EXCLUSIVE NEWSKANNADAFLASHNEWS

ಆತ್ಮಹತ್ಯೆ ಪ್ರಚೋದನೆ,ಹಲ್ಲೆ ಆರೋಪ:BMTC ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಶಿವಪ್ರಕಾಶ್ ವಿರುದ್ಧ ಪೊಲೀಸ್ ಕಮಿಷನರ್ ಗೆ ದೂರು..

Share

ಶಿವಪ್ರಕಾಶ್ ವಿರುದ್ಧ ಘಟಕ 12ರ ಸಿಬ್ಬಂದಿ ಮಹೇಶ್ ಆತ್ಮಹತ್ಯೆಗೆ ಪ್ರಚೋದನೆ,ಸಿಬ್ಬಂದಿ ಲಕ್ಕಪ್ಪ ಮೇಲೆ ಮಾರಣಾಂತಿಕ ಹಲ್ಲೆ ಆರೋಪ 

BMTC ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಶಿವಪ್ರಕಾಶ್
BMTC ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಶಿವಪ್ರಕಾಶ್
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು:ಸಾರಿಗೆ ನೌಕರರು ಸಣ್ಣ ತಪ್ಪು ಮಾಡಿದ್ರೂ ಘನಘೋರ ಅಪರಾಧ ಎನ್ನುವಂತೆ ಬಿಂಬಿಸಿ ಶಿಕ್ಷೆ ನೀಡೊಕ್ಕೆ ಕಾದು ಕುಂತಿರುತ್ತದೆ ಬಿಎಂಟಿಸಿ ಆಡಳಿತ ಮಂಡಳಿ.ಆದ್ರೆ ಅದೇ ಅಧಿಕಾರಿಗಳು ಪ್ರಾಣ-ಮಾನ ಹೋಗುವಂಥ ಗಂಭೀರ ಸ್ವರೂಪದ ಕೃತ್ಯ ಎಸಗಿದ್ರೂ, ಗಂಭೀರ ಸ್ವರೂಪದ ಆಪಾದನೆ ಎದುರಿಸುತ್ತಿದ್ದರೂ ಅಂಥವ್ರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಲೇ ಇರುತ್ತದೆ.ಇದಕ್ಕೊಂದು ಜ್ವಲಂತ ನಿದರ್ಶನ ಎಂದರೆ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಶಿವಪ್ರಕಾಶ್ ಎನಿಸುತ್ತದೆ .ಸಿಬ್ಬಂದಿಯೊಂದಿಗೆ ಅನಾಗರಿಕವಾಗಿ ,ಅಮಾನವೀಯವಾಗಿ ನಡೆದುಕೊಳ್ಳುವಂಥ ಗಂಭೀರ ಸ್ವರೂಪ ದ ಆಪಾದನೆಗಳು ಈ ಅಧಿಕಾರಿ ವಿರುದ್ಧವಿದ್ದರೂ ಬಿಎಂಟಿಸಿ ಆಡಳಿತ ಇವರನ್ನು ಈವರೆಗೂ ರಕ್ಷಿಸುವ ಕೆಲಸ ಮಾಡುತ್ತಲೇ ಬಂದಿದೆ. ಇದು ಕಾರ್ಮಿಕ ಸಮೂಹವನ್ನು ನಖಶಿಖಾಂತ ಉರಿಸಿರುವುದಷ್ಟೇ ಅಲ್ಲ,ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ  ದೂರು ಕೊಡುವ ಸ್ಥಿತಿಗೆ ತಲುಪಿದೆ.

ಬಿಎಂಟಿಸಿಯಷ್ಟೇ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಲ್ಲಿ ಏನೇ ಅನ್ಯಾಯ ನಡೆದರೂ ಅದನ್ನು ಖಂಡಾತುಂಡವಾಗಿ ಖಂಡಿಸಿ ಅದನ್ನು ಸಾರ್ವಜನಿಕಗೊಳಿಸುವಲ್ಲಿ ಮಂಚೂಣಿಯಲ್ಲಿರುವ ಕನ್ನಡ ಫ್ಲ್ಯಾಶ್ ನ್ಯೂಸ್  ಬಳಿ, ಮೇಲ್ಕಂಡ ಸುದ್ದಿ ಮೇಲೆ ಬೆಳಕು ಚೆಲ್ಲಲಿಕ್ಕೂ ಕಾರಣಗಳಿವೆ.ಇದನ್ನು ಪುಷ್ಟೀಕರಿಸುವಂಥ ನಿಖರ ದಾಖಲೆಗಳಿವೆ.ಸಾರಿಗೆ ಸಿಬ್ಬಂದಿಯ ಮೇಲೆ ಎಂತದ್ದೇ ಆರೋಪ ಬಂದಾಗ್ಲೂ ಅದನ್ನು ಸೂಕ್ಷ್ಮವಾಗಿ ಅವಲೋಕಿಸಿ ನ್ಯಾಯ ತೀರ್ಮಾನ ಮಾಡುವ ಕೆಲಸ ಮಾಡಬೇಕಿ ರುವುದು ಭದ್ರತಾ ಶಾಖೆ.ಆದರೆ ಈ ಶಾಖೆಯ ಉಸ್ತುವಾರಿ ವಹಿಸುವವರಲ್ಲೇ ಕೆಲವರು ಅಮಾನುಷವಾಗಿ ನಡೆದುಕೊಂಡರೆ, ಸಿಬ್ಬಂದಿ ಯಾರ ಬಳಿ ತಮ್ಮ ಅಳಲು ಹೇಳಿಕೊಳ್ಳೊಕ್ಕೆ ಸಾಧ್ಯವೇಳಿ..? ಶಿವಪ್ರಕಾಶ್ ವಿರುದ್ಧ ಕೇಳಿಬಂದಿರುವುದು ಕೂಡ ಇಂತದ್ದೇ ಆಪಾದನೆ.ಆದರೆ ಈವರೆಗೂ ಅವರ ವಿರುದ್ಧ ಶಿಸ್ತುಕ್ರಮ ಜಾರಿಯಾಗದಿರುವುದು ಯಾವ ನ್ಯಾಯ ಎನ್ನೋದು ಪೊಲೀಸ್ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಪ್ರಶ್ನಿಸಲಾಗಿದೆ.

ಶಿವಪ್ರಕಾಶ್ ಚೇಂಬರ್ ಎದುರೇ  ನಡೆದ ಆತ್ಮಹತ್ಯೆಯಲ್ಲಿ ವಿಚಾರಣೆ ನಡೆಸದೆ ಕ್ಲೀನ್ ಚಿಟ್..:ಜುಲೈ 2024  ರಂದು ಚೀಫ್ ಸೆಕ್ಯೂರಿಟಿ-ವಿಜಿಲೆನ್ಸ್ ಅವರ ಕಚೇರಿಯಿಂದ 50 ಮೀಟರ್ ದೂರದ ರೆಕಾರ್ಡ್ ರೂಮಿ ನಲ್ಲಿ ಘಟಕ 12ರ ಸಿಬ್ಬಂದಿ ಮಹೇಶ್ ಎನ್ನುವವರು ನೇಣು ಹಾಕಿಕೊಂಡಿದ್ದರು. ಮಹೇಶ್ ತುಂಬಾ ಸಂಭಾವಿತ ಸಿಬ್ಬಂದಿ ಎಂಬ ಮಾತುಗಳಿವೆ.ಆದರೆ ದಿಢೀರ್ ಎನ್ನುವಂತೆ ಆತ್ಮಹತ್ಯೆ ಮಾಡಿಕೊಂಡಿದ್ದು ಅಘಾತ ಮೂಡಿಸಿತ್ತು.ಮಹೇಶ್ ಆತ್ಮಹತ್ಯೆಗೂ ಮುನ್ನ ಇದೇ ಶಿವಪ್ರಕಾಶ್ ಅವರಿದ್ದ ಕೊಠಡಿಯೊಳಗೆ ತೆರಳಿದ್ದರೆನ್ನಲಾಗ್ತಿದೆ.ಕಚೇರಿ ಒಳಗೆ ಏನೆಲ್ಲಾ ನಡೆಯಿತೋ ಗೊತ್ತಿಲ್ಲ, ಆದರೆ ಕಚೇರಿಯಿಂದ ಹೊರಬಂದ ಮೇಲೆ ಅದೇ ರೆಕಾರ್ಡ್ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಗುಮಾನಿ ಮೂಡಿಸಿತ್ತು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ  ಸಂಘ  ಪೊಲೀಸ್ ಆಯುಕ್ತರಿಗೆ ಬರೆದ ತನ್ನ ಪತ್ರದಲ್ಲಿ ಆಪಾದಿಸಿ ರುವಂತೆ ಮಹೇಶ್ ಸಾವಿಗೆ ಶಿವಪ್ರಕಾಶ್ ನೀಡಿರಬಹುದಾದ ಕಿರುಕುಳ, ನಡೆಸಿಕೊಂಡಿರುವ ಅಮಾನವೀಯ ರೀತಿಯೇ ಕಾರಣವಂತೆ.

ಶಿವಪ್ರಕಾಶ್ ಅವರ ಕಚೇರಿ ಸಮೀಪದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಸಿಬ್ಬಂದಿ ಮಹೇಶ್
ಶಿವಪ್ರಕಾಶ್  ಕಚೇರಿ ಸಮೀಪದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಸಿಬ್ಬಂದಿ ಮಹೇಶ್
ಶಿವಪ್ರಕಾಶ್ ಅವರ ವಿರುದ್ಧ ಪೊಲೀಸ್ ಕಮಿಷನರ್ ಗೆ ದೂರು ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ  ಸಂಘದ ಪತ್ರದಲ್ಲಿ ಆರೋಪಗಳ ಉಲ್ಲೇಖ
ಶಿವಪ್ರಕಾಶ್ ಅವರ ವಿರುದ್ಧ ಪೊಲೀಸ್ ಕಮಿಷನರ್ ಗೆ ದೂರು ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ  ಸಂಘದ ಪತ್ರದಲ್ಲಿ ಆರೋಪಗಳ ಉಲ್ಲೇಖ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ  ಸಂಘದ ಅಧ್ಯಕ್ಷ ಜಗದೀಶ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ  ಸಂಘದ ಅಧ್ಯಕ್ಷ ಜಗದೀಶ್

ಮಹೇಶ್ ಆತ್ಮಹತ್ಯೆ ಮಾಡಿಕೊಂಡಿದ್ದೇ ಶಿವಪ್ರಕಾಶ್ ಅವರ ಚೇಂಬರ್ ಹೋಗಿ ಬಂದ ಮೇಲೆ. ಅಲ್ಲಿಯವ ರೆಗೆ ಆತ  ಯಾರೊಂದಿಗು ಮಾತನಾಡಿಲ್ಲ.ಕಚೇರಿಯಿಂದ ಹೊರಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾ ರೆಂದರೆ ಅವರ ಮನಸಿಗೆ ಶಿವಪ್ರಕಾಶ್ ಎಷ್ಟರ ಮಟ್ಟಿಗೆ ಘಾಸಿ ಮಾಡುವಂತೆ ನಡೆದುಕೊಂಡಿರಬಹುದು. ಮಹೇಶ್ ಅವರ ಅಕಾಲಿಕ ನಿಧನದಿಂದೆ ಶಿವಪ್ರಕಾಶ್ ನೀಡಿರುವ ಪ್ರಚೋದನೆಯೇ ಕಾರಣ ಎಂದು ಅಧ್ಯಕ್ಷ ಜಗದೀಶ್ ಆಪಾದಿಸಿದ್ದಾರೆ.

ಘಟನೆ ನಡೆದ ಹಿನ್ನಲೆಯಲ್ಲಿ ಬಿಎಂಟಿಸಿ ಆಡಳಿತ ನಡೆದುಕೊಂಡ ರೀತಿ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಮಹೇಶ್ ಬದಲಿಗೆ ಯಾವುದಾದರೂ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದಿದ್ದರೆ ಆಡಳಿತ ಸುಮ್ಮನಾಗುತ್ತಿತ್ತಾ, .ಖಂಡಿತಾ ಇಲ್ಲ.ಒಂದು ತನಿಖೆ ಯನ್ನೇ ನಡೆಸಿಬಿಡುತ್ತಿತ್ತು.ಆದರೆ ಮಹೇಶ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಇಂಥದ್ದ್ಯಾವುದೇ ಪ್ರಕ್ರಿಯೆ ನಡೆಯಲಿಲ್ಲ.ಪ್ರಕರಣಕ್ಕೆ ಕಾರಣವಾಗುವ ಸತ್ಯ ತಿಳಿಯುವ ಪ್ರಯತ್ನ ಮಾಡುವ ಬದಲು ಪ್ರಕರಣಕ್ಕೆ ತಿಪ್ಪೆ ಸಾರಿಸುವ ಕೆಲಸ ನಡೆದಿದ್ದೇ ಹೆಚ್ಚು..! ಮುಂದ್ಯಾರು ಪ್ರಶ್ನಿಸಬಾರದು ಎನ್ನುವ ಕಾರಣಕ್ಕೆ ಸಂಸ್ಥೆಯ ಕಾವಲುಗಾರರಿಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡಲಾಯಿತೇ ಹೊರತು ಕನಿಷ್ಟಕ್ಕೂ ಶಿವಪ್ರಕಾಶ್ ಅವರನ್ನು ವಿಚಾರಣೆಗೆ ಒಳಪಡಿಸಲಿಲ್ಲ..ಪ್ರಕರಣದಲ್ಲಿ ತನಿಖೆಯನ್ನೇ ನಡೆಸದೆ ಶಿವಪ್ರಕಾಶ್ ಗೆ ಕ್ಲೀನ್ ಚಿಟ್ ಕೊಡಲಾಯಿತು. ಪ್ರಭಾವಿ ಸಚಿವರೊಬ್ಬರನ್ನು ಹಿಡಿದು ಶಿಫಾರಸ್ಸು ಮಾಡಿ ಶಿವಪ್ರಕಾಶ್ ಬಚಾವಾದರು.. ಇದೇ ಪ್ರಕರಣದಲ್ಲಿ ಯಾವುದಾದ್ರೂ ಕೆಳ ಹಂತದ ಸಿಬ್ಬಂದಿ ಹೆಸರು ಕೇಳಿಬಂದಿದ್ರೆ ಆಡಳಿತವೇ ನ್ಯಾಯನಿರ್ಣಯ ಮಾಡಿ ಜೈಲಿಗೆ ಕಳುಹಿಸಿಕೊಡುವಂಥ ವ್ಯವಸ್ಥೆ ಮಾಡುತ್ತಿತ್ತು.ಆದರೆ ಶಿವಪ್ರಕಾಶ್ ವಿಷಯದಲ್ಲಿ ನಡೆದಿದ್ದೆಲ್ಲಾ ಮೋಸ..ಆಡಳಿತ ಮಂಡಳಿ ಶಿವಪ್ರಕಾಶ್ ಅವರನ್ನು ಶಿಕ್ಷಿಸುವ ಬದಲು ರಕ್ಷಿಸುವ ಕೆಲಸ ಮಾಡಿತೆನ್ನುವುದು ಅಧ್ಯಕ್ಷ ಜಗದೀಶ್ ಆಪಾದನೆ.

ಶಿವಪ್ರಕಾಶ್ ಅವರಿಂದ ದೌರ್ಜನ್ಯಕ್ಕೊಳಗಾಗಿದ್ದ ಸಿಬ್ಬಂದಿ ಲಕ್ಕಪ್ಪ( ಗಾಯಗಳು ಮಾರಣಾಂತಿಕವಾಗಿರುವುದರಿಂದ ಅದನ್ನು ಬ್ಲರ್ ಮಾಡಲಾಗಿದೆ)
ಶಿವಪ್ರಕಾಶ್ ಅವರಿಂದ ದೌರ್ಜನ್ಯಕ್ಕೊಳಗಾಗಿದ್ದನೆನ್ನಲಾದ ಸಿಬ್ಬಂದಿ ಲಕ್ಕಪ್ಪ( ಗಾಯಗಳು ಮಾರಣಾಂತಿಕವಾಗಿರುವುದರಿಂದ ಅದನ್ನು ಬ್ಲರ್ ಮಾಡಲಾಗಿದೆ)

 ಬಾಸುಂಡೆ ಬರುವಂತೆ ಥಳಿಸಿದ ಪ್ರಕರಣದಲ್ಲೂ ಕ್ರಮವೇಕಿಲ್ಲ:ಶಿವಪ್ರಕಾಶ್ ವಿರುದ್ದ ಕೇಳಿಬಂದಿದ್ದ ಮತ್ತೊಂದು  ಆಪಾದನೆ ಸಿಬ್ಬಂದಿಗೆ ಬಾಸುಂಡೆ ಬರುವಂತೆ ಥಳಿಸಿದ ಆಪಾದನೆ.ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಭದ್ರತಾಧಿಕಾರಿಯಾಗಿದ್ದ ವೇಳೆ ಎಸ್ ಸಿ ಎಸ್ ಟಿ ಸಮುದಾಯದ ಸಿಬ್ಬಂದಿ ಲಕ್ಕಪ್ಪ ಎನ್ನುವವರ ಬೆನ್ನು-ಮೈ ಮೇಲೆ ಬಾಸುಂಡೆ ಬರುವಂತೆ ಥಳಿಸಿದ್ದರೆನ್ನುವುದು ದೊಡ್ಡ ಮಟ್ಟದ ಸುದ್ದಿಯಾಗಿತ್ತು.ಆ ದೃಶ್ಯಗಳನ್ನು ನೋಡಿದಾಗ ಎಂಥವರಿಗೂ ಅಯ್ಯೊ ಪಾಪ ಎನಿಸುತ್ತಿತ್ತು,ಸಿಬ್ಬಂದಿಯನ್ನು ಕ್ಷುಲ್ಲಕ ಕಾರಣಕ್ಕೆ ಥಳಿಸಿ ಆಸ್ಪತ್ರೆ ಸೇರುವಂತೆ ಮಾಡಿದ್ದ ಶಿವಪ್ರಕಾಶ್ ವಿರುದ್ಧ ಕ್ರಮ ಜಾರಿಯಾಗಬೇಕೆನ್ನುವ ದೊಡ್ಡ ಕೂಗು ಕೇಳಿಬಂದಿತ್ತು.ಈ ಸಂಬಂಧವೂ ಬಿಎಂಟಿಸಿ ಆಡಳಿತ ಯಾವುದೆ ಕ್ರಮ ಜಾರಿ ಮಾಡಲಿಲ್ಲ.ಆದರೆ ಸುಮ್ಮನಿರದ ಕಾರ್ಮಿಕ ಸಂಘಟನೆಗಳು ಮಾಡಿದ ಹೋರಾಟದ ಪಲವಾಗಿ 30-09-2020 ರಂದು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಶಿವಪ್ರಕಾಶ್ ಅವರ ವಿರುದ್ದ ದೂರು ಕೂಡ ದಾಖಲಾಗಿತ್ತೆನ್ನಲಾಗಿದೆ( NCR NO:29/2020).

ಶಿವಪ್ರಕಾಶ್ ಅವರ ವಿರುದ್ಧ ಪೊಲೀಸ್ ಕಮಿಷನರ್ ಗೆ ದೂರು ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ  ಸಂಘದ ಪತ್ರ
ಶಿವಪ್ರಕಾಶ್ ಅವರ ವಿರುದ್ಧ ಪೊಲೀಸ್ ಕಮಿಷನರ್ ಗೆ ದೂರು ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ  ಸಂಘದ ಪತ್ರ

ಸಿಬ್ಬಂದಿ ಮೇಲೆ ನಡೆದ ಹಲ್ಲೆಯನ್ನು ಆಡಳಿತ ನಿಜಕ್ಕೂ ಗಂಭೀರವಾಗಿ ಪರಿಗಣಿಸಿದ್ದೇ ಆದಲ್ಲಿ ಶಿವಪ್ರಕಾಶ್ ಅವರನ್ನು ಕೆಲಸದಿಂದಲೇ ಕಿತ್ತು ಹಾಕಬೇಕಿತ್ತು.ಆದರೆ ಅದ್ಯಾವ ಮೋಡಿ ಮಾಡಿದರೋ ಗೊತ್ತಿಲ್ಲ.ತಮ್ಮ ಎಲ್ಲಾ ರೀತಿಯಾದ “ಬಲ”ವನ್ನು ಪ್ರಯೋಗಿಸಿ ಪ್ರಕರಣದಿಂದಲೇ ಸೇಫ್ ಆಗಿಬಿಟ್ಟರಂತೆ.ಬಿಎಂಟಿಸಿ ಆಡಳಿತ ಕಣ್ಣೊರೆಸುವ ತಂತ್ರಗಾರಿಕೆ ಭಾಗವಾಗಿ ಅವರನ್ನು ಬೇರೆಡೆ ವರ್ಗಾಯಿಸಿತು.ಆದರೆ ಹಲ್ಲೆಗೊಳಗಾದ ಸಿಬ್ಬಂದಿಗೆ ಯಾವುದೇ ರೀತಿಯ ನ್ಯಾಯ ಒದಗಿಸಿಕೊಡಲೇ ಇಲ್ಲ..ಇದಾ ಬಿಎಂಟಿಸಿ ಆಡಳಿತದ ಸಾಮಾಜಿಕ ನ್ಯಾಯದ ಪರಿಕಲ್ಪನೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ  ಸಂಘ ಪ್ರಶ್ನಿಸಿದೆ.

ಇಷ್ಟೆಲ್ಲಾ ಆರೋಪಗಳಿದ್ದಾಗ್ಯೂ  ಶಿವಪ್ರಕಾಶ್ ಅವರನ್ನು ಇನ್ನೂ ಅದೇ ಹುದ್ದೆಯಲ್ಲಿ ಮುಂದುವರೆಸಿಕೊಂಡು ಹೋಗುತ್ತಿರುವುದರ ಬಗ್ಗೆಯೂ ಆಕ್ಷೇಪ-ಅಸಮಾಧಾನ ಕೇಳಿಬಂದಿದೆ.ಸಾರಿಗೆ ಸಿಬ್ಬಂದಿ ಸಂಘಟನೆಗಳು ಆಡಳಿತ ಮಂಡಳಿಯ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿವೆ.ಅಲ್ಲದೇ ಸಾಕಷ್ಟು ದೂರು-ಆಪಾದನೆಗಳಿದ್ದಾಗ್ಯೂ ಅವರಿಗೆ ಭಡ್ತಿ ನೀಡಿ ಮುಂದುವರೆಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿವೆ.

ಮುಖ್ಯ ಭದ್ರತಾ ಮತ್ತು ಜಾಗೃತ ವಿಭಾಗದ ಮುಖ್ಯಸ್ಥರಾದ ಅಬ್ದುಲ್ ಅಹಾದ್
ಮುಖ್ಯ ಭದ್ರತಾ ಮತ್ತು ಜಾಗೃತ ವಿಭಾಗದ ಮುಖ್ಯಸ್ಥರಾದ ಅಬ್ದುಲ್ ಅಹಾದ್

ಶಿವಪ್ರಕಾಶ್ ವಿರುದ್ಧ ತನಿಖೆಗೆ ಸೂಚಿಸಲಿದ್ದಾರಾ..ಅಬ್ದುಲ್ ವಹಾದ್..!?  ಮುಖ್ಯ ಭದ್ರತಾ ಮತ್ತು ಜಾಗೃತ ವಿಭಾಗದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿರುವ ಅಬ್ದುಲ್ ಅಹಾದ್ ಅವರನ್ನೇ ದಿಕ್ಕುತಪ್ಪಿ ಸುವ ರೀತಿಯಲ್ಲಿ ಶಿವಪ್ರಕಾಶ್ ನಡೆದುಕೊಳ್ಳುತ್ತಿದ್ದಾರೆನ್ನುವ ಮಾತಿದೆ.ಆದರೆ ಅಷ್ಟು ಸಲೀಸಾಗಿ ಎಲ್ಲವನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳದ ದಕ್ಷ ಐಪಿಎಸ್ ಅಧಿಕಾರಿ ಅಹಾದ್ ಅವರಿಗೂ ಈಗಾಗಲೇ ಶಿವಪ್ರಕಾಶ್ ವಿರುದ್ಧದ ಆಪಾದನೆಗಳು ಕಿವಿಗೆ ಬಿದ್ದಿವೆ.

ಅನ್ಯಾಯ ನಡೆದಿರುವುದರ ಬಗ್ಗೆ ಮರುತನಿಖೆಗೂ ಅವರು ಆದೇಶಿಸಿದ್ದಾರೆ ನ್ನಲಾಗುತ್ತಿದೆ. ಶಿವಪ್ರಕಾಶ್ ವಿರುದ್ಧದ ಆಪಾದನೆಗಳು,ಅವರ ವಿರುದ್ಧದ ದೂರುಗಳ ಸಮಗ್ರ ಮಾಹಿತಿಯನ್ನೂ ತರಿಸಿಕೊಂಡಿದ್ದಾರಂತೆ. ಅಮಾಯಕ ಸಿಬ್ಬಂದಿಯ ಆತ್ಮಹತ್ಯೆ ಪ್ರಕರಣ ಹಾಗೂ ಕೆಳ ಹಂತದ ಸಿಬ್ಬಂದಿಗೆ ಅಮಾನವೀಯವಾದ ರೀತಿಯಲ್ಲಿ ಹಲ್ಲೆ ನಡೆಸಿರುವ ಪ್ರಕರಣಗಳ ತನಿಖೆಯನ್ನು ಅಹಾದ್ ಅವರು ಪುನರ್ ಆರಂಭಿಸಬೇಕಿದೆ.ಆಗ ಮಾತ್ರ ಶಿವಪ್ರಕಾಶ್ ಅವರ ಅಸಲೀಯತ್ತು ಹೊರ ಜಗತ್ತಿಗೆ ತಿಳಿಯಲು ಸಾಧ್ಯ..? ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕಿದೆ ಅಷ್ಟೆ..

ಶಿವಪ್ರಕಾಶ್ ಅವರಿಗೆ ಪರಿಶಿಷ್ಟ ಸಮುದಾಯದ ಕಾರ್ಮಿಕ ಸಿಬ್ಬಂದಿ ಕಂಡರೆ ಅದೇನೋ ಕೆಂಡದಂಥ ಕೋಪ ಎನ್ನುವ ಮಾತಿದೆ.ಅವರು ಮೆಜೆಸ್ಟಿಕ್ ನಲ್ಲಿ ಕೆಲಸ ಮಾಡುವಾಗಲೂ ನಿಮ್ನ ಸಮುದಾಯದ ಸಿಬ್ಬಂದಿಯೋರ್ವನನ್ನು ಅಪಮಾನಿಸಿದ್ದರಂತೆ.ಹಾಗೆಯೇ ಮೈಸೂರು ರಸ್ತೆಯ ಸ್ಯಾಟಲೈಟ್ ನಿಲ್ದಾಣದಲ್ಲಿ ಇದ್ದಾಗಲೂ ತಮ್ಮ ಆಟಾಟೋಪ ಮುಂದುವರೆಸಿದ್ದರೆನ್ನುವ ಗಂಭೀರ ಆಪಾದನೆಗಳಿವೆ.ಇದೆಲ್ಲವನ್ನು ಕಾರ್ಮಿಕ ಸಂಘಟನೆಗಳು ಸಾರಿಗೆ ಸಚಿವರ ಗಮನಕ್ಕೆ ತರಲು ನಿರ್ದರಿಸಿವೆಯಂತೆ. ಓರ್ವ ಅಧಿಕಾರಿಯಾಗಿ ಶಿವಪ್ರಕಾಶ್ ಅವರಿಗೆ ಸಿಬ್ಬಂದಿಯೊಂದಿಗೆ ಹೇಗೆ ನಡೆದುಕೊಳ್ಳಬೇಕೆನ್ನುವ ಸಾಮಾನ್ಯ ಜ್ನಾನ ಇಲ್ಲದೇ ಹೋಯ್ತಲ್ಲ ಎನ್ನುವುದೇ ದೌರ್ಭಾಗ್ಯ ಪೂರ್ಣ.ಇಷ್ಟರಲ್ಲಾ ಆರೋಪಗಳಿದ್ದ ಹೊರತಾಗ್ಯೂ ಅವರಿಗೆ ಭಡ್ತಿ ಕೊಟ್ಟು ಆಯಕಟ್ಟಿನ ಸ್ಥಳದಲ್ಲಿ ನಿಯೋಜನೆ ಮಾಡಲಾಗ್ತದೆ ಎಂದರೆ ಇದಕ್ಕೆ ಏನನ್ನಬೇಕೋ ಗೊತ್ತಾಗ್ತಿಲ್ಲ.

(ಗಮನಿಸಿ… ಅಂದ್ಹಾಗೆ  ಸಾಕಷ್ಟು ಆಪಾದನೆ ಹೊತ್ತಿರುವ ಶಿವಪ್ರಕಾಶ್, ತಾಂತ್ರಿಕವಾಗಿಯೂ ನಿಜಕ್ಕೂ ಉನ್ನತ ಹುದ್ದೆಗೆ ಅರ್ಹರಾ..?ನಿಯಮಬದ್ದವಾಗಿ ಅವರು ಉನ್ನತ ಹುದ್ದೆಗೆ ನಿಯೋಜನೆಗೊಂಡಿದ್ದಾರಾ..? ಅಥವಾ ವಾಮಮಾರ್ಗಗಳ ಮೂಲಕ ಹುದ್ದೆಯನ್ನು ಅಲಂಕರಿಸಿದ್ದಾರಾ..? ನಿಯಮಗಳು ಏನನ್ನುತ್ತವೆ.. ದಾಖಲೆಗಳು ಏನನ್ನು ಹೇಳುತ್ತವೆ ಎನ್ನುವುದರ ಕಂಪ್ಲೀಟ್ ವಿವರ ಮುಂದಿನ ದಿನಗಳಲ್ಲಿ ಪ್ರಕಟವಾಗಲಿದೆ..ದಾಖಲೆ ಕ್ರೋಢೀಕರಣ ನಡೆಯುತ್ತಿದೆ)


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button