾ ಹೋಗಿದ್ದಾರೆ. ಅಬಕಾರಿ ಇಲಾಖೆ ಕಚೇರಿಗೆ ಬಂದು ಬೆಂಕಿಪೊಟ್ಟಣ ಕೇಳಿದಾಗ ಸರ್ಕಾರಿ ಅಧಿಕಾರಿಗಳು ಎಂದು ತಿಳಿಯುತ್ತಿದ್ದಂತೆ ಓಡಿ ಹೋಗಲು ಯತ್ನಿಸಿದ್ದಾರೆ. ಆದರೆ ಎಲ್ಲರನ್ನೂ ಹಿಡಿಯುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಿದ್ದು, ಹೆತ್ತವರಿಗೆ ನೋಟಿಸ್ ನೀಡಲಾಗಿದೆ. ಅಲ್ಲದೇ ಪ್ರಕರಣ ದಾಖಲಿಸಿಕೊಂಡು ಶಾಲೆಗೆ ವಾಪಸ್ ಕಳುಹಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.