ONLINE NEWS
ಬಿಮ್ಸ್ ವೈದ್ಯರ ನಿರ್ಲಕ್ಷ ವೇ ಮುಖ್ಯ ಕಾರಣ ತಪ್ಪಿಸ್ತರ ವಿರುದ್ಧ ಕೊಡಲೇ ಕ್ರಮ ಕೈಕೋಳ ಬೇಕು… ಬಡ ಕುಟುಂಬಕೆ ನ್ಯಾಯ ಸಿಗಬೇಕು…
[et_pb_section][et_pb_row][et_pb_column type=”4_4″][et_pb_text]ಭಾರತ ಟೈಮ್ಸ್ :ಬೆಳಗಾವಿ: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃತಪಟ್ಟ ಘಟನೆ ಇಲ್ಲಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು, ರೊಚ್ಚಿಗೆದ್ದ ಕುಟುಂಬಸ್ಥರು ಬಿಮ್ಸ್ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕಲ್ಪನಾ ರಾಠೋಡ ಎಂಬ ಬಾಣಂತಿ ಮೃತಪಟ್ಟಿದ್ದರಿಂದ ಕುಟುಂಬಸ್ಥರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದರು. ಬಿಮ್ಸ್ ಆಸ್ಪತ್ರೆ ಮುಂದೆ ಮೃತ ಬಾಣಂತಿ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಸಾವನ್ನಪ್ಪಿದ್ದಾಳೆ. ಬಾಣಂತಿಗೆ ಎರಡೆರಡು ಬಾರಿ ಸಿಸೇರಿಯನ್ ಮಾಡಿದ್ದಾರೆ. ಆಪರೇಷನ್ ಸಂದರ್ಭದಲ್ಲಿ ಹಾಕುವ ವಸ್ತ್ರ ಧರಿಸಿಲ್ಲ, ತರಾತುರಿಯಲ್ಲಿ ಸಿಸೇರಿಯನ್ ಮಾಡಿದ್ದಾರೆ ಎಂದು ಆರೋಪಿಸಿದರು. ಬಾಣಂತಿ ಆರೋಗ್ಯದಲ್ಲಿ ಏರುಪೇರಾದಾಗ ಡಿಸ್ಟಾರ್ಜ್ ಮಾಡುವಂತೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದರು. ಕುಟುಂಬಸ್ಥರು ಮನವಿ ಮಾಡಿದರೂ ಬಾಣಂತಿಯನ್ನು ಬೇರೆ ಆಸ್ಪತ್ರೆಗೆ ಕಳುಹಿಸದೇ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ. ನಿರ್ಲಕ್ಷ್ಯ ತೋರಿದ ವೈದ್ಯರನ್ನು ಕೂಡಲೇ ವಜಾ ಮಾಡುವಂತೆ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ[/et_pb_text][/et_pb_column][/et_pb_row][/et_pb_section]