BREAKING NEWSEXCLUSIVE NEWSKANNADAFLASHNEWSSPECIALSTORIES

EDUCATION EXCLUSIVE….PU ಶಿಕ್ಷಣ ಇಲಾಖೆಯಲ್ಲಿ, ನಿರ್ದೇಶಕರನ್ನೇ “ದಾರಿ” ತಪ್ಪಿಸುವ, ತಪ್ಪೆಸಗುವಂತೆ ಪ್ರಚೋದಿಸುವ “ಹಿತಾಸಕ್ತಿ”ಗಳಿವೆಯಾ..?!

Share

ನಿಜಕ್ಕೂ ದುರ್ಬಳಕೆ ಆಗುತ್ತಿದೆಯಾ..? ದಕ್ಷ-ಪ್ರಾಮಾಣಿಕ IAS ಅಧಿಕಾರಿ ಸಿಂಧೂ B ರೂಪೇಶ್ ಅವರ “ಒಳ್ಳೆಯತನ”…?!

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಲ್ಲೇಶ್ವರಂ 18ನೇ ತಿರುವಿನಲ್ಲಿರುವ  ಪದವಿ ಪೂರ್ವ ಶಿಕ್ಷಣ ಇಲಾಖೆ(DEPARTMENT OF SCHOOL EDUCATION-PRE UNIVERSITY) ಗೆ  ಶೈಕ್ಷಣಿಕವಾಗಿ ತನ್ನದೇ ಆದ ಹಿನ್ನಲೆಯಿದೆ.ಭವ್ಯ ಇತಿಹಾಸವಿದೆ. ನಿರ್ದೇಶಕರಾಗಿ ಬರುವ ಅಧಿಕಾರಿಗಳು ತಮ್ಮದೇ ಕನಸು-ಆಶಯ-ನಿರೀಕ್ಷೆಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಲೇ ಬಂದಿದ್ದಾರೆ.ಶೈಕ್ಷಣಿಕವಾಗಿ ಅನುಕೂಲವಾಗಬಲ್ಲ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಸಹಕಾರಿಯಾಗಬಲ್ಲ  ಒಂದಷ್ಟು ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾರೆ.ಅದೇ ನಿಟ್ಟಿನಲ್ಲಿ ಈಗಿನ ನಿರ್ದೇಶಕರ ಪ್ರಯತ್ನ ಮುಂದುವರೆದಿದ್ದರೂ ಅವರನ್ನು ಮಿಸ್ ಲೀಡ್( ದಾರಿ ತಪ್ಪಿಸುವ) ಮಾಡುವ ದುಸ್ಸಾಹಸ ಇಲಾಖೆಯಲ್ಲಿರುವ ಕೆಲವರಿಂದ ಆಗುತ್ತಿದೆ ಎನ್ನುವುದೇ ದುರಾದೃಷ್ಟಕರ..ಇದನ್ನು ಕನ್ನಡ ಫ್ಲ್ಯಾಶ್ ನ್ಯೂಸ್ (KANNADAFLASHNEWS)ಗೆ ಅದೇ ಕಟ್ಟಡದಲ್ಲಿ ಕೆಲಸ ಮಾಡುತ್ತಿರುವ ಸಾಕಷ್ಟು ಮಂದಿ ತುಂಬಾ ಬೇಸರದಿಂದ ಹೇಳಿಕೊಂಡಿದ್ದಾರೆ ಕೂಡ.

ಪಿಯು ಬೋರ್ಡ್ ನಿರ್ದೇಶಕಿ ಸಿಂಧೂ ಬಿ. ರೂಪೇಶ್
ಪಿಯು ಬೋರ್ಡ್ ನಿರ್ದೇಶಕಿ ಸಿಂಧೂ ಬಿ. ರೂಪೇಶ್

ಮೊದಲೇ ಹೇಳಿದಂತೆ ಪಿಯು ನಿರ್ದೇಶಕ(DIRECTOR)ರಾಗಿ ಬಂದ ಮೇಲೆ ಐಎಎಸ್ (IAS)ಅಧಿಕಾರಿ ಸಿಂಧು ಬಿ ರೂಪೇಶ್(SINDHU B ROOPESH) ಸಾಕಷ್ಟು ಒಳ್ಳೆಯ ಕೆಲಸ ಗಳನ್ನು ಮಾಡುತ್ತಿದ್ದಾರೆ..ಅದರಲ್ಲಿ ಯಾವುದೇ ಅನುಮಾನವಾಗಲಿ, ಆಕ್ಷೇಪವಾಗಲಿ ಇಲ್ಲ..ಶೈಕ್ಷಣಿಕವಾಗಿ ಕ್ರಾಂತಿಕಾರಿ ಎನ್ನುವಂತ ದಿಟ್ಟ ನಿರ್ದಾರ ಕೈಗೊಂಡಿದ್ದಾರೆ. ಅದರಿಂದ ಇಲಾಖೆಗಷ್ಟೇ ಅಲ್ಲ ವಿದ್ಯಾರ್ಥಿಗಳಿಗೂ ಶೈಕ್ಷಣಿಕವಾಗಿ ಅನುಕೂಲವಾಗಿದೆ.ಅವರ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಗೂ ಅಪಾರ ಗೌರವ-ಅಭಿಮಾನವಿದೆ.ಅವರಿಂದ ಇನ್ನೂ  ಇಂಥಾ ನೂರು ಒಳ್ಳೆಯ ಕೆಲಸಗಳಾಗಲಿ ಎನ್ನುವುದು ನಮ್ಮ ಆಶಯವಷ್ಟೇ ಅಲ್ಲ ಅದನ್ನು ಬೆಂಬಲಿಸುತ್ತೇವೆ ಕೂಡ.

ಇರುವಷ್ಟು ದಿನ ಉತ್ತಮವಾದ ರೀತಿಯಲ್ಲಿ ಕೆಲಸ ಮಾಡಬೇಕೆನ್ನುವ ನೂರು ಕನಸು-ನಿರೀಕ್ಷೆ ಇಟ್ಟುಕೊಂಡಿರುವ ಶ್ರೀಮತಿ. ಸಿಂಧೂ ಅವರ ದಿಕ್ಕುತಪ್ಪಿಸುವ ಕೆಲಸ ಕೆಲವರಿಂದ ಆಗುತ್ತಿದೆ ಎನ್ನುವ ಮಾತಿದೆ.ಅದು ಅವರ ಅಧೀನದಲ್ಲಿ ಕೆಲಸ ಮಾಡು ತ್ತಿರುವ ಅಧಿಕಾರಿಗಳಿಂದಲೇ ಎನ್ನುವುದು ದುರಾ ದೃಷ್ಟಕರ.ಸಿಂಧೂ ಅವರು ಏನೇ ಒಂದು ಒಳ್ಳೆಯ ಕೆಲಸ ಮಾಡಲು ಮುಂದಾದರೂ ಅದಕ್ಕೆ ಕೊಕ್ಕೆ ಹಾಕಿ ಅವರಿಂದ ತಪ್ಪುಗಳಾಗುವಂತೆ ಮಾಡುವ ದುಸ್ಸಾಹಸ ನಡೆಯುತ್ತಿದೆ ಎನ್ನುವ ಆಪಾದನೆ ಕೇಳಿಬಂದಿದೆ.

ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರೂ ಗಮನ ಹರಿಸಬೇಕಿದೆ.

ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್
ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್

ಪಿಯು ಶಿಕ್ಷಣ ಇಲಾಖೆಯಲ್ಲಿ ಕೆಲವರಿಂದಾಗಿ ವ್ಯವಸ್ಥೆ ಹಾಳಾ ಗು ತ್ತಿರುವ ಬಗ್ಗೆ ದಂಡಿ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಕನ್ನಡ ಫ್ಲ್ಯಾಶ್ ನ್ಯೂಸ್ ಸರಣಿ ವರದಿಗಳನ್ನು ಸ್ಪೋಟಿಸುವ ನಿರ್ದಾರಕ್ಕೆ ಬಂದಿದೆ.ಇದರ ಭಾಗವಾಗೇ ಮೊದಲ ವರದಿಯ ನ್ನು ಪ್ರಕಟಿಸುತ್ತಿದೆ. ತಾವು ಬಂದ ಮೇಲೆ ಇಲಾಖೆ ಯಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳಾಗಿವೆ.. ಆಗುತ್ತಿವೆ ಎನ್ನುವುದು ಸ್ವಾಗತಾರ್ಹ. ಇದರ ಜತೆಗೆ ಮಲ್ಲೇಶ್ವರಂ ಕಚೇರಿಯಲ್ಲಿ ನಡೆಯುತ್ತಿರುವ ಕೆಲವು ಅಪಾಯಕಾರಿ ಹಾಗೂ ಅಹಿತಕರ ಮತ್ತು ಆತಂಕಕಾರಿ ಬೆಳವಣಿ ಗೆಗಳ ಬಗ್ಗೆಯೂ ಗಮನ ಹರಿಸುವುದು ಸೂಕ್ತ ಎನಿಸುತ್ತದೆ. ಉತ್ತಮ ಅಧಿಕಾ ರಿಯಾಗಿರುವ ನಿರ್ದೇಶಕಿ ಸಿಂಧೂ ಅವರ ಹೆಸರು ಹಾಗೂ ಒಳ್ಳೆಯತನವನ್ನು ದುರ್ಬಳಕೆ ಮಾಡಿ ಕೊಳ್ಳುವ ಕೆಲಸ ಅಲ್ಲಿರುವ ಕೆಲವರಿಂದ ನಡೆಯುತ್ತಿದೆ ಎನ್ನುವ ಆಪಾದನೆ ತಮ್ಮ ಕಚೇರಿವರೆಗೂ ಬಂದಿದೆಯೋ ಇಲ್ಲವೋ ಗೊತ್ತಿಲ್ಲ.ಆದರೆ ಕನ್ನಡ ಫ್ಲ್ಯಾಶ್ ನ್ಯೂಸ್ ಗಿರುವ ಮಾಹಿತಿಯಂತೆ.ಅಲ್ಲಿರುವ ಕೆಲವು  ಅಧಿಕಾರಿಗಳ ಕಾರ್ಯವೈಫಲ್ಯ-ಅಕ್ರಮ-ಭ್ರಷ್ಟಾಚಾರದ ಬಗ್ಗೆ  ತಮ್ಮ ಕಚೇರಿಗೂ ದೂರುಗಳು ಬಂದಿವೆಯಂತೆ.ಆದರೆ ಅವುಗಳ ವಿರುದ್ಧ ಏಕೆ ಕ್ರಮ ಆಗಿಲ್ಲ ಎನ್ನುವುದು ಆಶ್ಚರ್ಯ ಮೂಡಿಸಿದೆ.

ಐಎಎಸ್ ಅಧಿಕಾರಿಯಾದ್ರೂ ಅವರಿಗಿಂತ ಇಲಾಖೆಯಲ್ಲಿ ಸಾಕಷ್ಟು ವರ್ಷಗಳಿಂದ ಕೆಲಸ ಮಾಡುತ್ತಿರುವ ಅನುಭವವನ್ನೇ ಅಸ್ತ್ರವಾಗಿಸಿಕೊಂಡು ಇಲ್ಲಸಲ್ಲದ ನಿಯಮಗಳನ್ನು ಪ್ರಸ್ತಾಪಿಸಿ ಅವರು ಮಾಡಲು ಹೊರಟಿರುವ ಕೆಲಸಕ್ಕೆ ತಡೆ ಒಡ್ಡುವ,ಅವರಿಂದ ಪ್ರಮಾದ, ಯಡವಟ್ಟುಗಳಾಗುವಂತೆ ಮಾಡುವ  ಹಿತಾಸಕ್ತಿಗಳು ಅವರನ್ನು ಸುತ್ತುವರೆದಿದೆ ಎನ್ನುವುದು ದೌರ್ಭಾಗ್ಯಪೂರ್ಣ. ಸಿಂಧೂ ಅವರಂಥ ಪ್ರಾಮಾಣಿಕ,ದಕ್ಷ ಐಎಎಸ್ ಗಳು ಅಂಥ ಹಿತಾಸಕ್ತಿಗಳಿಂದ ದೂರವಿದ್ದರೆ ಅವರಿಗೇನೇ ಕ್ಷೇಮ ಎಂದೆನಿಸುತ್ತದೆ.

ಶಿಕ್ಷಣ ಎನ್ನುವುದು ರಾಜಧಾನಿ ಮಟ್ಟಿಗೆ ವ್ಯಾಪಾರೀಕರಣವಾಗ್ಹೋಗಿದೆ.ಇದು ಸಿಂಧೂ ಅವರಿಗೂ ಗೊತ್ತಿದೆ.ಏಕೆಂದರೆ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಪಿಯು ಕಾಲೇಜ್ ಗಳ ಆರಂಭಕ್ಕೆ ಅನುಮತಿ ಕೋರಿ ಸಾಕಷ್ಟು ಕಡತಗಳು ನಿತ್ಯವೂ ಅವರ ಮೇಜಿನ ಮೇಲೆ ಬಂದು ಬೀಳುತ್ತಲೇ ಇರುತ್ತವೆ.ಅದರ ಜತೆಗೆ ದೊಡ್ಡವರ  ಶಿಫಾರಸ್ಸು ಬೇರೆ. ಪ್ರಭಾವಿಗಳು ಯಾರೇ ಆಗಲಿ..ಅವರು ಎಷ್ಟೇ ದೊಡ್ಡವರಿರಲಿ ನಿಯಮಗಳನ್ನು ಬಿಟ್ಟು ಕೆಲಸ ಮಾಡಲು ಆಗೊಲ್ಲ ಎಂದು ನಿರ್ದೇಶಕರಾದ ಸಿಂಧೂ ಅವರು ಸಾರಾಸಗಟಾಗಿ ತಿರಸ್ಕರಿಸುವ ಕೆಲಸ ಮಾಡುತ್ತಿದ್ದಾರೆನ್ನುವುದು ಸಂತೋಷ ಹಾಗೂ ಸ್ವಾಗತಾರ್ಹ ಸಂಗತಿ. ಏಕೆಂದರೆ ಯಾರದೇ ಒತ್ತಡ ಬಂದ್ರೂ ಅದ್ಯಾವುದಕ್ಕೂ ಸೊಪ್ಪಾಕದೆ ಎಷ್ಟೋ ಅಕ್ರಮ-ಅನಧೀಕೃತ( ILLEGAL COLLEGES)  ಕಾಲೇಜುಗಳ ಆರಂಭ ಕ್ಕೆ ಅನುಮತಿ ಕೋರಿ ಬಂದ ಪ್ರಸ್ತಾವನೆಗಳನ್ನು ತಳ್ಳಿ ಹಾಕಿದ್ದಾರೆ..ಇವತ್ತಿಗೂ ಆ ಕೆಲಸ ಮಾಡುತ್ತಲೇ ಇದ್ದಾರೆನ್ನುವುದು ಅವರ ದಕ್ಷತೆ-ಪ್ರಾಮಾಣಿಕತೆ ಹಾಗೂ ಬದ್ಧತೆಗೆ ನಿದರ್ಶನದಂತಿದೆ.

” ಸಿಂಧೂ ಮೇಡಮ್ ತುಂಬಾ ಒಳ್ಳೆಯವರು..ಆದ್ರೆ ಅವರನ್ನು ದಿಕ್ಕು ತಪ್ಪಿಸಲಾಗು ತ್ತಿದೆ”

ಇಡೀ ಪಿಯು ಬೋರ್ಡ್ ನಲ್ಲಿ ಕೇಳಿಬರುತ್ತಿರುವ ಮಾತು ಇದೊಂದೇ.. ಸಿಂಧೂ ಮೇಡಮ್ ಅವರು ತುಂಬಾ ಒಳ್ಳೆಯವರು,,ಸಂಭಾವಿತರು..ಒಳ್ಳೆಯ ಅಧಿಕಾರಿ ಕೂಡ.ಅವರು ಬಂದ ಮೇಲೆ ಸಾಕಷ್ಟು ಬದಲಾವಣೆಗಳಾಗಿವೆ.ಅವರ ಬಗ್ಗೆ ಸುಳ್ಳು ಹೇಳಿದರೆ ನಮಗೆ ಒಳ್ಳೆಯದಾ ಗುವುದಿಲ್ಲ.ದೇವರಂಥ ಮೇಡಮ್ ಅವರನ್ನು ಅವರ ಕೆಳಗಿರುವ, ಅವರೊಂದಿಗೆ ಆತ್ಮೀಯ ವಾಗಿರುವ ಕೆಲ ಅಧಿಕಾರಿಗಳು ಮಿಸ್ಯೂಸ್ ಮಾಡಿಕೊಂಡಿರುವುದು ಮಾತ್ರ ಬೇಸರದ ವಿಚಾರ.ಅವರಿಗೆ ಹತ್ತಿರವಾಗಿರುವ ಆ ಅಧಿಕಾರಿ-ನೌಕರರು ಸರಿಯಿಲ್ಲ ಎನ್ನುವುದು ಅವರಿಗೆ ಮನವರಿಕೆ ಆಗುತ್ತಿಲ್ಲವಲ್ಲ ಎನ್ನುವುದೇ ಬೇಸರ.ಮೇಡಮ್ ತಪ್ಪು ಮಾಡುವುದಿಲ್ಲ ಎನ್ನುವ ನಂಬಿಕೆ ನಮಗಿದೆ.ಆದ್ರೆ ಅವರ ಆಜುಬಾಜಿನಲ್ಲಿರುವ ಆ ಅಧಿಕಾರಿ-ನೌಕರರೇ ಮೇಡಮ್ ಅವರಿಂದ ಯಡವಟ್ಟಾಗುವಂತೆ ಮಾಡಿಬಿಟ್ಟರೆ..ಏನ್ ಗತಿ ಎನ್ನುವುದು ನಮ್ಮ ಆತಂಕವಷ್ಟೆ..ಅಂಥವರನ್ನು ದೂರವಿಟ್ಟು ಕೆಲಸ ಮಾಡಿದ್ರೆ ಏನೂ ಸಮಸ್ಯೆಗಳೇ ಇರೋದಿಲ್ಲ.. ಮೇಡಮ್ ಅವರಿಂದ ಅಂತದ್ದಾಗಬೇಕೆನ್ನುವುದು ನಮ್ಮ ಆಶಯ ಎನ್ನುತ್ತಾರೆ ಪಿಯು ಇಲಾಖೆಯ ನೌಕರರು

ಇಲಾಖೆಯ ನಿರ್ದೇಶಕರಾಗಿ ಶ್ರೀಮತಿ ಸಿಂಧೂ ಅವರು ಅಕ್ರಮ-ಅನಧೀಕೃತ ಕಾಲೇಜುಗಳಿಗೆ ಕಡಿವಾಣ ಹಾಕುವ ಕೆಲಸ ಮಾಡುತ್ತಿದ್ದರೆ,ಅವರಿಗೆ ಸಹಕಾರ ನೀಡುವ ಕೆಲಸವನ್ನು ಮಾಡಬೇಕಾದ ಕೆಳಹಂತದ ಕೆಲವು ಅಧಿಕಾರಿ-ನೌಕರರು ಅಸಹಕಾರ ನೀಡುತ್ತಿರುವ ಬಗ್ಗೆ ದಂಡಿ ದೂರುಗಳಿವೆ.ಸಿಂಧೂ ಅವರು ಶೈಕ್ಷಣಿಕವಾಗಿ ಉತ್ತಮ ಕೆಲಸ ಮಾಡುತ್ತಿದ್ದರೆ,ಅದಕ್ಕೆ ಕೊಕ್ಕೆ ಹಾಕಿ ಅವರನ್ನು ಡೈವರ್ಟ್ ಮಾಡುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆನ್ನುವ ಬಗ್ಗೆ ಸಾಕಷ್ಟು ಆರೋಪಗಳ ಹಿನ್ನಲೆಯಲ್ಲಿನ ದೂರುಗಳು ಸಚಿವರಾದ ಮಧು ಬಂಗಾರಪ್ಪ,ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರವರೆಗೂ ಹೋಗಿದೆಯಂತೆ.

ಇಲಾಖೆಯ ಮಾನದಂಡವನ್ನು ಸಾರಾಸಗಟಾಗಿ ಉಲ್ಲಂಘಿಸಿ ಶೈಕ್ಷಣಿಕವಾಗಿ ಕಾರ್ಯಾಚರಣೆ ಮಾಡಲು ಉದ್ದೇಶಿಸಿರುವ ಅದೆಷ್ಟೋ ಸಂಸ್ಥೆಗಳ ವಿರುದ್ಧ ನಿರ್ದೇಶಕರಾದ ಸಿಂಧೂ ಅವರು ನೇರವಾಗಿ ಸಮರ ಸಾರಿದ್ದರೆ ಅವರ ಅಧೀನದಲ್ಲಿ ಕೆಲಸ ಮಾಡುತ್ತಿರುವ “ಆ ಕೆಲವರು” ಸಂಸ್ಥೆಗಳ ಜತೆ ಶಾಮೀಲಾಗಿ ಅಂಥಾ ಅಕ್ರಮ ಕಾಲೇಜುಗಳಿಗೆ ಅನುಮತಿ ನೀಡುವಂತೆ  ಪ್ರಚೋದಿಸುವ, ಅವರನ್ನು ಮನವೊಲಿಸುವ,ಅವರ ಮೇಲೆ ಒತ್ತಡ ತರುವ,ಅವರಿಗೆ ನಾನಾ ರೀತಿಯಲ್ಲಿ ಆಮಿಷ-ಪ್ರಲೋ ಭನೆ ಒಡ್ಡುವ ಕೆಲಸ ಮಾಡುತ್ತಿದ್ದಾರೆನ್ನುವುದು ಅದೇ ಕಟ್ಟಡದಲ್ಲಿ ಕೆಲಸ ಮಾಡುತ್ತಿರುವ ಕೆಲವು ಪ್ರಾಮಾಣಿಕರ ದೂರು.

“ಪಿಯು ಬೋರ್ಡ್ ನಲ್ಲಿರುವ ಕೆಲವರೇ ಮೇಡಮ್ ಗೆ ಅಡ್ಡಗಾಲು ಹಾಕುತ್ತಿದ್ದಾರೆ”

ನಿರ್ದೇಶಕರ ಕಾರ್ಯವೈಖರಿ ಬಗ್ಗೆ ನಮಗೆ ತೃಪ್ತಿಯಿದೆ. ನಾವು ಹಾಕಿದ ದೂರಿನ ಹಿನ್ನಲೆಯಲ್ಲಿ ಸಾಕಷ್ಟು ಕೆಲಸಗಳೂ ಆಗಿವೆ.ಅಕ್ರಮ ಕಾಲೇಜ್ ಗಳಿಗೆ ಅನುಮತಿ ಕೊಡಲು ಮಾಡಲಾಗಿದ್ದ ಸಂಚಿಗೆ ಮೇಡಮ್ ಅವರು ಫುಲ್ ಸ್ಟಾಪ್ ಹಾಕಿದ್ರು.ಇನ್ನೊಂದಷ್ಟು ಅನಧೀಕೃತ ಕಾಲೇಜ್ ಗಳ ವಿಚಾರದಲ್ಲೂ ಮೇಡಮ್ ಅವರು ಕಠಿಣವಾದ ನಿರ್ದಾರ ಕೈಗೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಇದೆಲ್ಲಾ ಸರಿ,ಆದರೆ ಮೇಡಮ್ ಅವರನ್ನು ನಿಯಂತ್ರಿಸು ವ,ದಾರಿತಪ್ಪಿಸುವ ಕೆಲವು ಹಿತಾಸಕ್ತಿಗಳು ಅವರ ಹಿಂದೆ ಮುಂದೆ,ಸುತ್ತಮುತ್ತ ಪ್ರದಕ್ಷಿಣೆ ಹಾಕುತ್ತಲೇ ಇವೆ.ಅವುಗ ಳಿಂದ ದೂರ ಇರಬೇಕೆನ್ನುವುದು ನಮ್ಮ ಆಶಯ. ಮೇಡ ಮ್ ಅವರನ್ನು ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿರುವ ಆ ಅಧಿಕಾರಿಗಳ ಅಕ್ರಮದ ದಂಡಿ ದೂರುಗಳು ನಮ್ಮ ಬಳಿ ಇವೆ.ಅದನ್ನು ಶೀಘ್ರದಲ್ಲೇ ಬಯಲು ಮಾಡುತ್ತೇವೆ. ಮೇಡ ಮ್ ಅವರಲ್ಲಿ ನಮ್ಮ ಮನವಿ ಇಷ್ಟೇ  ನಿಮ್ಮನ್ನು ದಾರಿತಪ್ಪಿಸಲು ಹವಣಿಸುತ್ತಿರುವವರಿಂದ ದೂರ ಇರಿ..-ಗಂಗಾಧರ್-ಪಾಠಶಾಲೆ,ಶೈಕ್ಷಣಿಕ ಹೋರಾಟ ಟ್ರಸ್ಟ್ ನ ಸಂಚಾಲಕರು

ಮೇಡಮ್ ಅವರನ್ನು ಬೇರೆ ಇಲಾಖೆಯಿಂದ ಇಲ್ಲಿಗೆ ಕರೆತಂದಿದ್ದು ನಾನೇ ಎನ್ನುವ ರೇಂಜ್ ನಲ್ಲಿ ಅಧಿಕಾರಿಯೊಬ್ಬರು ಮಾತನಾಡಿಕೊಂಡು ಅಡ್ಡಾಡುತ್ತಿದ್ದಾರೆನ್ನುವ ಮಾತಿದೆ.ಅಷ್ಟೇ ಅಲ್ಲ ಮೇಡಮ್ ಅವರು ನಾನು ಹೇಳಿದ ಮಾತನ್ನು ಮೀರುವುದಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರಂತೆ. ನಿರ್ದೇಶಕರನ್ನೇ ಜೇಬಿನಲ್ಲಿಟ್ಟುಕೊಂಡಿದ್ದೇನೆ..ನಾನು ಹೇಳಿದ್ದೇ ಫೈನಲ್ ಎಂದು ಹೇಳಿಕೊಂಡು ಲಾಭ ಮಾಡಿಕೊಳ್ಳುತ್ತಿರುವ ಆ ಅಧಿಕಾರಿಯ ಮಾತನ್ನು ಸಿಂಧೂ ಅವರು ಎಷ್ಟೆರ ಮಟ್ಟಿಗೆ ಕೇಳುತ್ತಾರೆ.ಅದನ್ನು ಪಾಲಿಸುತ್ತಾರೆನ್ನುವುದು ಅವರ ವಿವೇಚನೆಗೆ ಬಿಟ್ಟಿದ್ದು.

ಆದ್ರೆ ಆ ಅಧಿಕಾರಿ ಸಿಂಧೂ ಅವರನ್ನು ಬಿಟ್ಟುಬಿಡದೆ ನಕ್ಷತ್ರಿಕನಂತೆ ಕಾಡುತ್ತಾರೆನ್ನುವ ಮಾತಿದೆ. ಮೇಡಮ್ ಏನೇ ಹೇಳಿಕೆ ನೀಡುವುದಿದ್ದರೂ..ಏನೇ ನಿರ್ದಾರ ತೆಗೆದುಕೊಳ್ಳುವುದಿದ್ದರೂ ಆ ಅಧಿಕಾರಿ ಯ ಸಲಹೆ-ಅಭಿಪ್ರಾಯವನ್ನೇ ಕೇಳುತ್ತಾರಂತೆ..ಇದನ್ನು ಆ ಅಧಿಕಾರಿಯೇ ಹೇಳಿಕೊಂಡಿದ್ದಾರಂತೆ. ಬಹಳಷ್ಟು ನೌಕರರು ಹೇಳುವಂತೆ ಆ ಅಧಿಕಾರಿ  ಬರುವವರೆಗೂ ಪಿಯು ಇಲಾಖೆ ಶಾಂತ ಕೊಳದಂತಿತ್ತು.ಆದ್ರೆ ಆ ಮಹಾನುಭಾವರು ಬಂದ ಮೇಲೆ ಇಡೀ ವ್ಯವಸ್ಥೆಯನ್ನೇ ಕುಲಗೆಡಿಸಿದರೆನ್ನುವ ಆಪಾದನೆಯಿದೆ.ಇಲಾಖೆಯ ಮಾನದಂಡಗಳನ್ನು ಸ್ವಲ್ಪವೂ ಹೆದರಿಕೆಯಿಲ್ಲದೆ ಗಾಳಿಗೆ ತೂರಿದ್ದಾರೆನ್ನಲಾಗುತ್ತಿರುವ ಅವರ ವಿರುದ್ಧ ನಿಯಮ ಮೀರಿ ಸಾಕಷ್ಟು ಕಾಲೇಜುಗಳಿಗೆ ಅನುಮತಿ ನೀಡಿಸಿರುವ ಆಪಾದನೆಯಿದೆ..ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಇದರ ಬಗ್ಗೆ ಸಾಕಷ್ಟು ಮಾಹಿತಿಗಳು ಕೂಡ ಲಭ್ಯವಾ್ಗಿದ್ದು,ಶೀಘ್ರವೇ ಸಾಕ್ಷ್ಯ ಸಮೇತ ಅದನ್ನು ಬಿಚ್ಚಿಡಲಿದೆ.

ಸ್ವಭಾವತಃ..ಕಾರ್ಯತಃ ಸಂಭಾವಿತರಾಗಿರುವ ನಿರ್ದೇಶಕಿ ಶ್ರೀಮತಿ ಸಿಂಧೂ ಅವರು ಮೊದಲೇ ಹೇಳಿದಂತೆ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ.ಅದು ಮುಂದುವರೆಯಬೇಕು.ಆದರೆ ಅವರನ್ನು ತನ್ನ ಕೈಗೊಂಬೆ ಮಾಡಿಕೊಂಡಿದ್ದೇನೆ.. ನಾನು ಹಾಕಿದ ಗೆರೆಯನ್ನು ದಾಟುವುದಿಲ್ಲ ಎಂದು ಹೇಳಿಕೊಂಡು ಅವರ ಬೇಳೆ ಬೇಯಿಸಿಕೊಳ್ಳುವ,ಲಾಭ ಮಾಡಿಕೊಳ್ಳುವ ಅಂಥಾ ಅಧಿಕಾರಿಗಳಿಂದ ಅಂತರ ಕಾಯ್ದುಕೊಳ್ಳುವುದು.ಸಾಧ್ಯವಾದ್ರೆ ಅಂಥವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದು ಸೂಕ್ತ ಎನಿಸುತ್ತದೆ.ಈ ವಿಷಯದಲ್ಲಿ ಸಿಂಧೂ ಅವರು ನಿರ್ಲಕ್ಷ್ಯ ವಹಿಸಿದರೆ ಆ ಅಧಿಕಾರಿಗಳು ಮಾಡಿದ ತಪ್ಪಿಗೆ ಇವರು ದಂಡ ತೆರಬೇಕಾದ ಸ್ಥಿತಿ ಬಂದೊದಗಬಹುದೇನೋ..? ಮಂಗ ತಿಂದು ಮೇಕೆ ಬಾಯಿಗೆ ಒರೆಸಿದಂತಾಗಬಾರದು ಎನ್ನುವುದಷ್ಟೆ ಕನ್ನಡ ಫ್ಲ್ಯಾಶ್ ನ್ಯೂಸ್ ನ ಆಶಯ.

ಕನ್ನಡ ಫ್ಲ್ಯಾಶ್ ನ್ಯೂಸ್ ನ ವರದಿಗೆ ಅಭೂತಪೂರ್ವ ಪ್ರತಿಕ್ರಿಯೆ

ಸುದ್ದಿಕ್ಷೇತ್ರದಲ್ಲಿ ಕ್ರಾಂತಿಕಾರಿ ಎನ್ನುವಂತ ಬೆಳವಣಿಗೆಗಳಿಗೆ ಕಾರಣವಾಗುವ ಸುದ್ದಿ ಗಳ ನ್ನು ಮಾಡುತ್ತಲೇ ಬಂದಿದೆ ಕನ್ನಡ ಫ್ಲ್ಯಾಶ್ ನ್ಯೂಸ್.ಇದರ ಮುಂದುವರೆದ ಭಾಗ ವಾಗಿ ಪಿಯು ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರಬಹುದಾದ ಅಕ್ರಮ-ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಇಲಾಖೆಯಲ್ಲಿರುವವರಿಂದಲೇ ಆರೋಪ-ದೂರು ಬಂದಂಥ ಹಿನ್ನಲೆ ಯಲ್ಲಿ ಸರಣಿ ವರದಿಗಳ ಮೂಲಕ ಅದನ್ನು ಸ್ಪೋಟಿಸುವ ತೀರ್ಮಾನಕ್ಕೆ ಬಂದಿದೆ. ಈ ಸಂಬಂಧ ಮಾಡಿದ ಸುದ್ದಿಗೆ ಅತ್ಯುತ್ತಮವಾದ ಪ್ರತಿಕ್ರಿಯೆ ಲಭ್ಯವಾಗಿದೆಯಲ್ಲದೆ ನಮ್ಮನ್ನು ಬೆನ್ತಟ್ಟುವ ಕೆಲಸವೂ ನಡೆದಿದೆ. ನೀವು ಸುದ್ದಿ ಮಾಡಿ, ಮಾಹಿತಿ ನಾವು ಕೊಡ್ತೇವೆ ಎಂದು ಹೇಳಿದವರು ನೂರಾರು ಮಂದಿ.ಅವರೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ನೊಂದವರು ಎನಿಸಿದ್ದು ಸತ್ಯ.ಕನ್ನಡ ಫ್ಲ್ಯಾಶ್ ನ್ಯೂಸ್ ನ ಆಶಯ-ಉದ್ದೇಶ ಯಾರನ್ನೂ ತೇಜೋವಧೆ ಮಾಡುವಂತದ್ದಲ್ಲ..ಇರುವುದನ್ನು ಇದ್ದಾಗೆಯೇ ಹೇಳಿ ವ್ಯವಸ್ಥೆಯಲ್ಲಿ ಬದಲಾವಣೆ-ಸುಧಾರಣೆ ತರುವುದಷ್ಟೇ..ಇಲಾಖೆಯನ್ನೇ ಮರೆತಂತಿರುವ ಸಚಿವ ಮಧು ಬಂಗಾರಪ್ಪ ಅವರನ್ನು ಗಾಢನಿದ್ರೆಯಿಂದ ಎಬ್ಬಿಸುವುದು..ಏಕೆಂದರೆ ಮನೆ ಯಜಮಾನ ಜಾಗೃತನಾದ್ರೆ ಮಾತ್ರ ಮನೆಯ ವ್ಯವಸ್ಥೆ ಸರಿಯಾಗುತ್ತದೆ ಎನ್ನುವುದು ನಮ್ಮ ನಂಬಿಕೆ..ಹಾಗಾಗಿ ಪಿಯು ಇಲಾಖೆಯಲ್ಲಿನ ಸರಣಿ ವರದಿಗಳ ಮೊದಲ ರಿಪೋರ್ಟ್ ಇದೋ ನಿಮ್ಮ ಮುಂದೆ..ನಿಮ್ಮ ಅಭಿಪ್ರಾಯ-ಸಲಹೆಗಳಿದ್ದಲ್ಲಿ ಪ್ರತಿಕ್ರಿಯಿಸಿ..ನಿಮ್ಮ ಹೆಸರು..ವಿಳಾಸ..ಮೊಬೈಲ್ ಸಂಖ್ಯೆಯನ್ನು ಗೌಪ್ಯವಾಗಿ ಇಡಲಾಗುವುದು,.ಧನ್ಯವಾದಗಳು..  


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button