BREAKING NEWSCINEMAKANNADAFLASHNEWS
ನಟಿ ಅಮೂಲ್ಯ ಸೋದರ, ನಿರ್ದೇಶಕ ದೀಪಕ್ ಅರಸ್ 42 ವಯಸ್ಸಿಗೆ ನಿಧನ
ನಟಿ ಅಮೂಲ್ಯ ಸೋದರ ಹಾಗೂ ಕನ್ನಡ ಚಿತ್ರ ನಿರ್ದೇಶಕ ದೀಪಕ್ ಅರಸ್ ಅನಾರೋಗ್ಯದ ಕಾರಣ ಗುರುವಾರ ನಿಧನರಾಗಿದ್ದು, ಅವರಿಗೆ 42 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ದೀಪಕ್ ಅರಸ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ದೀಪಕ್ ಅರಸ್ ಮನಸಾಲಜಿ, ಶುಗರ್ ಫ್ಯಾಕ್ಟರಿ ಎಂಬ ಎರಡು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಅಲ್ಲದೇ ಟೂರ್ ಅಂಡ್ ಟ್ರಾವೆಲ್ಸ್ ನಡೆಸುತ್ತಿದ್ದರು.