BREAKING NEWSCITY
ರೈಲ್ವೆ ಹಳಿ ಮೇಲೆ ಗ್ಯಾಸ್ ಸಿಲಿಂಡರ್ ಪತ್ತೆ: ತಪ್ಪಿದ ದುರಂತ
ರೈಲ್ವೆ ಹಳಿ ಮೇಲೆ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದ್ದು, ಸ್ವಲ್ಪದರಲ್ಲೇ ದುರಂತವೊಂದು ತಪ್ಪಿದ ಘಟನೆ ಉತ್ತರಾಖಂಡ್ ನ ರೂರ್ಕಿಯಲ್ಲಿ ಜರುಗಿದೆ.
ಗೂಡ್ಸ್ ರೈಲಿನ ಲೋಕೋ ಪೈಲೆಟ್ ಗ್ಯಾಸ್ ಸಿಲಿಂಡರ್ ಕಂಡು ಕೂಡಲೇ ರೈಲನ್ನು ನಿಲ್ಲಿಸಿದ್ದಾರೆ. ಇದರಿಂದ ರೈಲು ಹಳಿ ತಪ್ಪುವ ಅಪಾಯದಿಂದ ಪಾರಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಚೆನ್ನೈನಲ್ಲಿ ಮೈಸೂರು ದರ್ಬಾಂಗ ರೈಲು ದುರಂತ ಸಂಭವಿಸಿದ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ. ಇದರಿಂದ ದೇಶದಲ್ಲಿ ರೈಲು ಅನಾಹುತಗಳು ಸಂಭವಿಸುವಂತೆ ಮಾಡುವ ಪ್ರಯತ್ನಗಳು ಪದೇಪದೆ ಬೆಳಕಿಗೆ ಬರುತ್ತಿರುವುದು ಆಘಾತಕಾರಿ ವಿಷಯವಾಗಿದೆ.
ಲಂಡೌರಾ ಮತ್ತು ಧಂದೇರಾ ನಿಲ್ದಾಣಗಳ ನಡುವೆ ಭಾನುವಾರ ಮುಂಜಾಎ 6.30ರ ಸುಮಾರಿಗೆ ರೈಲ್ವೆ ಹಳಿ ಮೇಲೆ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದೆ. ಸಿಲಿಂಡರ್ ಖಾಲಿ ಆಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.