BREAKING NEWSCITYKANNADAFLASHNEWS

ಬ್ಲಿಂಕಿಟ್, ಸ್ವಿಗ್ಗಿ, ಜೆಪ್ಟೊ ಡೆಲಿವರಿ ಕಂಪನಿಗಳ ವಿರುದ್ಧ ತನಿಖೆಗೆ ಆಗ್ರಹ

Share

ಜೊಮೊಟೊದ ಬ್ಲಿಂಕಿಟ್, ಜೆಪ್ಟೊ, ಸ್ವಿಗ್ಗಿ ಸಂಸ್ಥೆಗಳು ಫುಡ್ ಡೆಲಿವರಿ ವಿಧಿಸುತ್ತಿರುವ ಶುಲ್ಕದ ಬಗ್ಗೆ ತನಿಖೆ ನಡೆಸಬೇಕು ಎಂದು ದೇಶದ ಅತೀ ದೊಡ್ಡ ಚಿಲ್ಲರೆ ಸಾಗಾಟದಾರರ ಒಕ್ಕೂಟ ಭಾರತೀಯ ಸ್ಪರ್ಧಾತ್ಮಕ ಆಯೋಗವನ್ನು ಆಗ್ರಹಿಸಿದೆ.

ಆಹಾರ ಧಾನ್ಯಗಳಿಂದ ಹಿಡಿದು ಎಲೆಕ್ಟ್ರಾನಿಕ್ ವಸ್ತುಗಳನ್ನು ಕೇವಲ 10 ನಿಮಿಷದಲ್ಲಿ ತಲುಪಿಸುತ್ತೇವೆ ಎಂಬ ಭರವಸೆ ನೀಡುವ ಡೆಲಿವರಿ ಕಂಪನಿಗಳು ಖರೀದಿ ವ್ಯವಸ್ಥೆಯನ್ನೇ ಬದಲಿಸಿವೆ. ಅಮೆಜಾನ್ ಕಂಪನಿ ಇ-ಕಾಮರ್ಸ್ ಕಾಲಿಟ್ಟ ನಂತರ ಪ್ರತಿಯೊಂದು ವಸ್ತುಗಳು ಮನೆ ಬಾಗಿಲಿಗೆ ಡೆಲಿವರಿ ನೀಡುತ್ತಿವೆ.

ನೆಸ್ಟ್ಲೆ, ಹಿಂದೂಸ್ತಾನ್ ಯುನಿಲಿವರ್ ನಂತಹ ಬೃಹತ್ ಕಂಪನಿಗಳಿಂದ ಹಿಡಿದು ಸುಮಾರು 4 ಲಕ್ಷ ಚಿಲ್ಲರೆ ಸರಬರಾಜುದಾರರನ್ನೊಳಗೊಂಡ ಅಖಿಲ ಭಾರತ ಗ್ರಾಹಕರ ಉತ್ಪನ್ನ ಸರಬರಾಜು ಒಕ್ಕೂಟ ಪತ್ರ ಬರೆದಿದ್ದು, ಚಿಲ್ಲರೆ ವ್ಯಾಪಾರದ ಶುಲ್ಕದ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಜೊಮೊಟೊ, ಬ್ಲಿಂಕಿಟ್ ಮತ್ತು ಸ್ವಿಗ್ಗಿ ಕಂಪನಿಗಳು ಕ್ಷಿಪ್ರವಾಗಿ ಉತ್ಪನ್ನಗಳನ್ನು ತಲುಪಿಸುವುದರಿಂದ ಬೃಹತ್ ಕಂಪನಿಗಳು ನೇರವಾಗಿ ಈ ಕಂಪನಿಗಳ ಜೊತೆ ಕೈ ಜೋಡಿಸುತ್ತಿರುವುದರಿಂದ ದಶಕಗಳಿಂದ ನಡೆಯುತ್ತಿರುವ ಅಂಗಡಿಯಿಂದ ಅಂಗಡಿಗೆ ಉತ್ಪನ್ನ ತಲುಪಿಸುವ ಸಂಪ್ರದಾಯಕ್ಕೆ ಧಕ್ಕೆ ತಂದಿದೆ.

ಇ-ಕಾಮರ್ಸ್ ಮೂಲಕ ಡೆಲಿವರಿ ಮಾಡುವ ಹೊಸ ವಿಧಾನದಿಂದ ಸಾಂಪ್ರದಾಯಿಕ ಚಿಲ್ಲರೆ ವ್ಯಾಪಾರಿಗಳಿಗೆ ಸ್ಪರ್ಧಿಸಲು ಅಥವಾ ಬದುಕಲು ಅಸಾಧ್ಯವಾಗಿದೆ. ಸಾಂಪ್ರದಾಯಿಕ ವಿತರಕರು ಮತ್ತು ಸಣ್ಣ ಚಿಲ್ಲರೆ ವ್ಯಾಪಾರಿಗಳ ಹಿತಾಸಕ್ತಿ ಕಾಪಾಡಲು ರಕ್ಷಣಾತ್ಮಕ ಕ್ರಮಗಳನ್ನು ಜಾರಿಗೊಳಿಸಿ ಎಂದು ಭಾರತೀಯ ಸ್ಪರ್ಧಾತ್ಮಕ ಆಯೋಗವನ್ನು (CCI) ಚಿಲ್ಲರೆ ಸರಬರಾಜುದಾರರ ಒಕ್ಕೂಟ ಒತ್ತಾಯಿಸಿದೆ.

ಇ-ಕಾಮರ್ಸ್ ಕಂಪನಿಗಳು ವಾರ್ಷಿಕ ಮಾರಾಟ 6 ಶತಕೋಟಿ ಡಾಲರ್ ಗೆ ಏರಿಕೆಯಾಗಿದ್ದು, ಬ್ಲಿಂಕಿಟ್ ಕಂಪನಿ ಶೇ.40ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದರೆ, ಸ್ವಿಗ್ಗಿ ಮತ್ತು ಜೆಪ್ಟೊ ತಲಾ ಶೇ.30ರಷ್ಟು ಪಾಲನ್ನು ಹೊಂದಿದೆ ಎಂದು ಸಂಶೋಧನಾ ಸಂಸ್ಥೆ ಡಾಟಮ್ ಇಂಟೆಲಿಜೆನ್ಸ್ ಹೇಳಿದೆ.

ಇ-ಕಾಮರ್ಸ್ ಕಂಪನಿಗಳಾದ ಅಮೆಜಾನ್ ಮತ್ತು ವಾಲ್‌ಮಾರ್ಟ್‌ನ ಫ್ಲಿಪ್‌ಕಾರ್ಟ್ ಮುಂತಾದ ಕಂಪನಿಗಳ ದರಗಳು ನಿಯಮ ಬಾಹಿರವಾಗಿವೆ. ಈ ಮೂಲಕ ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ.


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button