CITYPOLITICAL NEWS

“ಅಡ್ಡಮತದಾನ”ಕ್ಕೆ ಕೋಟ್ಯಾಂತರ ಆಮಿಷ: ಮೈತ್ರಿ ಅಭ್ಯರ್ಥಿ ಸೇರಿ ನಾಲ್ವರ ವಿರುದ್ಧ FIR

Share

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರಿಗೆ ಆಮೀಷ ಒಡ್ಡಲಾಯಿತು ಎನ್ನುವ  ಆರೋಪದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡರು ನೀಡಿದ್ದ ದೂರಿನ ಅನ್ವಯ ರಾಜ್ಯಸಭಾ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೇರಿ ನಾಲ್ವರ ವಿರುದ್ಧ FIR ದಾಖಲಾಗಿದೆ.ವಿಧಾನಸೌಧ ಪೊಲೀಸ್ ಠಾಣೆಯಲ್ಲಿ  ಕೇಸ್ ದಾಖಲಿಸಲಾಗಿದ್ದು ದೂರಿನ ಹಿನ್ನಲೆಯಲ್ಲಿ ಎಫ್ ಐ ಆರ್ ಲಾಡ್ಜ್ ಮಾಡಲಾಗಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ  ಪಕ್ಷೇತರ ಶಾಸಕರಿಗೆ ಬಿಜೆಪಿ ಮುಖಂಡರು ಅಡ್ಡಮತದಾನ ಮಾಡೊಕ್ಕೆ ಕೋಟ್ಯಾಂತರ ಆಮಿಷ ಒಡ್ಡಿದ್ದಾರೆ.ಆ ಪೈಕಿ  ಮಾಜಿ ಗೃಹ ಸಚಿವ ಎಂ.ಪಿ ಪ್ರಕಾಶ್ ಪುತ್ರಿ ಹಾಗೂ ಹರಪನಹಳ್ಳಿ ಪಕ್ಷೇತರ ಶಾಸಕಿ ಎಂ.ಪಿ.ಲತಾ, ಗೌರಿಬಿದನೂರು ಪಕ್ಷೇತರ ಶಾಸಕ ಪುಟ್ಟಸ್ವಾಮಿ ಗೌಡ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಕಾಂಗ್ರೆಸ್ನ ಶಾಸಕರಿಗೆ ಆಮೀಷ ಆರೋಪ ಮಾಡಲಾಗಿತ್ತು.

ಕಾಂಗ್ರಸ್ ನಾಯಕರು ಕೊಟ್ಟ  ದೂರಿನ ಹಿನ್ನಲೆಯಲ್ಲಿ  IPC ಸೆಕ್ಷನ್ 171E, 506,171Fರಡಿ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ, ಕ್ರೆಸೆಂಟ್ ಹೋಟೆಲ್ ಮಾಲೀಕ ರವಿ, ಡಾ.ಮಹಂತೇಶ್, ಹರಿಹರದ ಮಾಜಿ ಶಾಸಕ ಶಿವಶಂಕರ್ ವಿರುದ್ಧ FIR ದಾಖಲಿಸಲಾಗಿದೆ.


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button