“ಅರಣ್ಯ ಇಲಾಖೆ” ಉದ್ದಾರಕ್ಕೆ “ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ” ದಿವಾಳಿಯಾಗಬೇಕಾ..?!
ಬೆಂಗಳೂರು: ಸರ್ಕಾರದ ಬೊಕ್ಕಸ ಬರಿದಾಗಿದೆಯೇ..? ಇಲಾಖೆಗಳನ್ನು ನಡೆಸ್ಲಿಕ್ಕೆ ಹಣದ ಕೊರತೆ ಎದುರಾಗಿದ್ಯಾ..? ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಬೊಕ್ಕಸದಲ್ಲಿದ್ದ ಹಣವನ್ನು ಅರಣ್ಯ ಇಲಾಖೆಯ ನಿರ್ವಹಣೆಗೆ ಬಿಡುಗಡೆ ಮಾಡುವಂತೆ ಸೂಚಿಸಿರುವ ಹಿನ್ನಲೆಯಲ್ಲಿ, ಫೈನಾನ್ಸ್ ಡಿಪಾರ್ಟ್ಮೆಂಟ್ ಮಂಡಳಿಗೆ ಬರೆದಿರುವ ಪತ್ರವೇ ಇಂತದ್ದೊಂದು ಅನುಮಾನ ಬಲಗೊಳಿಸುತ್ತದೆ.ತನ್ನದೇ ಶ್ರಮ-ಪ್ರಯತ್ನದಿಂದ ಸಂಪನ್ಮೂಲ ಕ್ರೋಢೀಕರಿಸಿಟ್ಟುಕೊಂಡಿರುವ ಮಂಡಳಿಯ ಹಣದಲ್ಲಿ ನೂರಾರು ಕೋಟಿ ಹಣವನ್ನು ಅನಾಮತ್ತಾಗಿ ಅರಣ್ಯ ಇಲಾಖೆಗೆ ಕೊಡುವಂತೆ ಆದೇಶಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಮಂಡಳಿಯ ಅಧಿಕಾರಿ-ನೌಕರರಲ್ಲಿ ಮೂಡಿದೆ.ಸರ್ಕಾರದ ಧೋರಣೆ ವಿರುದ್ಧ ಬಹಿರಂಗವಾಗಿಯೇ ತೊಡೆತಟ್ಟಲು ಮುಂದಾಗಿರುವ ಸಿಬ್ಬಂದಿ ಸೋಮವಾರದಿಂದ ಬಹುತೇಕ ಕಾರ್ಯಸ್ಥಗಿತಗೊಳಿಸಿ ಮುಷ್ಕರ ನಡೆಸುವ ಸಾಧ್ಯತೆಗಳಿವೆ.
ಸಚಿವರಾಗಿ ಈಶ್ವರ ಖಂಡ್ರೆ ಅಧಿಕಾರ ವಹಿಸಿಕೊಂಡಾಗ ನಿರಿಕ್ಷೆಗಳು ಗರಿಗೆದರಿದ್ದವು. ಮಂಡಳಿಯನ್ನು ಯಾವುದೋ ರೇಂಜ್ನಲ್ಲಿ ಅಭಿವೃದ್ಧಿ ಮಾಡಬಹುದೆನ್ನುವ ಅಧಿಕಾರಿ ಸಿಬ್ಬಂದಿಯಲ್ಲಿತ್ತು.ಇದೇ ಮಾತನ್ನು ಖಂಡ್ರೆ ಅವರು ಕೂಡ ಹೇಳುತ್ತಲೇ ಬಂದಿದ್ದರು.ಆದ್ರೆ ಅದೆಲ್ಲಾ ಕೇವಲ ಆರಂಭಶೂರತ್ವ ಎನ್ನುವುದಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ.ಈಶ್ವರ ಖಂಡ್ರೆ ಅವರು ಮಂಡಳಿಯನ್ನು ಯಾವ್ ಮಟ್ಟದಲ್ಲಿ ಉಪೇಕ್ಷಿಸಲಾರಂಭಿಸಿದ್ರು ಎಂದರೆ ಮಂಡಳಿಗೂ ನನಗೂ ಸಂಬಂಧವೇ ಇಲ್ಲದಂತಾಗಿಬಿಟ್ರು.ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಎನ್ನೋ ಒಂದು ಮಂಡಳಿ ತಮ್ಮ ಇಲಾಖೆ ವ್ಯಾಪ್ತಿಗೆ ಬರುತ್ತೆ ಎನ್ನೋದನ್ನೇ ಮರೆತುಬಿಟ್ರು. ಮಂಡಳಿಯಲ್ಲಿ ಏನಾಗ್ತಿದೆ..ಏನಾಗಬೇಕು ಎನ್ನುವ ಅವಶ್ಯಕತೆಯೇ ಎನ್ನುವಂತೆ ನಿರ್ಲಕ್ಷ್ಯ ಮಾಡಲಾ ರಂಭಿಸಿದ್ರು.ಮಂಡಳಿಯನ್ನು ಇಷ್ಟೊಂದು ತಾತ್ಸಾರ ಮನೋಭಾವದಿಂದ ನೋಡಿದ ಇದೇ ಸಚಿವ ಈಶ್ವರ ಖಂಡ್ರೆ ಅವರಿಗೀಗ ಮಂಡಳಿಯ ನೆನಪಾಗಿಬಿಟ್ಟಿದೆ.ಅದಕ್ಕೆ ಕಾರಣ,ತಮ್ಮ ಅರಣ್ಯ ಇಲಾಖೆಯ ಕಾರ್ಯಕ್ರಮಗಳಿಗೆ ಬೇಕರುವ ಹಣಕ್ಕಾಗಿ ಮಾತ್ರ.
ಅರಣ್ಯ ಇಲಾಖೆಯ ಅನೇಕ ಕಾರ್ಯಕ್ರಮಗಳ ನಿರ್ವಹಣೆಗೆ ಬಹುಷಃ ಹಣದ ಕೊರತೆ ಎದ್ದುಕಾಣುತ್ತಿರಬೇಕೇನೋ,ಅದಕ್ಕಾಗಿ ಸಚಿವರು ಸರ್ಕಾರದ ಮೇಲೆ ಹಣಕ್ಕಾಗಿ ಒತ್ತಡ ಹೇರಿರುವ ಸಾಧ್ಯತೆಗಳಿವೆ.ಸರ್ಕಾರಕ್ಕೂ ಬೇಕಿರುವುದು ಅದೇ ಅನ್ನಿಸುತ್ತೆ.ಏಕೆಂದರೆ ಸರ್ಕಾರದ ಖಜಾನೆಯಲ್ಲಿರುವ ಹಣವನ್ನೆಲ್ಲಾ ಗ್ಯಾರಂಟಿಗಳಿಗೆ ಸುರಿದು ಬಹುತೇಕ ಬರಿದು ಮಾಡಿಕೊಂಡಿದೆ.ಹಾಗಾಗಿ ಎಲ್ಲೆಲ್ಲಿ ಸಾಧ್ಯತೆಗಳಿವೆಯೋ ಅಲ್ಲಿಂದೆಲ್ಲಾ ಹಣ ಪಡೆದುಕೊಳ್ಳುವ ಐಡ್ಯಾಕ್ಕೆ ಕೈ ಹಾಕಿದೆ.ಅರಣ್ಯ ಇಲಾಖೆ ವಿಚಾರದಲ್ಲಿ ಆಗಿರುವುದು ಅದೇ ಎನ್ನಿಸುತ್ತೆ.ಅರಣ್ಯ ಇಲಾಖೆ ಹಣ ಕೇಳಿದಾಕ್ಷಣ,ಎಲ್ಲಿಂದ ಪಡೆಯಬಹುದೆಂಬ ಚರ್ಚೆ ನಡೆದಿದೆ.ಆ ವೇಳೆ 1000 ಕೋಟಿಯಷ್ಟು ಹಣವನ್ನು ಖಜಾನೆಯಲ್ಲಿಟ್ಟುಕೊಂಡಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೆನಪಾಗಿದೆ.ತಕ್ಷಣಕ್ಕೆ ಹಣಕಾಸು ಇಲಾಖೆ ಮೂಲಕ ಪತ್ರ ಬರೆಯಿಸಿ 200 ಕೋಟಿ ಹಣ ಬಿಡುಗಡೆ ಮಾಡುವಂತೆ ಸೂಚಿಸಿದೆ.
ಹಣವನ್ನು ನೇರವಾಗಿ ಪಡೆದ್ರೆ ವಿವಾದ ಆಗಬಹುದೆನ್ನುವ ಲೆಕ್ಕಾಚಾ್ರದಲ್ಲಿ ಈ ವ್ಯವಹಾರಕ್ಕೆ ಕೆಲವು ಷರತ್ತುಗಳನ್ನು ವಿಧಿಸಿದೆ.ಮಂಡಳಿಯ 200 ಕೋಟಿ ಹಣವನ್ನು ಅರಣ್ಯ ಇಲಾಖೆಗೆ 4 ವರ್ಷಗಳಿಗೆ ಅನ್ವಯ ವಾಗುವಂತೆ ಶೇಕಡಾ 7.5ರ ಬಡ್ಡಿ ದರದಲ್ಲಿ ಸಾಲದ ರುಪದಲ್ಲಿ ನೀಡುತ್ತಿರುವಂತೆ ಆದೇಶ ಹೊರಡಿಸಲಾಗಿದೆ.ಇದರ ಜತೆಗೆ ಅಗತ್ಯಬಿದ್ದರೆ 100 ಕೋಟಿ ಹಣವನ್ನು ಅರಣ್ಯಿಕರಣ ಕಾರ್ಯಕ್ರಮಕ್ಕೆ ನೀಡಬೇಕಾಗಿಬರಬಹುದೆನ್ನುವ ಮಾತನ್ನು ತಿಳಿಸಿದೆ.ಸರ್ಕಾರ ಹಾಗು ಹಣಕಾಸು ಇಲಾಖೆಗಳು ಫರ್ಮಾನ್ ಹೊರಡಿಸಿದ ಮೇಲೆ ತಮ್ಮದೇನಿದೆ ಎಂದು ಮಂಡಳಿಯ ಆಡಳಿತ ಶೀಘ್ರವೇ ನಡೆಯುವ ಸಭೆಯಲ್ಲಿ ಇದಕ್ಕೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆಗಳಿವೆ.ಈ ಹಿಂದೆಯೂ 200 ಕೋಟಿ ಹಣಕ್ಕೆ ಮಂಡಳಿ ಮುಂದೆ ಅರಣ್ಯ ಇಲಾಖೆ ಪ್ರಸ್ತಾವನೆ ಇಟ್ಟಿತ್ತು.ಆದರೆ ಮಾದ್ಯಮಗಳಲ್ಲಿನ ವರದಿಯಿಂದ ಎಚ್ಚೆತ್ತುಕೊಂಡು ಅದನ್ನು ರದ್ದು ಮಾಡಲಾಗಿತ್ತು.ಆದರೆ ಈಗಿನ ಪರಿಸ್ತಿತಿ ನೋಡಿದ್ರೆ ಈ 300 ಕೋಟಿ ಜತೆಗೆ ಪೆಂಡಿಂಗ್ ಉಳಿದಿದ್ದ 200 ಕೋಟಿ ಅಂದ್ರೆ ಒಟ್ಟು 500 ಕೋಟಿ ಅರಣ್ಯ ಇಲಾಖೆ ಬೊಕ್ಕಸ ಸೇರುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ.
ಅಂದ್ಹಾಗೆ ಸರ್ಕಾರ ತಿಳಿದುಕೊಂಡಂತೆ ಮಂಡಳಿಯ ಆರ್ಥಿಕತೆ ತುಂಬಾ ಚೆನ್ನಾಗೇನು ಇಲ್ಲ..ಮಂಡಳಿ ನಿರ್ವಹಣೆಗೆಂದು ಹಣವನ್ನು ಕ್ರೋಢೀಕರಿಸಿಡಲಾಗಿತ್ತಷ್ಟೆ.ಈಗ ಅರ್ಧಕ್ಕರ್ದ ಹಣವನ್ನು ಅರಣ್ಯ ಇಲಾಖೆಗೆ ಕೊಟ್ಟುಬಿಟ್ಟರೆ ಮಂಡಳಿಯ ಕಥೆ ಏನು..? ಅದರ ನಿರ್ವಹಣೆ ಹೇಗೆ..? ಪದೇ ಪದೇ ಮಂಡಳಿ ಹಣದ ಮೇಲೆ ಕಣ್ಣಾಕ್ತಾ ಹೋದ್ರೆ ಮಂಡಳಿ ಉಳಿಸೋರು ಯಾರು..ಎನ್ನುವ ಪ್ರಶ್ನೆ ಮಂಡಳಿ ಅಧಿಕಾರಿಸಿಬ್ಬಂದಿದು.ಮಂಡಳಿ ಸಭೆಯೇನು ಸರ್ಕಾರದ ಅಣತಿಯಂತೆ ನಡೆದುಕೊಳ್ಳುತ್ತೆ.ಆದರೆ ಇಲ್ಲಿ ಕೆಲಸ ಮಾಡೋರ ಕಥೆ ಏನಾಗಬೇಡ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಿಬ್ಬಂದಿ ಆರಂಭದಲ್ಲೆ ಇದಕ್ಕೆ ಬ್ರೇಕ್ ಹಾಕೊಕ್ಕೆ ನಿರ್ದರಿಸಿದಂತಿದೆ.ಹಾಗಾಗಿ ಇಂದು ಸಭೆ ನಡೆಸಿ ಸೋಮವಾರದಿಂದಲೇ ಕಾರ್ಯಸ್ಥಗಿತಗೊಳಿಸುವ ನಿರ್ದಾರಕ್ಕೆ ಬಂದಿದೆ ಎನ್ನಲಾಗ್ತಿದೆ.
ಸರ್ಕಾರ ತನ್ನ ನಿರ್ದಾರ ಬದಲಿಸಬೇಕು.ಹಣ ಬಿಡುಗಡೆ ಮಾಡುವಂತೆ ಹೊರಡಿಸಿರುವ ಆದೇಶ ವಾಪಸ್ ಪಡೆಯಬೇಕು.ಅರಣ್ಯ ಇಲಾಖೆಗೆ ಅಗತ್ಯಬಿದ್ದರೆ ಬೇರೆ ಮೂಲಗಳಿಂದ ಹಣ ಕೊಡಿಸಲಿ,ಮಂಡಳಿ ಹಣವೇ ಏಕೆ ಬೇಕು ಎಂದು ಮಂಡಳಿಯ ಅಧಿಕಾರಿ ನೌಕರರು ಪ್ರಶ್ನಿಸಿದ್ದಾರೆ.ಒಂದೇ ಇಲಾಖೆಯನ್ನು ನಡೆಸುವ ಸಚಿವರು ಅರಣ್ಯ ಇಲಾಖೆ ಉದ್ದಾರಕ್ಕೆ ಅವರದೇ ವ್ಯಾಪ್ತಿಗೆ ಬರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಬರ್ಬಾದ್ ಮಾಡೋದು ಸರಿನಾ..? ಅವರಿಗೇಕೆ ಇಂಥಾ ಬುದ್ದಿ ಬಂತು..ತಮ್ಮದೇ ಇಲಾಖೆಗಳ ನಡುವೆ ಬಿರುಕು ಮೂಡಿಸುವ ಕೆಲಸವನ್ನೇಕೆ ಮಾಡುತ್ತಿದ್ದಾರೆ..ಇದೆಲ್ಲಕ್ಕೂ ಸಚಿವರ ಕುಮ್ಮಕ್ಕೇ ಕಾರಣ ಎನ್ನುವುದು ಅನೇಕರ ಆಪಾದನೆ.ಆದರೆ ಅವರ ಉದ್ದೇಶ ಈಡೇರಲು ಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರಂತೆ.ಏನಾಗಬಹುದೆನ್ನುವುದಕ್ಕೆ ಸೋಮವಾರದವರೆಗು ಕಾಯಲೇಬೇಕಾಗುತ್ತದೆ.
ಅದೇನೇ ಇರಲಿ, ಅರಣ್ಯ ಇಲಾಖೆ ಉದ್ದಾರ ಮಾಡೊಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಬರ್ಬಾದ್ ಮಾಡೋದೇ ಸಚಿವರ ನಿರ್ದಾರವಾಗಿದ್ದಲ್ಲಿ ಇದಕ್ಕಿಂತ ಕೆಟ್ಟ ನಿರ್ದಾರ ಇನ್ನೊಂದಿರಲಾರದು. ಈ ನಿರ್ಣಯವನ್ನು ಸಚಿವರು ವಾಪಸ್ ಪಡೆಯಬೇಕಾಗುತ್ತದೆ.ಇಲ್ಲವಾದಲ್ಲಿ ಮಂಡಳಿಯ ಸಾವಿರಾರು ಅಧಿಕಾರಿ ಸಿಬ್ಬಂದಿಯ ಹಿಡಿಶಾಪಕ್ಕೆ ತುತ್ತಾಗಬೇಕಾಗಬಹುದೇನೋ..?!