BREAKING NEWSCINEMACITY

VETERAN ACTRESS LEELAVATHI HOSPITALISED..!ಹಿರಿಯ ನಟಿ ಲೀಲಾವತಿ ಸ್ಥಿತಿ ಗಂಭೀರ.!

Share

ಕನ್ನಡದ ಹಿರಿಯ  ನಟಿ, ಪೊಷಕ ಕಲಾವಿದೆ ಡಾ.ಲೀಲಾವತಿ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದ ಹಿನ್ನಲೆಯಲ್ಲಿ ಅವರನ್ನು ನೆಲಮಂಗಲ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನೆಲಮಂಗಲದ ಸೋಲದೇವನಹಳ್ಳಿ ಮನೆಯಲ್ಲಿ ವ್ಯವಸ್ಥಿತವಾದ ಎಲ್ಲಾ ವ್ಯವಸ್ಥೆಗಳಾಗಿದ್ದ ಹೊರತಾಗ್ಯು ಲೀಲಾವತಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.ವೈದ್ಯರು ಸಹ ರಿಸ್ಕ್‌ ತೆಗೆದುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ತತ್‌ ಕ್ಷಣಕ್ಕೆ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ರು.ಅವರ ಸಲಹೆ ಮೇರೆಗೆ ಅವರನ್ನು ನೆಲಮಂಗಲದ ಆಸ್ಪತ್ರೆಗೆ ದಾಖಲಿಸಲಾಯಿತು.

ಮಗ ಹಾಗೂ ನಟ ವಿನೋದ್‌ ರಾಜ್‌ ಅವರು ಅಮ್ಮನನ್ನು ಅಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಚಿಕಿತ್ಸೆ ನೀಡುವಲ್ಲಿ ನಿರತವಾಗಿದ್ದಾರೆ.ತೀವ್ರ ನಿಗಾಘಟಕದಲ್ಲಿರುವ ಅಮ್ಮನ ಆರೋಗ್ಯದ ಬಗ್ಗೆ ವೈದ್ಯರು ಇನ್ನು ಯಾವುದೇ ಸ್ಪಷ್ಟ ಹೇಳಿಕೆ ನೀಡಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.

85 ವರ್ಷದ ಲೀಲಾವತಿ ಅವರ ಆರೋಗ್ಯ ಅನೇಕ ದಿನಗಳಿಂದ ಏರುಪೇರಾಗಿದೆ.ಅವರ ಆರೈಕೆಯಲ್ಲಿ ಮಗ ವಿನೋದ್‌ ರಾಜ್ ತೊಡಗಿದ್ದು ಮನೆಯಲ್ಲೇ ಮಿನಿ ಆಸ್ಪತ್ರೆ ತರಹದ ವ್ಯವಸ್ಥೆಯನ್ನು ಮಾಡಿದ್ದಾರೆ.ಇಷ್ಟು ದಿನ ಮನೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದ ಲೀಲಾವತಿ ಅವರ ಆರೋಗ್ಯ ಸಂಜೆ ಮೇಲೆ ಏರುಪೇರಾಗಿದೆ.ತತ್‌ ಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಡೀ ಕರ್ನಾಟಕ ಲೀಲಾವತಿ ಅವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸಲಾರಂಭಿಸಿದೆ.ಕನ್ನಡ ಫ್ಲ್ಯಾಶ್‌ ನ್ಯೂಸ್‌ ತಂಡ ಕೂಡ ಅಮ್ಮನವರ ಚೇತರಿಕಗೆೆ ಪ್ರಾರ್ಥಿಸುತ್ತದೆ.

 


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button