BREAKING NEWSCINEMAPhoto Gallery

ACTOR DARSHAN HOSPITALISED…BGS ಆಸ್ಪತ್ರೆಗೆ ದರ್ಶನ್‌ ಅಡ್ಮಿಟ್- 2 ದಿನ‌ ಚಿಕಿತ್ಸೆ-ದರ್ಶನ್‌ ಎಡಗಾಲಿನ ಸ್ಪರ್ಷ ಕುಂಠಿತ..!

Share

ಕುಂಟುತ್ತಲೇ ಆಸ್ಪತ್ರೆಗೆ ಬಂದ ದರ್ಶನ್‌
ಕುಂಟುತ್ತಲೇ ಆಸ್ಪತ್ರೆಗೆ ಬಂದ ದರ್ಶನ್‌

ಬೆಂಗಳೂರು: 131 ದಿನಗಳ ಬಳಿಕ ಜೈಲ್‌ ನಿಂದ ಬಿಡುಗಡೆಯಾದರೂ ಅದೇಕೋ ನಟ ದರ್ಶನ್‌( ACTOR DARSHAN) ಗೆ ಚಾಲೆಂಜಸ್‌ ಗಳು ತಪ್ಪಿಲ್ಲ ಎನ್ನಿಸುತ್ತದೆ.ಜೈಲ್‌ ನಿಂದ ಬಿಡುಗಡೆಯಾಗಿ ಮಗ ವಿನೀಶ್‌ ( SON VINEESH) ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದನ್ನು ಬಿಟ್ಟರೆ ಕಾನೂನಿನ ಕುಣಿಕೆ ದರ್ಶನ್‌ ನೆಮ್ಮದಿಯಾಗಿ ಇರೊಕ್ಕೆ ಬಿಡ್ತಿಲ್ಲ ಎನ್ನಿಸುತ್ತದೆ.ದರ್ಶನ್‌ ಗೆ ಬೇಲ್‌ ಸಿಕ್ಕಿರುವುದನ್ನು ಸುಪ್ರಿಂ ಕೋರ್ಟ್‌ ನಲ್ಲಿ ಪ್ತಶ್ನಿಸಲು ಪೊಲೀಸ್‌ ಇಲಾಖೆ ನಿರ್ದರಿಸಿದೆ ಎನ್ನುವ ಸುದ್ದಿ ಪಸರ್‌ ಆಗುತ್ತಿದ್ದಂತೆ ದರ್ಶನ್‌ ಗಂಟು ಮೂಟೆ ಕಟ್ಟಿಕೊಂಡು ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್‌ ಆಸ್ಪತ್ರೆ( BGS HOSPITAL IN KENGRI) ಗೆ ತಪಾಸಣೆಗೆಂದು ಬಂದಿದ್ದಾರೆ.

ಹಾಗೆ ನೋಡಿದ್ರೆ ಹಬ್ಬ ಮುಗಿಸಿಕೊಂಡು ದರ್ಶನ್‌ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗುತ್ತಾರೆನ್ನುವ ಮಾತುಗಳಿತ್ತು.ಆದರೆ ಕೋರ್ಟ್‌ ನಲ್ಲಿ ಬೇಲ್‌ ವಿರುದ್ಧ ಮೇಲ್ಮನವಿ ಸಲ್ಲಿಸೊಕ್ಕೆ  ಬೆಂಗಳೂರು ಪೊಲೀಸ್‌ ಆಯುಕ್ತ  ದಯಾನಂದ್‌ ತಯಾರಿ ನಡೆಸಿರುವ ವಿಚಾರ ಹೇಳುತ್ತಿದ್ದಂತೆ ದರ್ಶನ್‌ ಗೆ ನೆಲವೇ ಕುಸಿದಂತಾಗಿದೆ. ತಡಮಾಡಿದ್ರೆ ತೊಂದರೆ ಎನ್ನುವ ಕಾರಣಕ್ಕೆ ಆಸ್ಪತ್ರೆಗೆ ಇವತ್ತೇ ತಪಾಸಣೆಗೆಂದು ಬಂದಿದ್ದಾರೆ.

ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆ
ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆ

ಅಗಾಧ ಪ್ರಮಾಣದ ಬೆನ್ನುನೋವಿಂದ ಬಳಲುತ್ತಿರುವ ದರ್ಶನ್‌ ಆಸ್ಪತ್ರೆಗೆ ನೋವಿನಿಂದಲೇ ಆಗಮಿಸಿದ್ದಾರೆ. ಕುಂಟುತ್ತಲೇ ಕಾರಿನಿಂದಲೇ ಇಳಿದು ತಮ್ಮ ಪತ್ನಿ ವಿಜಯಲಕ್ಷ್ಮಿ ಸಮೇತ ಒಳ ಹೋದರು.ಆಸ್ಪತ್ರೆಯಲ್ಲಿ ದರ್ಶನ್‌ ತಪಾಸಣೆಗೆ ಒಳಪಡಲಿದ್ದು ಅವರ ಆರೋಗ್ಯ ಸ್ಥಿತಿ ಏನಾಗಿದೆ ಎನ್ನುವುದನ್ನು ವೈದ್ಯರು ತಿಳಿಸಲಿದ್ದಾರೆ.

ಪತ್ನಿ ವಿಜಯಲಕ್ಷ್ಮಿ ಜತೆ ಆಸ್ಪತ್ರೆಗೆ ಆಗಮಿಸಿದ ನಟ ದರ್ಶನ್
ಪತ್ನಿ ವಿಜಯಲಕ್ಷ್ಮಿ ಜತೆ ಆಸ್ಪತ್ರೆಗೆ ಆಗಮಿಸಿದ ನಟ ದರ್ಶನ್

ದರ್ಶನ್‌ ಗೆ ಚಿಕಿತ್ಸೆ ನೀಡುತ್ತಿರುವ  ವೈದ್ಯ ನವೀನ್ ಅಪ್ಪಾಜಿ ಗೌಡ ಅವರು, ದರ್ಶನ್ ಅಡ್ಮಿಟ್ ಆಗಿದ್ದಾರೆ.ಬೆನ್ನುನೋವು ಅಂತ ಅಡ್ಮಿಟ್ ಆಗಿದ್ದಾರೆ.ಕಾಲಿನ ನೋವು ಹೆಚ್ಚಾಗಿದೆ.ಎಲ್ಲ ರೀತಿ ಟೆಸ್ಟ್ ಮಾಡಬೇಕಿದೆ.ಸದ್ಯ ಎಡಗಾಲು ತುಂಬಾ ನೋವು. ಬೆನ್ನು ನೋವಿಗೆ ಪರೀಕ್ಷೆ ಮಾಡಬೇಕಿದೆ.48 ಗಂಟೆಗಳಲ್ಲಿ ವರದಿ ಬರಲಿದೆ. ಎಡಗಾಲು ಸ್ವರ್ಶ ಕಡಿಮೆಯಾಗಿದೆ ಎಂದರು.

ಬಿಜಿಎಸ್ ಆಸ್ಪತ್ರೆಯಲ್ಲಿ ನ್ಯೂರೋ ಸರ್ಜನ್ ಆಗಿರುವ ವೈದ್ಯ ನವೀನ್‌ ಅವರ ಪ್ರಕಾರ ರಕ್ತಪರೀಕ್ಷೆ MRI ಸ್ಕ್ಯಾನಿಂಗ್ ಸೇರಿ ಕೆಲ ಪರೀಕ್ಷೆ ನಡೆಸಲಾಗತ್ತೆ.ದರ್ಶನ್ ರಿಗೆ ಬೆನ್ನು ನೋವಿನ ಜೊತೆ ಕಾಲು ನೋವು ಇದೆಕಾಲು ನೋವಿನ ಜೊತೆಗೆ ಎಡಗಾಲಿನ ಸೆಳೆತ ಇದೆ.ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.ಮುಂದಿನ ಎರಡು ದಿನಗಳ ಕಾಲ ದರ್ಶನ್ ಆಸ್ಪತ್ರೆಯಲ್ಲಿ ಇರ್ತಾರೆ   ಎಂದಿದ್ದಾರೆ.

ದರ್ಶನ್‌ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆನ್ನುವ ಮಾತು ಕೇಳಿಬರುತ್ತಿದ್ದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಆಸ್ಪತ್ರೆ ಬಳಿ ಜಮಾಯಿಸಿ ಜೈ ಡಿ ಬಾಸ್‌ ಎನ್ನುವ ಘೋಷಣೆ ಕೂಗುತ್ತಿದ್ದಾರೆ.ಅಲ್ಲದೇ ದರ್ಶನ್‌ ಅವರ ಆರೋಗ್ಯದಲ್ಲಿ ಶೀಘ್ರ ಚೇತರಿಕೆ ಕಾಣಿಸಿಕೊಳ್ಳಲು ದೇವರ ಮೊರೆ ಹೋಗಿದ್ದಾರೆ.

ACTOR DARSHAN HOSPITALISED…BGS ಆಸ್ಪತ್ರೆಗೆ ದರ್ಶನ್‌ ಅಡ್ಮಿಟ್- 2 ದಿನ‌ ಚಿಕಿತ್ಸೆ-ದರ್ಶನ್‌ ಎಡಗಾಲಿನ ಸ್ಪರ್ಷ ಕುಂಠಿತ..!


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button