BREAKING NEWSCITYDISTRICTEXCLUSIVE NEWSINVESTIGATION STORYPOLLUTION CONTROLE BOARD(PCB)SPECIALSTORIES

ಪರಿಸರಾಧಿಕಾರಿ ಶಿವಕುಮಾರ್‌ ಗೆ “ಕ್ಲೀನ್‌ ಚಿಟ್‌” ಕೊಡುವ “ಧಾವಂತ”ದಲ್ಲಿ ಘಟನೆ ಹಿಂದಿನ “ವಾಸ್ತವ”ವನ್ನೇ ಮರೆಮಾಚಲಾಯ್ತಾ..?!

Share

ಬೆಂಗಳೂರು:ಒಂದು ಗಂಭೀರ  ಪ್ರಕರಣದ ತನಿಖೆಯನ್ನು ಎಷ್ಟು ಜಾಳು..ಜಾಳಾಗಿ ಮಾಡಿ ಮುಗಿಸಬಹುದು.?..?! ಸತ್ಯವನ್ನು ಮರೆಮಾಚುವ ರೀತಿಯಲ್ಲಿ, ಸಾಕ್ಷ್ಯಗಳ ಕೊರತೆ ಎಂದು ನೆವ ನೀಡಿ ಅದಕ್ಕೆ ತಿಪ್ಪೆ ಸಾರಿಸುವ ರೀತಿಯಲ್ಲಿ ಸಮಾಧಿ ಮಾಡಬ ಹುದು ಎನ್ನುವುದಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ನಡೆದಿರುವ  ಪ್ರಕರಣದ ತನಿಖೆಯೇ ಸಾಕ್ಷಿಯಾಗಬಹು ದೇನೋ..?  ಆದ್ರೆ ತನಿಖೆಗೆಂದೇ ನಿಯೋಜನಗೊಂಡವರು ಕೊಟ್ಟ ವರದಿಯನ್ನೇ ಅಂತಿಮವಾಗಿ ನಂಬಿ ಕೂರುವಷ್ಟು ವ್ಯವಸ್ಥೆ ಹಾಗೂ ಸಮಾಜ ದುರ್ಬಲವಾಗಿಲ್ಲ ಎನ್ನೋದು ಕೂಡ ಸತ್ಯ..ಹಾಗಾಗಿನೇ ಕನ್ನಡ ಫ್ಲ್ಯಾಶ್‌ ನ್ಯೂಸ್‌, “ಕ್ಲೀನ್ ಚಿಟ್‌” ಕೊಟ್ಟಿ ರುವ ಪ್ರಕರಣದ ಬಗ್ಗೆ ಸಾರ್ವಜನಿಕರು ಎತ್ತಿರುವ  ಕೆಲವೊಂದು ಪ್ರಶ್ನೆಗಳನ್ನು ಮಂಡಳಿಯ ಮುಂದಿಟ್ಟು  ಸ್ಪಷ್ಟನೆ ಕೂಡ ಬಯಸುವ ಕೆಲಸ ಮಾಡುತ್ತಿದೆ.

ರಾಜರಾಜೇಶ್ವರಿ ನಗರ ವಲಯದ ಪರಿಸರಾಧಿಕಾರಿ ಶಿವಕುಮಾರ್
ರಾಜರಾಜೇಶ್ವರಿ ನಗರ ವಲಯದ ಪರಿಸರಾಧಿಕಾರಿ ಶಿವಕುಮಾರ್
ದೂರಿನ ಪ್ರತಿಯಲ್ಲಿ ಉಲ್ಲೇಖಿಸಲಾದ ರಮ್ಯ ಎನ್ನುವ ಅಪರಿಚಿತ ಮಹಿಳೆ
ದೂರಿನ ಪ್ರತಿಯಲ್ಲಿ ಉಲ್ಲೇಖಿಸಲಾದ ರಮ್ಯ ಎನ್ನುವ ಅಪರಿಚಿತ ಮಹಿಳೆ

ಮಂಡಳಿಯ ಹಿತದೃಷ್ಟಿಯಿಂದ ಹಾಗೂ ಮಂಡಳಿ ಯ ಅಧಿಕಾರವನ್ನು ದುರುಪಯೋಗ‌ ಪಡಿಸಿಕೊಳ್ಳು ತ್ತಿರುವ ಕೆಲವು ಅಧಿಕಾ ರಿಗಳಿಗೆ ಚುರುಕು ಮುಟ್ಟಿಸ ಬೇಕಿರುವ ಕಾರಣಕ್ಕೆ,ಮುಚ್ಚಿ ಹೋಗಬಹುದಾಗಿದ್ದ ಆ ಒಂದು ಪ್ರಕರಣ ದ ಬಗ್ಗೆ ಮರುತನಿಖೆ ಆಗಲೇಬೇಕು…? ಎಂದು ಕನ್ನಡ ಫ್ಲ್ಯಾಶ್‌ ನ್ಯೂಸ್‌  ಅತ್ಯಂತ ಜವಾಬ್ದಾರಿ ಹಾಗೂ ವಿವೇಚನೆಯಿಂದ  ಒತ್ತಾಯಿಸುತ್ತಿರುವುದಕ್ಕೆ ಕಾರಣವೂ ಇದೆ..ಆ ಕಾರಣವೇ ಶಿವಕುಮಾರ್‌ ಅವ ರು ಕೆಲಸ ಮಾಡುವ ಬಸವೇಶ್ವರ ನಗರದ ನಿಸರ್ಗ ಭವನದಲ್ಲಿ ಅವರದೇ ಸಮಾನ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ  ಅಧಿಕಾರಿ ಕೊಟ್ಟ ಮಾಹಿತಿ. ಆ ಅಧಿಕಾರಿ ಕೊಟ್ಟ ಆ ಸುಳಿವು ಶಿವಕುಮಾರ್‌  ಹಾಗೂ ಅವರೊಂದಿಗೆ ಕೇಳಿಬಂದ ರಮ್ಯ ಎನ್ನುವ ಮಹಿಳೆ ಸಂಬಂಧದ ಬಗ್ಗೆ ಗುಮಾನಿ ಯಿಂದ ನೋಡುವಂತಾಗಿದೆ.ಅಷ್ಟೇ ಅಲ್ಲ,ಆ ರಮ್ಯ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಗಲೇಬೇಕಾದ ಸನ್ನಿವೇಶ ಸೃಷ್ಟಿಸಿದೆ.

ಹೌದು.. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರಾಧಿಕಾರಿ ಶಿವಕುಮಾರ್ ವಿರುದ್ಧ ಕೇಳಿಬಂದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌ ಸಿಕ್ಕಿದೆ.ರಮ್ಯ ಎಂಬಾಕೆ ಯಾರೆನ್ನುವುದೇ ಗೊತ್ತಿಲ್ಲ ಎಂದು ಹೇಳಿ ತಪ್ಪಿನಿಂದ ನುಣುಚಿಕೊಳ್ಳಲು ಶಿವಕುಮಾರ್‌ ಪ್ರಯತ್ನ ಪಟ್ಟರೂ ರಮ್ಯ ಎಂಬ ಹೆಸರಿನ ಮಹಿಳೆ ಆರ್‌ ಆರ್‌ ನಗರ ವಲಯ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಿಸರ್ಗ ಭವನದ ಅಧಿಕಾರಿಯೊಬ್ಬರು ಹೇಳಿರುವುದು ಪ್ರಕರಣಕ್ಕೆ ತಿರುವು ನೀಡಲು ಕಾರಣವಾಗಿದೆ. ಮೇಲ್ಕಂಡ ಪ್ರಕರಣ ಬೆನ್ನತ್ತಿದ  ಮಾದ್ಯಮವೊಂದಕ್ಕೆ ಅಧಿಕಾರಿ ನೀಡಿರುವ ಸ್ಪೋಟಕ ಮಾಹಿತಿಯ ವೀಡಿಯೋ ಕೂಡ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಗೆ ಲಭ್ಯವಾಗಿದೆ. ( ತನಿಖೆಗೆ ಸಹಕಾರಿಯಾಗುತ್ತೆ ಎನ್ನುವುದಾದರೆ ಆ ಅಧಿಕಾರಿ ಮಾದ್ಯಮವೊಂದರ ಜತೆ ಮಾತನಾಡಿರುವ  ವೀಡಿಯೋ ಒದಗಿಸಲು ನಾವು ಸಿದ್ದ) 

ಪರಿಸರಾಧಿಕಾರಿ ಶಿವಕುಮಾರ್‌ ಹಾಗೂ ಅವರದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾದ ರಮ್ಯ ಎನ್ನುವ ಮಹಿಳೆ ಬಗ್ಗೆ ದೂರುದಾರರು ಕೊಟ್ಟ ದೂರಿನ ಮೇರೆಗೆ ತನಿಖೆಗೆ ಆದೇಶಿಸಿದ ಮೇಲಾಧಿಕಾರಿಗಳ ಆದೇಶದ ಪ್ರತಿ
ಪರಿಸರಾಧಿಕಾರಿ ಶಿವಕುಮಾರ್‌ ಹಾಗೂ ಅವರದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾದ ರಮ್ಯ ಎನ್ನುವ ಮಹಿಳೆ ಬಗ್ಗೆ ದೂರುದಾರರು ಕೊಟ್ಟ ದೂರಿನ ಮೇರೆಗೆ ತನಿಖೆಗೆ ಆದೇಶಿಸಿದ ಮೇಲಾಧಿಕಾರಿಗಳ ಆದೇಶದ ಪ್ರತಿ

ಪ್ರಕರಣಕ್ಕೆ  ತಿಪ್ಪೆ ಸಾರಿಸಲಾಯ್ತಾ..? ಸಿಸಿ ಟಿವಿ ಫುಟೇಜ್‌ ತೆಗೆಸಿ ಪರಿಶೀಲಿಸಿದರೆ ಅಸಲಿಯತ್ತು ಗೊತ್ತಾಗುತ್ತಿತ್ತು..  ಶಿವಕುಮಾರ್‌ ಜತೆ ರಮ್ಯ ಎನ್ನುವ ಮಹಿಳೆ  ಅಡ್ಡಾಡಿರುವುದನ್ನು ,ಅವರೊಂದಿಗೆ ವಾಹನದಲ್ಲಿ ತುಂಬಾ ಫ್ರೀಯಾಗಿ ತಿರುಗಾ ಡಿರುವುದನ್ನು ನೋಡಿರು ವುದಾಗಿ ದೂರುದಾರ ಹೇಳಿರುವುದನ್ನು ಆಡಳಿತ ಮಂಡಳಿ ಲಘುವಾಗಿ ಹೇಗೆ ಪರಿಗಣಿಸಿತೋ ಗೊತ್ತಾಗ್ತಿಲ್ಲ. ಶಿವಕುಮಾರ್‌ ವಿರುದ್ಧ ದೂರು ನೀಡಿರುವ  ದೂರುದಾರ ಭೌತಿಕವಾಗಿ ಲಭ್ಯ ಇಲ್ಲ ಎನ್ನುವುದನ್ನೇ ಆಧರಿಸಿ ಅಂತಿಮ ನಿರ್ದಾರಕ್ಕೆ ಬಂದಂ ತಿದೆ.

ಆತ ಪ್ರತ್ಯಕ್ಷವಾಗಿ ವಿಚಾರಣೆಗೆ ಹಾಜರಾಗಿಲ್ಲ ಎಂದೇ ಇಟ್ಟುಕೊಳ್ಳೋಣ,ಆದ್ರೆ ಮುಖ್ಯವಾಗಿ ರಮ್ಯ ಎನ್ನುವ ಮಹಿಳೆ ಶಿವಕು ಮಾರ್‌ ಅವರ ಕಚೇರಿಯನ್ನೇ ಕೇಂದ್ರಸ್ಥಾನವನ್ನಾಗಿಸಿಕೊಂಡಿದ್ದಳು ಎನ್ನುವ  ಅಪರಿಚಿತ ಎನ್ನಲಾಗುತ್ತಿರುವ ಬೇನಾಮಿ ದೂರುದಾರ ಮಾಡಿರುವ  ಆಪಾದನೆ ಬಗ್ಗೆ ಕೆಟ್ಟ ಕುತೂಹಲಕ್ಕಾದ್ರೂ ಮಂಡಳಿ  ತಲೆಕೆಡಿಸಿಕೊಳ್ಳಬೇಕಾಗಿತ್ತು. ರಮ್ಯ ಅಲ್ಲಿ ನಿಜವಾಗಿಯೂ ಕೆಲಸ ಮಾಡುತ್ತಿದ್ದಳೆನ್ನುವುದಾದಲ್ಲಿ ಅದರ ಪೂರ್ವಾಪರ ಅವಲೋಕಿಸಬೇಕಿತ್ತು.ಒಂದ್ವೇಳೆ ಆಕೆ ಮಂಡಳಿಯ ಉದ್ಯೋಗಿನೇ ಅಲ್ಲ ಎನ್ನುವುದೇ ಸತ್ಯವಾಗಿದ್ದರೆ ಆಕೆ ಹೆಸರು ಹೇಗೆ ಶಿವಕುಮಾರ್‌ ಹಾಗೂ ಆರ್‌ ಆರ್‌ ನಗರ ಕಚೇರಿ ಜತೆಗೆ ಥಳಕು ಹಾಕಿಕೊಳ್ಳುತ್ತೆ ಎನ್ನುವುದರ ಬಗ್ಗೆಆಲೋಚನೆ ಮಾಡಬೇಕಿತ್ತು.

ಪರಿಸರಾಧಿಕಾರಿ ಶಿವಕುಮಾರ್‌ ಹಾಗೂ ಅವರದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾದ ರಮ್ಯ ಎನ್ನುವ ಮಹಿಳೆ ಬಗ್ಗೆ ದೂರುದಾರರು ಮಾಡಿದ ಸಾಕಷ್ಟು ಆರೋಪಗಳ ಪ್ರತಿ
ಪರಿಸರಾಧಿಕಾರಿ ಶಿವಕುಮಾರ್‌ ಹಾಗೂ ಅವರದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾದ ರಮ್ಯ ಎನ್ನುವ ಮಹಿಳೆ ಬಗ್ಗೆ ದೂರುದಾರರು ಮಾಡಿದ ಸಾಕಷ್ಟು ಆರೋಪಗಳ ಪ್ರತಿ…

ಮಂಡಳಿಗೆ ಸಂಬಂಧನೇ ಪಡದ ಮಹಿಳೆಯೊಬ್ಬಳು ಕಚೇರಿಗೆ ಬಂದೋಗುವುದಷ್ಟೇ ಅಲ್ಲ,ಅಲ್ಲಿನ ಕಡತಗಳನ್ನು ಪರಿಶೀಲಿಸು ವುದು,ಸಂಬಂಧಪಟ್ಟ ಕಡತಗಳೊಂದಿಗೆ ವ್ಯವಹಾರಗಳೊಂದಿಗೆ ಸಂಬಂಧ ಹೇಗೆ ಇಟ್ಟುಕೊಳ್ಳುತ್ತಾರೆ ಎನ್ನುವುದು ತುಂಬಾ ಗಂಭೀರವಾದ ವಿಚಾರ.ಹಾಗೇನಾದ್ರೂ ಆಗಿದ್ದೇ ಆದಲ್ಲಿ ಅದಕ್ಕಿಂತ ದೊಡ್ಡ ದುರಂತ ಹಾಗೂ ಕ್ರೈಮ್‌ ಮತ್ತೊಂದಿರಲಾರದೇ ನೋ..? ರಮ್ಯ ಎನ್ನುವ ಮಹಿಳೆ ಎಷ್ಟು ತಪ್ಪಿತಸ್ಥಳೋ ಅದಕ್ಕಿಂತ ನೂರು ಪಟ್ಟು ತಪ್ಪಿತಸ್ಥ ಸ್ಥಾನದಲ್ಲಿ ಶಿವಕುಮಾರ್‌ ನಿಲ್ಲಬೇಕಾಗುತ್ತೆ.ಸಂಬಂಧವೇ ಪಡದ ಮಹಿಳೆಯನ್ನು ಕಚೇರಿಯೊಳಗೆ ಬಿಟ್ಟುಕೊಂಡಿದ್ದರೆ ಅದು ಅನ್ನ ತಿನ್ನುವ ಸಂಸ್ಥೆಗೆ ಮಾಡಿದ ಮಹಾದ್ರೋಹದಂತಾಗುತ್ತದೆಲ್ಲವೇ..?

ಬಸವೇಶ್ವರ ನಗರದಲ್ಲಿರುವ ನಿಸರ್ಗ ಭವನ.ಈ ಕಟ್ಟಡದ 2ನೇ ಮಹಡಿಯಲ್ಲೇ ಆರ್‌ ಆರ್‌ ನಗರ ವಲಯ ಪರಿಸರ ಕಚೇರಿ ಇದೆ.
ಬಸವೇಶ್ವರ ನಗರದಲ್ಲಿರುವ ನಿಸರ್ಗ ಭವನ.ಈ ಕಟ್ಟಡದ 2ನೇ ಮಹಡಿಯಲ್ಲೇ ಆರ್‌ ಆರ್‌ ನಗರ ವಲಯ ಪರಿಸರ ಕಚೇರಿ ಇದೆ.

ಹಾಗಾದ್ರೆ ಶಿವಕುಮಾರ್‌ ಅಲ್ಲಗೆಳೆಯುತ್ತಿರುವ ಆ ರಮ್ಯ ಎನ್ನುವ ಮಹಿಳೆಯನ್ನು ಪತ್ತೆ ಮಾಡುವುದು ಕೂಡ ಕಷ್ಟವೇನಲ್ಲ .ಬಸವೇಶ್ವರ ನಗರದಲ್ಲಿರುವ ನಿಸರ್ಗ ಭವನದ ಆವರಣದಲ್ಲಿ ಸಿಸಿ ಕ್ಯಾಮೆರಾ ಇದ್ದರೆ ಕಳೆದೊಂದಷ್ಟು ತಿಂಗಳಿನ ಸಿಸಿ ಫುಟೇಜಸ್‌ ನ್ನು ಅವಲೋಕಿಸದರೆ ಅದರಲ್ಲೇ ರಮ್ಯ ಎನ್ನುವ ಮಹಿಳೆಯ ಅಸ್ಥಿತ್ವದ ಬಗ್ಗೆ ಸೃಷ್ಟಿಯಾಗಿರುವ ಗೊಂದಲ-ಪುಕಾರುಗಳಿಗೆಲ್ಲಾ ಸ್ಪಷ್ಟನೆ ಸಿಗುತ್ತದೆ.ಶಿವಕುಮಾರ್‌ ಸಾಹೇಬ್ರ ಚಲನವಲನ-ವಾಹನದ ಆಗುಹೋಗನ್ನು ಪರಿಶೀಲಿಸಿದರೂ ಸಾಕು ಅವರ ಬಗ್ಗೆ ಕೇಳಿಬಂದಿರುವ ಆರೋಪಗಳ ಸತ್ಯಾಸತ್ಯತೆ ಗೊತ್ತಾಗಿಬಿಡುತ್ತೆ.

ಆ ಅಧಿಕಾರಿ ಹೇಳಿದ್ದೇ ಸುಳ್ಳ..?  ಅವರೇನೋ ಸುಳ್‌ ಹೇಳುತ್ತಾರಾ ಎಂದೆನಿಸುವುದಿಲ್ಲ..ಪರಿಸರಾಧಿಕಾರಿ ಶಿವಕುಮಾ ರ್‌ ಅವರು ರಮ್ಯ ಎನ್ನುವ ಹೆಸರಿನ ಮಹಿಳೆಯೇ ನಮ್ಮಲ್ಲಿಲ್ಲ ಎಂದು ಹೇಳುತ್ತಿರುವುದನ್ನೇ ಸತ್ಯ ಎಂದಿಟ್ಟುಕೊಳ್ಳೋಣ. ಹಾಗಾದ್ರೆ ಅವರದೇ ಬಿಲ್ಡಿಂಗ್‌ ನಲ್ಲಿ  ಕೆಲಸ ಮಾಡುತ್ತಿರುವ   ಪರಿಸರಾಧಿಕಾರಿ ರಮ್ಯ ಎನ್ನುವ ಮಹಿಳೆ ಬಗ್ಗೆ ಹೇಳಿದ್ದೇ ಸುಳ್ಳಾ.. ? ರಮ್ಯ ಎನ್ನುವ ಮಹಿಳೆ ಆರ್‌ ಆರ್ ನಗರ ಕಚೇರಿಯಲ್ಲಿ ,2ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದಾರ ಎಂದು ಹೇಳಿದ್ದಾರೆ.

ಶಿವಕುಮಾರ್‌ ಹೇಳೋದೇ ಸತ್ಯ ಎಂದು ಭಾವಿಸೋಣ..?ಹಾಗಾದ್ರೆ  ಆ  ಅಧಿಕಾರಿ ಹೇಳಿದ್ದು ಸುಳ್ಳಾ..? ಅವರಿಗೆ ಸುಳ್ಳು ಹೇಳೊ ಕ್ಕೆ ಶಿವಕುಮಾರ್‌ ಜತೆಗೇನಾದ್ರೂ ದ್ವೇಷ ಇದೆಯಾ..? ಅಥವಾ ಶಿವಕುಮಾರ್‌ ಅವರ ವೈಯುಕ್ತಿಕ ತೇಜೋವಧೆ ಮಾಡ ಬೇಕೆ ನ್ನುವ ಉದ್ದೇಶವೇನಾದ್ರೂ ಇರುತ್ತಾ..? ಖಂಡಿತಾ ಇಲ್ವಲಾ..? ಆ ಅಧಿಕಾರಿಯ ಹೇಳಿಕೆಯನ್ನು ಆಧರಿಸಿಯೇ ತನಿಖೆ  ನಡುದ್ರೆ ಶಿವಕುಮಾರ್‌ ಕಚೇರಿಯಲ್ಲಿ ರಮ್ಯ ಎನ್ನುವ ಮಹಿಳೆ ಕೆಲಸ ಮಾಡುತ್ತಿದ್ದಳೋ, ಇಲ್ಲವೋ…ಶಿವಕುಮಾರ್‌ ಗೂ ರಮ್ಯಗೂ ಏನ್‌ ಸಂಬಂಧ..? ಆಕೆ ಮಂಡಳಿಯ ಸಿಬ್ಬಂದಿನೋ ಅಲ್ವೋ..? ಒಂದ್ವೇಳೆ ಸಿಬ್ಬಂದಿ ಆಗದೆ ಇದ್ದಲ್ಲಿ ಆಕೆಗೇನು ಮಂಡಳಿಯಲ್ಲಿ ಹಾಗೂ ಶಿವಕುಮಾರ್‌ ಕಚೇರಿಯಲ್ಲಿ ಕೆಲಸ..? ಹೀಗೆ ಕಾಡುವ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಬಹುದೇನೋ..?

ಅಪರಿಚಿತರನ್ನು ಕಚೇರಿಗೆ ಸೇರಿಸಿಕೊಂಡರೇನೇ ಅಕ್ಷಮ್ಯ-ಶಿಕ್ಷಾರ್ಹ ಇನ್ನು ಪರಿಸರ ಸಚಿವರ ಕಚೇರಿಯನ್ನು ಕೂಡ ತಲುಪಿರುವ ದೂರಿನ ಬಗ್ಗೆ ಚರ್ಚೆ ನಡೆದಿದೆ.ಪ್ರಕರಣಕ್ಕೆ ಕ್ಲೀನ್‌ ಚಿಟ್‌ ಕೊಟ್ಟರೂ ಪ್ರಕರಣವಿನ್ನೂ ಮುಗಿದಿಲ್ಲ. ಪರಿಸರಾಧಿ ಕಾರಿಯೊಬ್ಬರೇ ಶಿವಕುಮಾರ್‌ ಕೆಲಸ ಮಾಡುವ ಆರ್‌ ಆರ್‌ ನಗರ  ಕಚೇರಿಯಲ್ಲಿ ರಮ್ಯ ಎನ್ನುವ ಮಹಿಳೆ ಕೆಲಸ ಮಾಡುತ್ತಿರು ವುದಾಗಿ ಹೇಳಿದ್ದಾರೆ.ಶಿವಕುಮಾರ್‌ ಹೇಳುತ್ತಿರುವುದನ್ನೇ ಸತ್ಯ ಎಂದು ಒಪ್ಪಿಕೊಳ್ಳಬಹುದಾದರೂ ಅವರದೇ ಬಿಲ್ಡಿಂಗ್‌ ನಲ್ಲಿ ಕೆಲಸ ಮಾಡುವ ಪಕ್ಕದ ವಲಯದ ಅಧಿಕಾರಿ ಹೇಳುತ್ತಿರುವ ಆ ಮಹಿಳೆ ರಮ್ಯ ಯಾರೆನ್ನುವ ಪ್ರಶ್ನೆಗೆ ಉತ್ತರ ಸಿಗ್ಬೇಕಿದೆ.ಆರ್‌ ಆರ್‌ ನಗರ ವಲಯ ಕಚೇರಿಯಲ್ಲೇ ಕೆಲಸ ಮಾಡುತ್ತಿರುವುದಾಗಿ  ಪರಿಸರಾಧಿಕಾರಿ ಹೇಳುತ್ತಿರುವ ಆ ರಮ್ಯ ಯಾ ರೆನ್ನುವುದಕ್ಕೆ ಶಿವಕುಮಾರ್‌ ಅವರೇ ಸ್ಪಷ್ಟನೆ ಕೊಡಬೇಕಿದೆ.

ಒಂದ್ವೇಳೆ ರಮ್ಯ ಎನ್ನುವ ಮಹಿಳೆ ಮಂಡಳಿಗೆ ನೇಮಕಗೊಳ್ಳದೆ(ಶಿವಕುಮಾರ್‌ ಹೇಳುವಂತೆ ಆ ಹೆಸರಿನ ಯಾವುದೇ ಮಹಿಳಾ ನೌಕರೆ ತನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿಲ್ಲ) ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದರೆ ಅದು ಅಕ್ರಮ ಹಾಗೂ ಅಕ್ಷಮ್ಯ ಎನಿಸಿಕೊಳ್ಳುತ್ತದೆ.ಒಂದ್ವೇಳೆ ಶಿವಕುಮಾರ್‌ ಅವರೇ ತಮ್ಮ ವೈಯುಕ್ತಿಕ ಖರ್ಚಿನಲ್ಲಿ ಮಹಿಳೆಯನ್ನು ನಿಯೋಜಿಸಿ ಕೊಂಡಿದ್ದಾದಲ್ಲಿ ಅದಕ್ಕೂ ಕಾನೂನಿನಲ್ಲಿ ಅವಕಾಶವಿಲ್ಲವಂತೆ.ಸಂಬಂಧವೇ ಪಡದ ಯಾರೇ ಆಗಲಿ ಮಂಡಳಿಯಲ್ಲಿ ಕೆಲಸ ಮಾಡುವುದು ಕಾನೂನಿಗೆ ವಿರುದ್ಧವಾಗಿರುವುದರಿಂದ ಶಿವಕುಮಾರ್‌ ಹಾಗೂ ರಮ್ಯ ಇಬ್ರ ಮೆಲೂ ಕ್ರಿಮಿನಲ್‌ ಕೇಸ್‌ ದಾಖಲಿಸಬೇಕಾಗುತ್ತೆ.ಈ ನಿಟ್ಟಿನಲ್ಲಿ ಯಾರೇ ಮರುತನಿಖೆ ಆಗಬೇಕೆಂದು ಒತ್ತಾಯಿಸಿ ದೂರು ಕೊಟ್ಟರೆ ಅದರ ಮೇಲೆ ಕ್ರಮ ವಹಿಸಲಾಗುವುದೆಂದು ಪರಿಸರ ಸಚಿವರ ಕಚೇರಿ ಮೂಲಗಳು ತಿಳಿಸಿವೆ.

ನೂತನ ಆಡಳಿತಾಧಿಕಾರಿಗಳು ಅಗತ್ಯಬಿದ್ದರೆ ತನಿಖೆಗೆ ಮರುಜೀವ ಕೊಡಬೇಕಿದೆ.: ನೂತನ ಆಡಳಿತಾಧಿಕಾರಿಯಾಗಿ ಬಂದಿರುವ ಡಾ.ಮೈತ್ರಿ ಮಂಡಳಿಯಲ್ಲಿನ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಖಡಕ್‌ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಧಿಕಾರಿಗಳ ಮೇಲೆ ಎಂತದ್ದೇ ಆರೋಪಗಳಿರಲಿ ಅದರ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.ಕ್ಲೀನ್‌ ಚಿಟ್‌ ಕೊಡಲಾಗಿರು ವ ಮೇಲ್ಕಂಡ ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ. ಪ್ರಕರಣದ ತನಿಖೆ ನಡೆಸಿದ ಸಮಿತಿ/ವ್ಯಕ್ತಿಗಳು ಎಲ್ಲಿ ಎಡವಿರಬಹುದು .? ಸಾಕ್ಷ್ಯ ಕ್ರೋಢೀಕರಿಸುವಲ್ಲಿ ವಿಫಲವಾಗಿರಬಹುದು….? ಅಂತಿಮವಾಗಿ ಪ್ರಕರಣಕ್ಕೆ ನ್ಯಾಯ ತೀರಿಸುವಲ್ಲಿ ಹಿನ್ನಡೆ ಅನುಭವಿಸಿರಬಹುದೆನ್ನುವುದನ್ನು ಪತ್ತೆ ಮಾಡಬೇಕಿದೆ.ಮಂಡಳಿಯ ಅಧಿಕಾರಿ ಎನ್ನುವ ಸಲಿಗೆಗೆ ಸಿಲುಕಿ ಸತ್ಯವನ್ನು ಪ್ರತಿಪಾದಿಸುವಲ್ಲಿ ವಿಫಲವಾಗಿರಬಹುದಾ..? ಹೀಗೆ ಎಲ್ಲಾ ಆಯಾಮಗಳಲ್ಲೂ ಪರಿಶೀಲನೆ ನಡೆಸಬೇಕಿದೆ.ಅವರೇ ಆಡಳಿತಾಧಿಕಾರಿಯಾಗಿರುವುದರಿಂದ ಅಗತ್ಯಬಿದ್ದರೆ ಮರುತನಿಖೆಗೆ ಒಳಪಡಿಸುವುದು ಸೂಕ್ತ ಎನಿಸುತ್ತೆ.

 ಮರುತನಿಖೆ ನಡೆಯಲೇಬೇಕು..? ಪರಿಸರ ಸಚಿವರಿಗೆ  ಸಮೃದ್ಧ ಭಾರತ ಫೌಂಡೇಷನ್‌ ದೂರು..:ಶಿವಕುಮಾರ್‌ ಹಾಗೂ ರಮ್ಯ ಎನ್ನುವ ಮಹಿಳೆ ಬಗ್ಗೆ ಕೇಳಿಬಂದ ದೂರಿನ ಬಗ್ಗೆ ಆಡಳಿತ ಮಂಡಳಿ ಸರಿಯಾದ ರೀತಿಯ ಪರಿಶೀಲನೆಯನ್ನೇ ನಡೆಸಿಲ್ಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತೆ.ತಮ್ಮ ಅಧಿಕಾರಿ ಮೇಲಿನ ಕಳಂಕ ತೊಡೆದುಹಾಕುವ ಆತುರಕ್ಕೆ ಬಿದ್ದು ರಮ್ಯ ಎನ್ನುವ ಮಹಿಳೆಯ ಅಸ್ಥಿತ್ವದ ಬಗ್ಗೆಯಾಗಲಿ ಆಕೆ ಬಗ್ಗೆ ಕೇಳಿಬಂದ ಆಪಾದನೆ ಬಗ್ಗೆಯಾಗಲಿ ಪರಿಶೀಲನೆ ನಡೆಸುವ ಗೋಜಿಗೇನೆ ಹೋದಂತೆ ಕಾಣುತ್ತಿಲ್ಲ.ಮಂಡಳಿಯ ತನಿಖೆಯ ಶೈಲಿಯೇ ಸರಿ ಇಲ್ಲವಾದ್ದರಿಂದ ಶಿವಕುಮಾರ್‌ ಗೆ ಕ್ಲೀನ್‌ ಚಿಟ್‌ ಕೊಟ್ಟಿರುವುದನ್ನು ಪ್ರಶ್ನಿಸಿ ಸಮೃದ್ಧ ಭಾರತ ಫೌಂಡೇಷನ್‌ ಎನ್ನುವ  ಸ್ವಯಂಸೇವಾ ಸಂಸ್ಥೆ ಪರಿಸರ ಸಚಿವರಿಗೆ ಪತ್ರ ಬರೆಯಲು ತೀರ್ಮಾನಿಸಿದೆ.ಶಿವಕುಮಾರ್‌ ಜತೆ ಥಳಕು ಹಾಕ್ಕೊಂಡ ಆ ರಮ್ಯ ಎನ್ನುವ ಮಾಯಾಂಗನೆಯ ಬಗ್ಗೆ ಎದ್ದಿರುವ ಪ್ರಶ್ನೆ ಹಾಗೂ ಗುಮಾನಿಗೆ ಸ್ಪಷ್ಟನೆ ಸಿಗಬೇಕಿರುವುದರಿಂದ ಪ್ರಕರಣದ ಮರುತನಿಖೆಗೆ ಆದೇಶಿಸಬೇಕೆಂದು ಸಚಿವ ಈಶ್ವರ ಖಂಡ್ರೆ ಅವರನ್ನು ಒತ್ತಾಯಿಸುವುದಾಗಿ ಸಂಸ್ಥೆ ಮುಖ್ಯಸ್ಥ ಮಂಜುನಾಥ್‌ ಚಂದ್ರ ತಿಳಿಸಿದ್ದಾರೆ.


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button