BREAKING NEWSKANNADAFLASHNEWSPhoto Gallery

ಕನ್ನಡ ರಾಜ್ಯೋತ್ಸವ-2024 ಪ್ರಶಸ್ತಿ ಪ್ರಕಟ-ಹೇಮಾ ಚೌಧರಿ, ವೀರಪ್ಪ ಮೊಯ್ಲಿ, ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್ ಸೇರಿ 69 ಸಾಧಕರಿಗೆ ಪ್ರಶಸ್ತಿಯ ಗರಿ

Share

ಮಾಜಿ ಮುಖ್ಯಮಂತ್ರಿ  ಡಾ. ಎಂ. ವೀರಪ್ಪ ಮೊಯಿಲಿ. ,ನಟಿ ಹೇಮಾ ಚೌಧರಿ, ಪವಾಡ ಭಂಜಕ ಖ್ಯಾತಿಯ ಹುಲಿಕಲ್ ನಟರಾಜ್, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಶಿಲ್ಪಿ ಅರುಣ್ ಯೋಗಿರಾಜ್, ಪ್ರೊ. ಟಿ.ವಿ. ರಾಮಚಂದ್ರ ಅವರಿಗೆ ಪ್ರಶಸ್ತಿ

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು: 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಗಣನೀಯ ಸಾಧನೆಯ ಹಿನ್ನಲೆಯಲ್ಲಿ 69 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಅಧೀಕೃತವಾಗಿ ಪ್ರಕಟಿಸಿದ್ದಾರೆ.

ಅಂದ್ಹಾಗೆ ಪ್ರಶಸ್ತಿ ಪುರಸ್ಕ್ರತರ ಪಟ್ಟಿ ಕೆಳಕಂಡಂತಿದೆ. ಇಮಾಮಸಾಬ ಎಂ. ವಲ್ಲೆಪನವರ,ಅಶ್ವ ರಾಮಣ್ಣ, ಕುಮಾರಯ್ಯ, ವೀರಭದ್ರಯ್ಯ, ನರಸಿಂಹಲು (ಅಂಧ ಕಲಾವಿದ),ಬಸವರಾಜ ಸಂಗಪ್ಪ ಹಾರಿವಾಳ,ಎಸ್.ಜಿ. ಲಕ್ಷ್ಮೀದೇವಮ್ಮ,ಪಿಚ್ಚಳ್ಳಿ ಶ್ರೀನಿವಾಸ,ಲೋಕಯ್ಯ ಶೇರ (ಭೂತಾರಾಧನೆ) ಪ್ರಶಸ್ತಿ ನೀಡಲಾಗಿದೆ. ಚಲನಚಿತ್ರಕಿರುತೆರೆ ವಿಭಾಗದಲ್ಲಿ ನಟಿ ಹೇಮಾ ಚೌಧರಿ, ಎಂ.ಎಸ್.ನರಸಿಂಹಮೂರ್ತಿ, ಸಂಗೀತ ಕ್ಷೇತ್ರದಲ್ಲಿ ಪಿ ರಾಜಗೋಪಾಲ,ಎಎನ್​ ಸದಾಶಿವಪ್ಪ ಅವರಿಗೆ ಪ್ರಶಸ್ತಿ ಲಭಿಸಿದೆ.

ಇನ್ನು  ನೃತ್ಯ ವಿಭಾಗದಲ್ಲಿ ವಿದುಷಿ ಲಲಿತಾ ರಾವ್, ಆಡಳಿತ ಕ್ಷೇತ್ರದಲ್ಲಿ ಎಸ್​ವಿ ರಂಗನಾಥ್( ಮಾಜಿ ಮುಖ್ಯ ಕಾರ್ಯದರ್ಶಿ),ವೈದ್ಯಕೀಯ ಕ್ಷೇತ್ರದಲ್ಲಿ ಡಾ ಜೆಬಿ ಬಿಡನಹಾಳ,  ಡಾ ಮೈಸೂರು ಸತ್ಯಾನಾರಾಯಣ. ಡಾ ಲಕ್ಷ್ಮಣ ಹನುಮಂತಪ್ಪ ಬಿದರಿ,ಸಮಾಜ ಸೇವೆಗೆ ವೀರಸಂಗಯ್ಯ,  ಹೀರಾಚಂದ್ ವಾಗ್ಮರೆ, ಮಲ್ಲಮ್ಮ ಸೂಲಗಿತ್ತಿ, ದಿಲೀಪ್ ಕುಮಾರ್. ಸಂಕೀರ್ಣ ಕ್ಷೇತ್ರದಲ್ಲಿ ಪವಾಡ ಭಂಜಕ ಖ್ಯಾತಿಯ ಹುಲಿಕಲ್ ನಟರಾಜ್, ಹೆಚ್​ಆರ್​ ಸ್ವಾಮಿ, ಪ್ರಹ್ಲಾದ ರಾವ್, ಕೆ ಅಜಿತ್ ಕುಮಾರ್ ರೈ, ಇರ್ಫಾನ್ ರಜಾಕ್, ವಿರೂಪಾಕ್ಷಪ್ಪ ರಾಮಚಂದ್ರಪ್ಪ ಹಾವನೂರು ಅವರಿಗೆ ಪ್ರಶಸ್ತಿ ದೊರೆತಿದೆ.

ಹಾಗೆಯೇ ಹೊರದೇಶಹೊರನಾಡು ವಿಭಾಗದಲ್ಲಿ ಕನ್ನಯ್ಯ ನಾಯ್ಡು, ಡಾ. ತುಂಬೆ ಮೊಹಿಯುದ್ದೀನ್, ಚಂದ್ರಶೇಖರ್ ನಾಯಕ್, ಪರಿಸರ ವಿಭಾಗದಲ್ಲಿ ಆಲ್ಮಿತ್ರಾ ಪಟೇಲ್, ಕೃಷಿ ವಿಭಾಗದಲ್ಲಿ ಶಿವನಾಪುರ ರಮೇಶ, ಪುಟ್ಟೀರಮ್ಮ, ಮಾಧ್ಯಮ ಕ್ಷೇತ್ರದಲ್ಲಿ ಎನ್.ಎಸ್. ಶಂಕರ್, ಸನತ್ ಕುಮಾರ್ ಬೆಳಗಲಿ, ಎ.ಜಿ. ಕಾರಟಗಿ, ರಾಮಕೃಷ್ಣ ಬಡಶೇಶಿ, ಸಾಹಿತ್ಯ ಕ್ಷೇತ್ರದಲ್ಲಿ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಶಿಲ್ಪಕಲೆ ಕ್ಷೇತ್ರದಲ್ಲಿ  ಶಿಲ್ಪಿ ಅರುಣ್ ಯೋಗಿರಾಜ್ (ಅಯೋಧ್ಯಾ ಬಾಲರಾಮನ ಶಿಲ್ಪಿ), ವಿಜ್ಞಾನತಂತ್ರಜ್ಞಾನದಲ್ಲಿ ಪ್ರೊ. ಟಿ.ವಿ. ರಾಮಚಂದ್ರ, ಸುಬ್ಬಯ್ಯ ಅರುಣನ್ ಅವರಿಗೆ ಪ್ರಶಸ್ತಿ ಸಂದಾಯವಾಗಿದೆ.

ಮುಂದುವರೆದು ಸಹಕಾರ ಕ್ಷೇ್ತ್ರದಲ್ಲಿವಿರೂಪಾಕ್ಷಪ್ಪ ನೇಕಾರ,ಬಯಲಾಟದಲ್ಲಿ ಸಿದ್ಧಪ್ಪ ಕರಿಯಪ್ಪ(ಅಂಧ ಕಲಾವಿದ), ನಾರಾಯಣಪ್ಪ ಶಿಳ್ಳೇಕ್ಯಾತ, ಯಕ್ಷಗಾನ  ಕ್ಷೇತ್ರದಲ್ಲಿ ಕೇಶವ್ ಹೆಗಡೆ, ಸೀತಾರಾಮ ತೋಳ್ಪಾಡಿ, ರಂಗಭೂಮಿಯಲ್ಲಿ ಸರಸ್ವತಿ ಜುಲೈಕ ಬೇಗಂ, ಓಬಳೇಶ್ ಹೆಚ್.ಬಿ., ಭಾಗ್ಯಶ್ರೀ ರವಿ, ಡಿ. ರಾಮು, ಜನಾರ್ಧನ್ ಹೆಚ್‌., ಹನುಮಾನದಾಸವ. ಪವಾರ,ಸಾಹಿತ್ಯ ದಲ್ಲಿ  ಬಿ.ಟಿ. ಲಿಲಿತಾ ನಾಯಕ್ , ಅಲ್ಲಮಪ್ರಭು ಬೆಟ್ಟದೂರು. ಡಾ. ಎಂ. ವೀರಪ್ಪ ಮೊಯಿಲಿ. ಹನುಮಂತರಾವ್ ದೊಡ್ಡಮನಿ, ಡಾ. ಬಾಳಾಸಾಹೇಬ್ ಲೋಕಾಪುರ, ಬೈರಮಂಗಲ ರಾಮೇಗೌಡ. ಡಾ. ಪ್ರಶಾಂತ್ ಮಾಡ್ತಾ ಅವರಿಗೆ ಪ್ರಶಸ್ತಿ ಲಭಿಸಿದ್ದರೆ, ಶಿಕ್ಷಣದಲ್ಲಿ ಡಾ. ವಿ. ಕಮಲಮ್ಮ, ಡಾ. ರಾಜೇಂದ್ರ ಶೆಟ್ಟಿ., ಡಾ. ಪದ್ಮಾ ಶೇಖರ್, ಕ್ರೀಡೆ ಕ್ಷೇತ್ರದಲ್ಲಿ ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್, ಗೌತಮ್ ವರ್ಮ, ಆರ್‌. ಉಮಾದೇವಿ , ನ್ಯಾಯಾಂಗದಲ್ಲಿ  ಬಾಲನ್,ಚಿತ್ರಕಲೆಯಲ್ಲಿ ಪ್ರಭು ಹರಸೂರು, ಕರಕುಶಲ ಕ್ಷೇತ್ರದಲ್ಲಿ ಚಂದ್ರಶೇಖರ ಸಿರಿವಂತೆ ಅವರಿಗೆ ಪ್ರಶಸ್ತಿ ಲಭಿಸಿದೆ. ಎಲ್ಲಾ ಪ್ರಶಸ್ತಿ ವಿಜೇತರಿಗೂ ಕನ್ನಡ ಫ್ಲ್ಯಾಶ್ ನ್ಯೂಸ್ ಅಭಿನಂದನೆ ಸಲ್ಲಿಸುತ್ತದೆ.


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button