BREAKING NEWSCINEMA

5 ಕೋಟಿ ರೂ.ಗೆ ಡಿಮ್ಯಾಂಡ್: ಸಲ್ಮಾನ್ ಖಾನ್ ಗೆ ಹೊಸ ಬೆದರಿಕೆ

Share

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಹೊಸದಾಗಿ ಮತ್ತೊಂದು ಬೆದರಿಕೆ ಕರೆ ಬಂದಿದ್ದು, 5 ಕೋಟಿ ರೂ. ಕೊಟ್ಟು ಲಾರೆನ್ಸ್ ಬಿಶ್ನೋಯಿ ಜೊತೆಗಿನ ವೈರತ್ವಕ್ಕೆ ಕೊನೆ ಮಾಡಿ ಎಂದು ಬೆದರಿಸಲಾಗಿದೆ.

ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಪ್ ಗ್ರೂಪ್ ಗೆ ಬಂದಿರುವ ಸಂದೇಶದಲ್ಲಿ ಲಾರೆನ್ಸ್ ಬಿಶ್ನೋಯಿ ಗುಂಪಿನವರು ಎಂದು ಶಂಕಿಸಲಾದ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ.

ಸಲ್ಮಾನ್ ಖಾನ್ ಒಂದು ವೇಳೆ 5 ಕೋಟಿ ರೂ. ನೀಡದೇ ಇದ್ದರೆ ಇತ್ತೀಚೆಗೆ ಹತ್ಯೆಯಾದ ಶಾಸಕ ಬಾಬಾ ಸಿದ್ದಿಕಿಗೆ ಆದ ಸ್ಥಿತಿಗಿಂತ ಹೀನಾಯ ಸ್ಥಿತಿ ಅನುಭವಿಸಬೇಕಾಗುತ್ತದೆ ಎಂದು ಬೆದರಿಸಲಾಗಿದೆ.

ಇದನ್ನು ಹಗುರವಾಗಿ ಪರಿಗಣಿಸಬೇಡಿ. ಲಾರೆನ್ಸ್ ಬಿಶ್ನೋಯಿ ಜೊತೆಗಿನ ವೈರತ್ವ ಕೊನೆ ಮಾಡಿ ಬದುಕಿರಬೇಕು ಅಂದರೆ ಸಲ್ಮಾನ್ ಖಾನ್ 5 ಕೋಟಿ ರೂ. ಕೊಡಬೇಕು. ಒಂದು ವೇಳೆ ನೀಡದೇ ಇದ್ದರೆ ಬಾಬಾ ಸಿದ್ದಿಕಿಗಿಂತ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಸಂದೇಶ ಕಳುಹಿಸಲಾಗಿದೆ.

ಪೊಲೀಸರು ಬೆದರಿಕೆ ಸಂದೇಶ ಬೆನ್ನುಹತ್ತಿ ತನಿಖೆ ಆರಂಭಿಸಿದ್ದು, ಸಲ್ಮಾನ್ ಖಾನ್ ಗೆ ನೀಡಲಾಗಿರುವ ಭದ್ರತೆಯನ್ನು ಹೆಚ್ಚಿಸಲಾಗಿದೆ.


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button