ಕೆಂಗೇರಿ ಕೆರೆಯಲ್ಲಿ ಮೃತಪಟ್ಟ ಅಣ್ಣ-ತಂಗಿ: ಮೃತರ ಕುಟಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿದ ಡಿಸಿಎಂ ಡಿಕೆ ಶಿವಕುಮಾರ್!
ಕೆಂಗೇರಿ ಕೆರೆಯಲ್ಲಿ ಆಡಲು ಹೋಗಿ ಮುಳುಗಿ ಮೃತಪಟ್ಟಿದ್ದ ಅಣ್ಣ-ತಂಗಿಯ ಕುಟುಂಬಕ್ಕೆ ಬಿಬಿಎಂಪಿ ವತಿಯಿಂದ 5 ಲಕ್ಷ ರೂ. ಪರಿಹಾರ ಮೊತ್ತವನ್ನು ಡಿಸಿಎಂ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ.
ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಅಣ್ಣ ಶ್ರೀನಿವಾಸ್ (13) ತಂಗಿ ಮಹಾಲಕ್ಷ್ಮೀ (11) ಕೆರೆಗೆ ನೀರಲು ಹೋಗಿದ್ದರು. ಈ ವೇಳೆ ಕೆರೆಯ ಬಳಿ ಆಟವಾಡುತ್ತಿದ್ದಾಗ ಆಯತಪ್ಪಿ ಕೆರೆಗೆ ಬಿದ್ದು ಇಬ್ಬರು ಮೃತಪಟ್ಟಿದ್ದರು.
ಭಾರೀ ಮಳೆಯಿಂದಾಗಿ ತುಂಬಿ ಹರಿಯತ್ತಿದ್ದ ಕೆರೆ ಬಳಿ ಹೋಗಿದ್ದ ಅಣ್ಣ-ತಂಗಿ ನಾಪತ್ತೆಯಾಗಿರುವ ಸುದ್ದಿ ತಿಳಿದ ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕದ ದಳದ ಸಿಬ್ಬಂದಿ ರಬ್ಬರ್ ಬೋಟ್ ನೊಂದಿಗೆ ಶೋಧ ಕಾರ್ಯ ನಡೆಸಿತ್ತು.
ಭಾರೀ ಮಳೆ ಮತ್ತು ಕತ್ತಲು ಕವಿದ ಕಾರಣ ಶೋಧ ಕಾರ್ಯ ಮುಂದೂಡಲಾಗಿದ್ದು, ಇಡೀ ದಿನ ಶೋಧ ನಡೆಸಿದ ನಂತರ ಇಬ್ಬರ ಶವ ಪತ್ತೆಯಾಗಿದೆ.
ಕೆರೆಯಲ್ಲಿ ಮೃತಪಟ್ಟ ಅಣ್ಣ-ತಂಗಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಮೊತ್ತ ನೀಡಲಾಗುವುದು. ಮನೆಗೆ ನೀರು ನುಗ್ಗಿ ತೊಂದರೆಗೆ ಒಳಗಾದವರಿಗೆ ತಲಾ 10 ರೂ. ಪರಿಹಾರ ಮೊತ್ತ ನೀಡುವುದಾಗಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.