BREAKING NEWSCRIME NEWSTRANSPORT

BMTC ಪತ್ತಿನ ಸಹಕಾರ ಸಂಘದ ಚುನಾವಣೆ…”ಹಣ-ಹೆಂಡ-ಬಾಡು-ಗಿಫ್ಟ್…ಅಬ್ಬರ..!? ಲಾಡ್ಜ್ ಗಳಲ್ಲೇ ಬೀಡುಬಿಟ್ಟಿರುವ ಕೆಲವು “ಆಕಾಂಕ್ಷಿ”ಗಳು..!?

Share

ಕೆಲವು ಉಮೇದುವಾರರಿಂದ ಮತದಾರ ಮನವೊಲಿಕೆಗೆ ಲಕ್ಷಗಳಲ್ಲಿ ಖರ್ಚು.!

ಬೆಂಗಳೂರು: ನಾಳೆ( ಫೆಬ್ರವರಿ 11) ಇಷ್ಟೊತ್ತಿಗಾಗ್ಲೇ ಬಿಎಂಟಿಸಿ ಪತ್ತಿನ ಸಹಕಾರ ಸಂಘದ ಚುನಾವಣೆ ಮುಗಿದೋಗಿರುತ್ತದೆ. ಸಂಜೆ ವೇಳೆಗೆ ಪತ್ತಿನ ಸಹಕಾರ ಸಂಘದ ಮೇಲೆ ಯಾರು ಸ್ಪಷ್ಟವಾಗಿ ಹಿಡಿತ ಸಾಧಿಸಿರುತ್ತಾರೆನ್ನೋದು ಕೂಡ ನಿಕ್ಕಿಯಾಗಿರು ತ್ತದೆ.ಇದರ ಹೊರತಾಗಿ  ಕೆಲವು ಬೆಳವಣಿಗೆ ಗಮನಿಸಿದ್ರೆ ಯಾವುದೇ ರಾಜಕೀಯ ಚುನಾವಣೆಗೆ ಭಿನ್ನವಾಗಿರದ ರೇಂಜ್ನಲ್ಲಿ ಚುನಾವಣೆ ನಡೆಯುತ್ತಿದೆ.ಎಲ್ಲಾ ಚುನಾವಣೆಗಳಂತೆ ಇಲ್ಲಿಯೂ ಮತದಾರರ ಓಲೈಕೆಗೆ ಹಣ-ಹೆಂಡ-ಬಾಡು-ಗಿಫ್ಟು…ಎಲ್ಲಾ ಚಲಾವಣೆಯಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ( ಬಿಎಂಟಿಸಿ)ಯ ನೌಕರರ ಪತ್ತಿನ ಸಹಕಾರ ಸಂಘಕ್ಕೆ ನಾಳೆ ಚುನಾವಣೆ ನಡೆಯುತ್ತಿದೆ . 17 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಚುನಾವಣಾ ಕಣದಲ್ಲಿ 109 ಅಭ್ಯರ್ಥಿಗಳಿದ್ದಾರೆ.4 ಸಾವಿರ ಕಾರ್ಮಿಕ ಸಿಬ್ಬಂದಿ 17 ನಿರ್ದೇಶಕರ ಆಯ್ಕೆಗೆ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.ಚುನಾವಣೆಗೆ ಪೂರಕವಾಗಿ ಮತದಾನವು ಬಿಬಿಎಂಪಿ ಕೇಂದ್ರ ಕಚೇರಿ ಹತ್ತಿರದಲ್ಲಿ ನಡೆಯಲಿದೆ.

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌ ನೇತೃತ್ವದ  ಕೆಎಸ್‌ ಆರ್‌ ಟಿಸಿ ಸ್ಟಾಫ್‌ ವರ್ಕರ್ಸ್‌ ಯೂನಿಯನ್‌ ( ಎಐಟಿಯುಸಿ) ನ್ನೊಳಗೊಂಡ ಅನೇಕ ಸಂಘಟನೆಗಳ ಒಕ್ಕೂಟವಾದ ಜಂಟಿ ಕ್ರಿಯಾಸಮಿತಿ (ಮಹಾಘಟ ಬಂದನ್), ಚಂದ್ರಶೇಖರ್‌ ನೇತೃತ್ವದ  ಸಾರಿಗೆ ನೌಕರರ ಕೂಟ,ಅನೇಕ ಪ್ರಕರಣಗಳಲ್ಲಿ ಆಪಾದಿತರಾದ ನೌಕರ ಸಿಬ್ಬಂದಿ ಬೆನ್ನಿಗೆ ನಿಂತು ಕೆಲಸ ಮಾಡುವ ಸಹ ನೌಕರರು( ಕೋ ವರ್ಕರ್‌) ಅವರನ್ನು ಒಳಗೊಂಡ  ಸ್ವಾಭಿಮಾನಿ ತಂಡ, ನೌಕರರ ಸಂಘ,ಸ್ನೇಹ ಜೀವಿ ತಂಡ,ಕನ್ನಡ ಕ್ರಿಯಾ ಸಮಿತಿ ಹಾಗೂ  ಸ್ನೇಹಿತರ ಸಹಕಾರಿ ತಂಡದ ಬೆಂಬಲಿತ ಅಭ್ಯರ್ಥಿಗಳು  ಚುನಾವಣಾ ಕಣದಲ್ಲಿದ್ದಾರೆ.

ಬಿಎಂಟಿಸಿ ನೌಕರರ ಪತ್ತಿನ ಸಹಕಾರ ಸಂಘದ ಚುನಾವಣೆ ಸಂಬಂಧ ಸ್ಪರ್ದಾ ಕಣದಲ್ಲಿರುವ ಬಹುತೇಕರು ಮಾಡುತ್ತಿರುವ ಕೆಲಸ ನೋಡಿದ್ರೆ ಯಾವುದೇ ರಾಜಕೀಯ ಚುನಾವಣೆಗಿಂತಲೂ ಕಡಿಮೆ ಇಲ್ಲ ಎನ್ನುವ ಭಾವನೆ ಮೂಡಿಸುತ್ತದೆ. ನಿರ್ದೇಶಕ ರಾಗಬಯಸುವ ಕೆಲವು ಆಕಾಂಕ್ಷಿಗಳು ಲಕ್ಷಾಂತರ ಹಣ ಖರ್ಚು ಮಾಡುತ್ತಿರುವ ವರ್ತಮಾನ ಬಂದಿದೆ. ಮತದಾರರಿಗೆ ಆಮಿಷದ ರೂಪದಲ್ಲಿ ಸಾವಿರಾರು ಹಣ, ಅನ್‌ ಲಿಮಿಟೆಡ್‌ ಮದ್ಯ ಪೂರೈಕೆ ಮಾಡಲಾಗ್ತಿದೆ.ಇನ್ನು ಕೆಲವರು ಗಡಿಯಾರ ಸೇರಿ ದಂತೆ ಅನೇಕ ರೀತಿಯ ಗಿಫ್ಟ್‌ ಕೂಡ ನೀಡಲಾರಂಭಿಸಿದ್ದಾರೆ ಎನ್ನುವುದನ್ನು ಸದಸ್ಯರಾಗಿರುವವರಲ್ಲೇ ಕೆಲವರು ತಿಳಿಸಿದ್ದಾರೆ.

ಅದರಲ್ಲೂ ಕೆಲವರಂತೂ ಕಳೆದೊಂದು ವಾರದಿಂದ ದೊಡ್ಡ ದೊಡ್ಡ ಲಾಡ್ಜ್‌ ಗಳಲ್ಲಿ ಅನೇಕ ರೂಂಗಳನ್ನು ಬುಕ್‌ ಮಾಡಿ ದ್ದಾರಂತೆ.ಚುನಾವಣೆಯಲ್ಲಿ ಗೆಲ್ಲೊಕ್ಕೆ ಏನ್‌ ಮಾಡಬೇಕೆನ್ನುವ ರೂಪುರೇಷೆಗಳನ್ನು ಸಿದ್ದಪಡಿಸುವ ಕೆಲಸದ ಜತೆಗೆ ಡಿಪೋ ಗಳ ಮಟ್ಟದಲ್ಲಿ ನೌಕರರ ಮುಖಂಡರೆನಿಸಿಕೊಂಡವರನ್ನು ಬುಕ್‌ ಮಾಡಿಕೊಂಡು ಅವರ ಕೈಗೆ ರೊಕ್ಕ ಇಟ್ಟು ವಶೀಲಿಬಾಜಿ ನಡೆಸುತ್ತಿದ್ದಾರಂತೆ.ಕೆಲವರಂತೂ‌ ಕೆಲಸಕ್ಕೂ ಬಾರದೆ  ಲಾಡ್ಜ್-ಹೊಟೇಲ್‌ ಗಳಲ್ಲಿ ಮಜಾ ಉಡಾಯಿಸುತ್ತಿದ್ದಾರೆ ನ್ನುವ ಮಾಹಿತಿ ಕೂಡ ಸಾರಿಗೆ ಸಿಬ್ಬಂದಿ ಮೂಲದಿಂದಲೇ ತಿಳಿದುಬಂದಿದೆ.

ಕೆಲವು ಖಚಿತ ಮೂಲಗಳ ಪ್ರಕಾರ ಪ್ರತ್ಯೇಕ ಬಣಗಳು ನಾಳೆಯ ಚುನಾವಣೆಗೆ ಲಕ್ಷಾಂತರ ಫಂಡನ್ನು ಕಾಯ್ದಿರಿಸಿಕೊಂಡಿವೆ ಯಂತೆ.ವೋಟಿಗೆ ಇಂತಿಷ್ಟು ಹಣ-ಬಾಟಲಿ ಎಣ್ಣೆ- ಗಿಫ್ಟ್-ಭಾರೀಭೋಜನವನ್ನು ಫಿಕ್ಸ್‌ ಮಾಡಿದ್ದಾರಂತೆ.ನೌಕರರಂತೂ ಇದೆಲ್ಲದರ ಆಸೆಗೆ ಬಿದ್ದು ತಮ್ಮ ನಾಯಕರ ಹಿಂದೆ ಬಿದ್ದು ಅವರು ನೀಡುತ್ತಿರುವ ಎಲ್ಲಾ ಸವಲತ್ತನ್ನು ಎಂಜಾಯ್‌ ಮಾಡು ತ್ತಿದ್ದಾರಂತೆ.ಇದನ್ನು ಬಿಟ್ಟರೆ ಇನ್ನೆಂದೂ ಚಾನ್ಸ್‌ ಸಿಗೊಲ್ಲ ಎಂದು ಏಂಜಾಯ್‌ ಮೆಂಟ್‌ ನಲ್ಲಿ ತೊಡಗಿದ್ದಾರಂತೆ. ಸಾಲದ್ದಕ್ಕೆ ಚುನಾವಣೆಗೆ ನಿಂತಿರುವ ಆಕಾಂಕ್ಷಿಗಳಿಂದ ಹಣವನ್ನು ಡಿಮ್ಯಾಂಡ್‌ ಮಾಡಿ ಪಡೆಯುವ ಕೆಲಸವೂ ಭಾರೀ ಜೋರಾಗಿಯೇ ನಡೆಯುತ್ತಿದೆಯಂತೆ.

BMTC ಪತ್ತಿನ ಸಹಕಾರ ಸಂಘದ ಚುನಾವಣೆ…”ಹಣ-ಹೆಂಡ-ಬಾಡು-ಗಿಫ್ಟ್…ಅಬ್ಬರ..!? ಲಾಡ್ಜ್ ಗಳಲ್ಲೇ ಬೀಡುಬಿಟ್ಟಿರುವ ಕೆಲವು “ಆಕಾಂಕ್ಷಿ”ಗಳು..!?….

ಒಟ್ಟಿನಲ್ಲಿ ಪತ್ತಿನ ಸಹಕಾರ ಸಂಘದ ಚುನಾವಣೆ ಯಾವುದೇ ರಾಜಕೀಯ ಚುನಾವಣೆ ಅಬ್ಬರಕ್ಕೆ ಕಡಿಮೆಇಲ್ಲದಂತೆ ಅಭೂತಪೂರ್ವವಾಗಿ ನಡೆಯುತ್ತಿದೆ.ಪ್ರಚಾರ ಭರದಿಂದ ಸಾಗಿದೆ.ಆದರೆ ಯಾರೇ ಗೆದ್ದು ಬರಲಿ, ಸಾರಿಗೆ ಸಿಬ್ಬಂದಿಯ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಿ ಎನ್ನುವುದೇ ನಮ್ಮ ಹಾರೈಕೆ.

“ಪತ್ತಿನ ಸಹಕಾರ ಸಂಘ ಕಿತ್‌ ದಬಾಕುತ್ತಿರುವುದು ಕೂಡ  ಅಷ್ಟರಲ್ಲೇ ಇದೆ ಬಿಡಿ”

ಹಾಗೆ ನಿಜವಾಗಿ ನೋಡುದ್ರೆ ಪತ್ತಿನ ಸಹಕಾರ ಸಂಘ ಬಿಎಂಟಿಸಿ ಸಿಬ್ಬಂದಿಯ ಆರ್ಥಿಕ ನೆರವಿಗೆ ಬರಬೇಕಾದ ಸಂಘಟನೆ.ಆದರೆ ಅದು ತನ್ನ ಜವಾಬ್ದಾರಿ ಮರೆತು ಎಷ್ಟೋ ವರ್ಷಗಳಾಗಿವೆಯಂತೆ.ಸ್ವತಃ ಸಾರಿಗೆ ಸಿಬ್ಬಂದಿಯೇ ಹೇಳುವಂತೆ ನಮ್ಮ ಕೈ ಕಾಲಿಡಿದು ಗೆಲ್ಲುವ ಬಹುತೇಕ ನಿರ್ದೇಶಕರು ದಿಢೀರ್‌ ಬದ್ಲಾಗಿಬಿಡ್ತಾರೆ.ಆಮೇಲೆ ಬರಬೇಕಾದ ಸವಲತ್ತುಗಳಿಗೆ ನಾವು ಅವರ ಕಾಲಿಡಿಯಬೇಕಾದ ಪರಿಸ್ಥಿತಿಯಿದೆ. ಕೊರೊನಾ ಬಂದಿದ್ದ ಸನ್ನಿವೇಶದಲ್ಲೇ ತಗೆದುಕೊಳ್ಳಿ, ಏನ್ ಮಾಡಿದ್ರು ಸಂಘದ ನಿರ್ದೇಶಕರು ಹಾಗೂ ನಿರ್ದೇಶಕರು.

ಕೊರೊನಾದಿಂದ ಸಾರಿಗೆ ಸಿಬ್ಬಂದಿ ಬೀದಿಗೆ ಬಿದ್ದಾಗ ಕನಿಷ್ಟಕ್ಕೂ ಅವರ ನೆರವಿಗೆ ಬರಲಿಲ್ಲ.ಆರ್ಥಿಕ ಸಂಕಷ್ಟದಿಂದ ಅವರನ್ನು ಪಾರು ಮಾಡಲಿಲ್ಲ.ಎಷ್ಟೋ ನೌಕರರು ಜೀವನನಿರ್ವಹಣೆಗೆಆಟೋ ಓಡಿಸಿದ್ರು. ತರಕಾರಿ ಮಾರಿದ್ರು.ಪೇಪರ್‌ ಹಾಕಿದ್ರು..ಹಾಲು ಮಾರಿದ್ರು.ಅವರ ಸಂಕಷ್ಟಕ್ಕೆ ಅವರ ಕುಟುಂಬ‍ಸ್ಥರು ಬೀದಿಗೆ ಬಂದರು. ತುತ್ತಿನ ಚೀಲ ತುಂಬಿಸಿಕೊಳ್ಳಲು ಸಾರಿಗೆ ಸಿಬ್ಬಂದಿ ಅಲ್ಲಿ ಇಲ್ಲಿ ಸಣ್ಣಪುಟ್ಟ ಕೆಲಸ ಮಾಡಬೇಕಾಗಿತ್ತು.ಅಂಥಾ ಸನ್ನಿವೇಶದಲ್ಲಿ ಕಾರ್ಮಿಕರ ಕಷ್ಟಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ಕೂತುಬಿಟ್ಟಿತ್ತು.ಸಂಘದ ಲಾಭದಲ್ಲಿ ನಿರ್ದೇಶಕರು ಮಜಾ ಉಡಾಯಿಸಿದ್ರಷ್ಟೆ ಎಂದು  ನೊಂದ ಸಾರಿಗೆ ಸಿಬ್ಬಂದಿ ಸಾರ್ವಜನಿಕವಾಗಿ ಅಳಲು ತೋಡಿಕೊಂಡಿದ್ರು…

ಕೆಲವು ಸಾರಿಗೆ ಸಿಬ್ಬಂದಿ ಮಾಡಿಕೊಂಡ ಸಾಲ ತೀರಿಸ್ಲಿಕ್ಕಾಗದೆ ಆತ್ಮಹತ್ಯೆ ಮಾಡಿಕೊಂಡ್ರು.ಅವರ ಮನೆಗೆ ಭೇಟಿ ಕೊಟ್ಟು ಅವರ ಯೋಗಕ್ಷೇಮ ವಿಚಾರಿಸುವ ಕೆಲಸವನ್ನು ಸಂಘದ ಓರ್ವ ನಿರ್ದೇಶಕ ಮಾಡಲಿಲ್ಲ.ಸಾರಿಗೆ ಸಿಬ್ಬಂದಿಯ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವೇ ಸಂಘದಿಂದ ಆಗಿಲ್ಲ ಎನ್ನುವ ಗುರುತರ ಆರೋಪವಿದೆ.  ಸಾರಿಗೆ ಸಿಬ್ಬಂದಿ ಪುಣ್ಯಕ್ಕೆ ಸಧ್ಯ ಈಗ ಕೊರೊನಾ ಇಲ್ಲ..ಹಾಗಂತ ಪತ್ತಿನ ಸಹಕಾರ ಸಂಘದ ಆಡಳಿತ ಸರಿಯಾಗಿ,ಪಾರದರ್ಶಕವಾಗಿ,ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ..?ಮತ್ತೆ  ಡೌಟು ಎನ್ನುತ್ತಾರೆ ಪತ್ತಿನ ಸಹಕಾರ ಸಂಘದ ಹಣೇಬರಹವನ್ನು ಹತ್ತಿರದಿಂದ ನೋಡಿರುವ ಅನೇಕ ಸಾರಿಗೆ ಸಿಬ್ಬಂದಿ.   


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button