BREAKING NEWSKANNADAFLASHNEWSPhoto GalleryPOLITICAL NEWSSPECIALSTORIES

WORLD FAMOUS DASARA “NANDIDWAJA MAHADEVANNA” IN CRITICAL CONDITION “ದಸರಾ ನಂದಿದ್ವಜ”ದ ಮಹಾದೇವಣ್ಣರನ್ನು ಮರೆತೇ ಬಿಡ್ತಾ ಸರ್ಕಾರ..!? : ಜೀವನ್ಮರಣಗಳ ಹೋರಾಟದಲ್ಲಿ ಮಹದೇವಣ್ಣ

Share

 

ಮೈಸೂರು ದಸರಾ ಉತ್ಸವಕ್ಕೆ ಚಾಲನೆ ದೊರೆಯುವುದೇ ಸಾಂಪ್ರದಾಯಿಕ ನಂದಿದ್ವಜದ ಪೂಜೆ ಮೂಲಕ
ಮೈಸೂರು ದಸರಾ ಉತ್ಸವಕ್ಕೆ ಚಾಲನೆ ದೊರೆಯುವುದೇ ಸಾಂಪ್ರದಾಯಿಕ ನಂದಿದ್ವಜದ ಪೂಜೆ ಮೂಲಕ

ಬೆಂಗಳೂರು/ಮೈಸೂರು: ವಿಶ್ವಪ್ರಸಿದ್ದ ದಸರಾ ಹಬ್ಬ(WORLDFAMOUS MYSORE DASARA)ಕ್ಕೆ ಚಾಲನೆ ದೊರೆಯುವುದೇ ಸಾಂಪ್ರದಾಯಿಕ ನಂದಿದ್ವಜ( NANDIDWAJA POOJE)ದ ಪೂಜೆ ಮೂಲಕ.ದೇವರ ಮೇಲೆ ಹೂವು ತಪ್ಪುತ್ತೋ ಇಲ್ಲವೋ ಗೊತ್ತಿಲ್ಲ,ಆದ್ರೆ ಈ ಸಂಪ್ರದಾಯ ಮಾತ್ರ ಯಾವ  ವರ್ಷವೂ ತಪ್ಪಿಲ್ಲ.ಇಂತದ್ದೊಂದು ಪೂಜಾ ಕೈಂಕರ್ಯವನ್ನು ಮಾಡುತ್ತಾ ಬಂದಿರುವ ಕುಟುಂಬ ಮೈಸೂರಿನಲ್ಲಿದೆ.ಆ ಕುಟುಂಬದ ಮುಖ್ಯಪ್ರಾಣವೇ ಮಹಾದೇವಣ್ಣ. .ಅಲ್ಲಲಾ ನಂದಿದ್ವಜದ ಮಹಾದೇವಣ್ಣ..(NANDIDWAJA MAHADEVANNA)

ಅನೇಕ ದಶಕಗಳಿಂದ ವಂಶಪಾರಂಪರ್ಯವಾಗಿ ಈ ಸಂಪ್ರದಾಯ ನಡೆಸುತ್ತಾ ಬಂದಿರುವ ಇದೇ ಮಹಾದೇವಣ್ಣರನ್ನು ಸರ್ಕಾರ ಮರೆತೇ ಬಿಟ್ಟಿದೆ.ಅವರು ನಾಡಿಗೆ ಮಾಡುತ್ತಿರುವ ಕಲಾಸೇವೆಯನ್ನು ಗುರುತಿಸಿಯೇ ಇಲ್ಲ..ಸಧ್ಯ ಜೀವನ್ಮರಣಗಳ ನಡುವೆ ಹೋರಾಡುತ್ತಿರುವ ಮಹಾದೇವಣ್ಣ ಸಧ್ಯ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಂದಿದ್ವಜದ ಮಹಾದೇವಣ್ಣ
ನಂದಿದ್ವಜದ ಮಹಾದೇವಣ್ಣ
ಜೀವನ್ಮರಣಗಳ ಹೋರಾಟದಲ್ಲಿ ನಂದಿದ್ವಜದ ಮಹಾದೇವಣ್ಣ
ಜೀವನ್ಮರಣಗಳ ಹೋರಾಟದಲ್ಲಿ ನಂದಿದ್ವಜದ ಮಹಾದೇವಣ್ಣ

ನಾಡಹಬ್ಬ ದಸರಾಕ್ಕೆ ಚಾಲನೆ ದೊರೆಯುವುದೇ ನಂದಿದ್ವಜದ ಪೂಜೆ ಮೂಲಕ.ಈ ಸಂಪ್ರದಾಯವನ್ನು ಅನೇಕ ದಶಕಗಳಿಂದಲೂ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುತ್ತಾ ಬಂದಿರುವ ನಂದಿದ್ವಜ ಮಹಾದೇವಣ್ಣ ಅವರ ಆರೋಗ್ಯ ಹದಗೆಟ್ಟಿದೆ.ಅದು ಕೂಡ ಮೈಸೂರಿನ ಜಿಲ್ಲಾಡಳಿತಕ್ಕಾಗಲಿ,ಮೈಸೂರು ದಸರಾ ಉತ್ಸವ ಸಮಿತಿಗಾಗಲಿ, ಘನ ಸರ್ಕಾರಕ್ಕಾಗಲಿ ಗೊತ್ತೇ ಇಲ್ಲ.ಬೆಂಗಳೂರಿನ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಮಹಾದೇವಣ್ಣ ಅವರಿಗೆ ಕನ್ನಡದ ಪ್ರತಿಷ್ಟಿತ ರಾಜ್ಯೋತ್ಸವ ಪ್ರಶಸ್ತಿ ಬಂದಿಲ್ಲ ಎನ್ನುವುದು ದೌರ್ಭಾಗ್ಯಪೂರ್ಣ.

ಕನ್ನಡ ರಾಜ್ಯೋತ್ಸವ(KANNADA RAJYOTSAVA) ಪ್ರಶಸ್ತಿಗಳು ಲಾಭಿ-ವಶೀಲಿಬಾಜಿ,ಆಮಿಷಗಳೆನ್ನುವ ವಿಷ ವರ್ತುಲಕ್ಕೆ ಸಿಲುಕಿ ಯಾವತ್ತೋ ಮೌಲ್ಯ ಕಳೆದುಕೊಂಡಿವೆ.ಅದಕ್ಕೆ ಮೌಲ್ಯ ಸಿಗಬೇಕೆಂದರೆ ಮಹಾದೇವಣ್ಣ ಅವರಂಥ ಕಲಾತಪಸ್ವಿ.ಕಲಾಸರಸ್ವತಿ ಆರಾಧನೆ ಮಾಡಿಕೊಂಡು ಬಂದಿರುವ ಮಹನೀಯರಿಗೆ ಸಲ್ಲಲೇಬೇಕಾಗುತ್ತದೆ.ಆದರೆ ರಾಜ್ಯ ಸರ್ಕಾರಗಳು ಅವರನ್ನು ಗುರುತಿಸುವಂಥ ಕೆಲಸ ಮಾಡದಿರುವುದು ದೌರ್ಭಾಗ್ಯಪೂರ್ಣ ಸಂಗತಿ.

ಜೀವನ್ಮರಣಗಳ ಹೋರಾಟದಲ್ಲಿ ನಂದಿದ್ವಜದ ಮಹಾದೇವಣ್ಣ
ಜೀವನ್ಮರಣಗಳ ಹೋರಾಟದಲ್ಲಿ ನಂದಿದ್ವಜದ ಮಹಾದೇವಣ್ಣ

ಇಂಥಾ ದುರಿತ ಸನ್ನಿವೇಶದಲ್ಲಿ ನಂದಿದ್ವಜದ ಮಹಾದೇವಣ್ಣ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯಾದರೂ ದೊರೆಯಲಿ, ಸರ್ಕಾರ ಅವರನ್ನು ಪರಿಗಣಿಸಲಿ,ಆಯ್ಕೆ ಸಮಿತಿ ಮಹಾದೇವಣ್ಣ ಅವರ ಸಾಧನೆಯನ್ನು ಪರಿಗಣಿಸಲಿ ಎಂದು ಅನೇಕರು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಕೂಡ ಮಾಡುತ್ತಿದ್ದಾರೆ.ಇದರ ಭಾಗವಾಗಿ ಈಗಾಗಲೇ ಕಲಾಪ್ರೇಮಿ ಕಿರಣ್ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ(KANNADA AND CULTURAL MINISTER) ಸಚಿವ ಶಿವರಾಜ್ ತಂಗಡಗಿ(SHIVARAJ THANGADAGI) ಅವರು ಸೇರಿದಂತೆ ಅನೇಕರನ್ನು ಭೇಟಿ ಮಾಡಿ ಕಲಾಸರಸ್ವತಿ ಆರಾಧಕ ಮಹಾದೇವಣ್ಣ ಅವರನ್ನು  ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿ,ಆಯ್ಕೆ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.

WORLD FAMOUS DASARA “NANDIDWAJA MAHADEVANNA”  IN CRITICAL CONDITION “ದಸರಾ ನಂದಿದ್ವಜ”ದ ಮಹಾದೇವಣ್ಣರನ್ನು ಮರೆತೇ ಬಿಡ್ತಾ ಸರ್ಕಾರ..!? : ಜೀವನ್ಮರಣಗಳ ಹೋರಾಟದಲ್ಲಿ ಮಹದೇವಣ್ಣ.

ಕಲಾಪ್ರೇಮಿ ಕಿರಣ್ ಅವರಂತೆ ಮಹಾದೇವಣ್ಣ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕೆನ್ನುವ ಬೇಡಿಕೆ ಇಟ್ಟುಕೊಂಡು ಮನವಿ ಮಾಡುತ್ತಿರುವ ಕಲಾರಾಧಕರ ಬೆನ್ನಿಗೆ ಕನ್ನಡ ಫ್ಲ್ಯಾಶ್ ನ್ಯೂಸ್ (KANNADAFLASHNEWS)ಕೂಡ ನಿಂತಿದೆ. ಮಹಾದೇವಣ್ಣ ಅವರ ವಿಸ್ತ್ರತ ಸಂದರ್ಶನವನ್ನು  ಕನ್ನಡ ಫ್ಲ್ಯಾಶ್ ನ್ಯೂಸ್ ಮೈಸೂರು ದಸರಾ ವೇಳೆಯಲ್ಲಿ ಮಾಡಿ ಪ್ರಸಾರ ಮಾಡಿತ್ತು. ರಾಜ್ಯೋತ್ಸವ ಪ್ರಶಸ್ತಿ ಇತ್ತೀಚಿನ ವರ್ಷಗಳಲ್ಲಿ ಲಾಭಿ-ವಶೀಲಿಬಾಜಿಗೆ ಒಳಗಾಗಿ ತನ್ನ ಮೌಲ್ಯ-ಶಿಷ್ಟಾಚಾರ-ಬೆಲೆ ಕಳೆದುಕೊಂಡಿರುವ ಸನ್ನಿವೇಶದಲ್ಲಿ ಆ ಮೌಲ್ಯಗಳ ಮರುಸ್ಥಾಪನೆ-ಉತ್ಥಾನಕ್ಕಾಗಿಯಾದ್ರೂ ಮಹಾದೇವಣ್ಣ ಅವರಂತ ಮೇರು ಪ್ರತಿಭೆಗಳನ್ನು ಗುರುತಿಸಿ ಗೌರವಿಸಬೇಕೆಂದು ಸರ್ಕಾರವನ್ನು ಮನವಿ ಮಾಡುತ್ತದೆ.


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button