ಇದೆಂಥಾ ಅನ್ಯಾಯ… ರಾಮಚಂದ್ರನ್ ಸರ್…!? ಕಳಂಕಿತರ ವಿರುದ್ಧ ಶಿಸ್ತುಕ್ರಮ ಜಾರಿ ಆಗೋದಿಲ್ವೇ..?!
ಬೆಂಗಳೂರು: ನೂತನ ಎಂಡಿ ರಾಮಚಂದ್ರನ್ ಅವರಂತ ಸಭ್ಯ…ಸಂಭಾವಿತ ಅಧಿಕಾರಿಯನ್ನು ಬಿಎಂಟಿಸಿ ಯಲ್ಲಿರುವ ಕೆಲವು ಅದಕ್ಷ-ಅಪ್ರಾಮಾಣಿಕ-ನಿಷ್ಪ್ರಯೋಜಕ ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡ್ತಿದಾರಾ..? ಅಧಿಕಾರಿಗಳ ವಿರುದ್ದ ಎಂತದ್ದೇ ಗಂಭೀರ ಆಪಾದನೆ ಬಂದ್ರೂ ಅವರನ್ನು ಶಿಕ್ಷೆಯಿಂದ ತಪ್ಪಿಸುವಂತ ಕೆಲಸ ಮಾಡುತ್ತಿರುವ ಕೆಲವರು ಅವರ ಸುತ್ತಮುತ್ತ ಇದ್ದಾರಾ.?…ಕನ್ನಡ ಫ್ಲ್ಯಾಶ್ ನ್ಯೂಸ್ ತುಂಬಾ ಜವಾಬ್ದಾರಿಯಿಂದಲೇ ಹೀಗೊಂದು ಮಾತನ್ನು ಅತ್ಯಂತ ವಿಷಾದದಿಂದ ಹೇಳಬೇಕಾಗಿ ಬಂದಿದೆ.ಇದಕ್ಕೆ ಕಾರಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಮೊದಲಿಂದಲೂ ಮುಂದುವರೆದಿರುವ ಗೊಂದಲಮಯ ವಾತಾವರಣ ನೂತನ ಎಂಡಿ ರಾಮಚಂದ್ರನ್ ಅವರ ಕಾಲಘಟ್ಟದಲ್ಲಿಯೂ ಮುಂದುವರೆದುಬಿಡ್ತದಾ ಎನ್ನುವ ಆತಂಕ.
ಯೆಸ್.. ಕೆಳ ಹಂತದ ಸಿಬ್ಬಂದಿ ಕ್ಷುಲ್ಲಕ ತಪ್ಪೆಸಗಿದರೂ ಅವರನ್ನು ಕಠಿಣ ಶಿಕ್ಷೆಗೆ ಗುರಿ ಮಾಡುವ ಆಡಳಿತ , ಕಣ್ಣಿಗೆ ರಾಚುವಂಥ ತಪ್ಪನ್ನು ಅಧಿಕಾರಿಗ ಳು ನಡೆಸಿದ್ರೂ ಅವರ ವಿರುದ್ಧ ಕ್ರಮ ಜರುಗಿಸುವ ಪ್ರಕ್ರಿಯೆ ಯನ್ನೇ ನಡೆಸದಿರುವುದು ಎಲ್ಲೋ ಒಂದೆಡೆ ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿದೆಯಾ ಎನ್ನುವ ಶಂಕೆ ಮೂಡಿಸುತ್ತಿದೆ.ಈ ಸಂಪ್ರದಾಯ, ಎಂಡಿಯಾಗಿ ಬರುವಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಕಿರಿಯ ಐಎಎಸ್ ಅಧಿಕಾರಿ ರಾಮಚಂದ್ರನ್ ಅವರ ಅಧಿಕಾರಾವಧಿಯಲ್ಲಿಯೂ ಮುಂದುವರೆದುಬಿಡು ತ್ತದಾ ಎನ್ನುವ ಆತಂಕ ಕಾಡುತ್ತಿದೆ.ಎಂಡಿ ಅವರ ಒಳ್ಳೇತನವನ್ನು ಕೆಲ ಅಪ್ರಮಾಣಿಕ, ಅದಕ್ಷ ಅಧಿಕಾರಿಗಳು ಎಲ್ಲಿ ಮಿಸ್ಯೂಸ್ ಮಾಡಿಕೊಳ್ಳುತ್ತಾರೋ ಎನ್ನುವುದು ಮತ್ತೊಂದು ಆತಂಕ.
ಇಷ್ಟೆಲ್ಲಾ ಹೇಳೊಕ್ಕೆ ಕಾರಣವೇ ಕೇಂದ್ರ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜಮೂರ್ತಿ ಎನ್ನುವಂತ ಅಧಿಕಾರಿಯ ವಿರುದ್ಧ ಕೇಳಿಬಂದ ಗಂಬೀರ ಆಪಾದನೆ ಹಾಗೂ ಅವರ ವಿರುದ್ಧ ಶಿಸ್ತುಕ್ರಮ ಆಗದಿರುವ ನಿರ್ಲಕ್ಷ್ಯ.ಈ ಪ್ರಕರಣದ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಅನೇಕ ಸರಣಿ ವರದಿ ಪ್ರಕಟಿಸಿದಾಗ್ಯೂ ಆಡಳಿತ ನಾಗರಾಜಮೂರ್ತಿ ವಿರುದ್ಧ ಕ್ರಮ ಜರುಗಿಸುವ ಕೆಲಸ ಮಾಡದಿರುವುದು ಅನೇಕ ರೀತಿಯ ಗುಮಾನಿ ಜತೆಗೆ ಎಂಡಿ ರಾಮಚಂದ್ರನ್ ಅವರ ಕಾರ್ಯವೈಖರಿಯನ್ನೂ ಪ್ರಶ್ನಿಸುವಂತೆ ಮಾಡಿದೆ.
ರಾಮಚಂದ್ರನ್ ಅವರ ಕಾರ್ಯವೈಖರಿ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಯಾವುದೇ ರೀತಿಯ ಆಕ್ಷೇಪವಿಲ್ಲ.ಅವರ ಬಗ್ಗೆ ನಮಗೆ ವೈಯುಕ್ತಿಕವಾಗಿ ಗೌರವವಿದೆ.ಅವರು ಎಂಡಿಯಾಗಿ ಅಧಿಕಾರ ವಹಿಸಿಕೊಳ್ಳುವಾಗಲೇ ಅವರ ಬಗ್ಗೆ ಇರುವ ನಿರೀಕ್ಷೆಗಳ ಬಗ್ಗೆಯೂ ವಿಸ್ತ್ರತವಾಗಿ ಬರೆಯಲಾಗಿತ್ತು.ಅಲ್ಲದೇ ಅಲ್ಲಿನ ಅವ್ಯವಸ್ಥೆ ಬಗ್ಗೆಯೂ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗಿತ್ತು.
ಆದರೆ ರಾಮಚಂದ್ರನ್ ಅವರನ್ನು ಮಿಸ್ ಗೈಡ್ ಮಾಡುವ,ಮಿಸ್ ಲೀಡ್ ಮಾಡುವ ಕೆಲಸವನ್ನು ಅಲ್ಲಿರುವ ಕೆಲವು ಅಪ್ರಮಾಣಿಕರು-ನಿಷ್ಪ್ರಯೋಜಕ ರು ಮಾಡ್ತಿದ್ದಾರಾ ಎನ್ನುವುದೇ ಬೇಸರ ಹಾಗೂ ಆತಂಕದ ವಿಚಾರ.ನಾಗರಾಜಮೂರ್ತಿ ಅವರ ಪ್ರಕರಣದಲ್ಲೇ ತೆಗೆದುಕೊಂಡ್ರೆ ಈ ಅಧಿಕಾರಿ ವಿರುದ್ಧ ಕೇಳಿಬಂದಿದ್ದು ಅಂತಿಂಥಾ ಆರೋಪನಾ.? ಖಂಡಿತಾ ಇಲ್ಲ.ಅವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಮಾತನ್ನು ರಾಮಚಂದ್ರನ್ ಅವರೇ ಹೇಳಿದ್ರು.ಆದ್ರೆ ಆಗಿದ್ದೇನು..? ಅವರು ಹಾಗೆ ಭರವಸೆ ಕೊಟ್ಟು ಅನೇಕ ದಿನಗಳೇ ಕಳೆದ್ರೂ ನಾಗರಾಜಮೂರ್ತಿ ವಿರುದ್ಧ ಕ್ರಮವಾಗುವ ಮಾತು ಒತ್ತಟ್ಟಿಗಿರಲಿ,ಅವರನ್ನು ಕನಿಷ್ಟಕ್ಕೂ ತನಿಖೆ ಅಥವಾ ವಿಚಾರಣೆಗೆಂದು ಕರೆಯಿಸಿ ಪ್ರಶ್ನಿಸುವ ಕೆಲಸವನ್ನೇ ಆಡಳಿತ ಮಾಡಿಲ್ಲ.ಇದು ನಿಗಮದಲ್ಲಿರುವ ಅಧಿಕಾರಿಗಳ ಚಾಲಾಕಿತನವಾದ್ರೂ ನೈತಿಕವಾಗಿ ಎಂಡಿ ರಾಮಚಂದ್ರನ್ ಅವರೇ ಹೊಣೆ ಹೊರಬೇಕಾಗುತ್ತದೆಯಲ್ಲವೇ..? ಇಲ್ಲಿ ಉತ್ತರಿಸಬೇಕಾಗಿರುವುದು ಕೂಡ ರಾಮಚಂದ್ರನ್ ಅವರೇ ಅಲ್ವಾ.?
ನಾಗರಾಜಮೂರ್ತಿ ಅವರ ವಿರುದ್ದ ದಾಖಲಾದ ದೂರುಗಳು ಹಾಗೂ ಮಾ್ದ್ಯಮಗಳಲ್ಲಿ ಬಂದ ವರದಿ ಹಿನ್ನಲೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೇಳಿದಾಗಲೂ ದೂರುಪತ್ರಗಳನ್ನು ಕೇವಲ ಕಡತೀಕರಿಸಲಾಗಿದೆ ಎನ್ನುವ ಉತ್ತರ ನೀಡಲಾಗಿದೆ.ಅದೇ, ಕೆಳಹಂತದ ಸಿಬ್ಬಂದಿ ಬಗ್ಗೆ ದೂರುಗಳು ಕೇಳಿಬಂದಿದ್ರೆ ಹೀಗೆ ಕಡತೀಕರಿಸುವ ಕೆಲಸ ಆಗ್ತಿತ್ತಾ,..? ರಾಮಚಂದ್ರನ್ ಅವರೇ ಉತ್ತರ ಕೊಡಬೇಕಿದೆ.
ನಾಗರಾಜಮೂರ್ತಿ ಅವರ ವಿರುದ್ದ ಯಾವುದೇ ಕ್ರಮ ಜಾರಿಯಾಗದಿರುವುದಕ್ಕೆ ನಿಜವಾಗಿಯೂ ಕಾರಣ ಏನನ್ನುವುದು ಗೊತ್ತಾಗುತ್ತಿಲ್ಲ.ನಿಗಮದ ಮೂಲಗಳ ಪ್ರಕಾರ ಮಿನಿಸ್ಟರ್ ಅಲ್ಲ, ಎಂಡಿ ಮಾತ್ರವಲ್ಲ, ಯಾರೇ ನನ್ನ ವಿರುದ್ಧ ಆರೋಪ ಮಾಡಿದ್ರೂ ಅದನ್ನು ಹುಸಿ ಎಂದು ಪ್ರೂವ್ ಮಾಡುವ ತಾಕತ್ತು,ಇನ್ ಫ್ಲ್ಯೂಯೆಲ್ಸ್ ನನಗಿದೆ.ಹಿಂದೆ ವರ್ಗಾವಣೆಯಾದಾಗ್ಲೇ ಅಲ್ಲಿಗೆ ಒಂದ್ ದಿನನೂ ಡ್ಯೂಟಿಗೆ ಹೋಗದೆ ಕ್ಯಾನ್ಸಲ್ ಮಾಡಿಸಿಕೊಂಡು ಬಂದವನು ನಾನು..ನನ್ ತಾಕತ್ ಎಂತದ್ದೆನ್ನುವುದನ್ನು ಅವತ್ತೇ ಪ್ರೂವ್ ಮಾಡಿದವನು ನಾನು..ಇವತ್ತು ಆ ತಾಕತ್ ಪ್ರೂವ್ ಮಾಡದೆ ಬಿಡ್ತೀನಾ..ನೋ ಚಾನ್ಸ್..ಈ ಪ್ರಕರಣದಲ್ಲೂ ಕ್ಲೀನ್ ಚಿಟ್ ಹೇಗೆ ಪಡೆಯಬೇಕೆನ್ನುವುದು ನನಗೆ ಗೊತ್ತಿದೆ ಎಂದು ಅವರಿವರ ಬಳಿ ಬಿಲ್ಡಪ್ ಕೊಟ್ಟಿಕೊಂಡು ಅಡ್ಡಾಡುತ್ತಿದ್ದಾರಂತೆ ನಾಗರಾಜಮೂರ್ತಿ.
ನಾಗರಾಜಮೂರ್ತಿ ಕಾರಣಕ್ಕೆ ಶಿಕ್ಷೆಗೊಳಗಾದ ಬಿಎಂಟಿಸಿ ಸಿಬ್ಬಂದಿ ರಾಮಚಂದ್ರನ್ ಅವರನ್ನು ನಮಗೊಂದು ನ್ಯಾಯ..ಅವರಿಗೊಂದು ನ್ಯಾಯ ಏಕೆ ಸರ್ ಎಂದು ಪ್ರಶ್ನಿಸ್ತಿದಾರೆ.ನಮ್ಮಂಥ ಅಮಾಯಕರ ಹೊಟ್ಟೆ ಉರಿಸಿ ನಮ್ಮ ಬದುಕುಗಳನ್ನು ಬರ್ಬಾದ್ ಮಾಡಿದ ನಾಗರಾಜಮೂರ್ತಿ ಅಂಥವರನ್ನು ಯಾವುದೇ ಕಾರಣಕ್ಕೂ ಬೆಂಬಲಿಸಬೇಡಿ,ರಕ್ಷಿಸಬೇಡಿ ಸರ್ ಎಂದು ಅಂಗಲಾಚುತ್ತಿದ್ದಾರೆ.ಅವರ ವಿರುದ್ದ ಕ್ರಮ ಜಾರಿಯಾದ ದಿನ ನಾವೆಲ್ಲಾ ಹೋಳಿಗೆ ಊಟ ಹಾಕಿಸಿ ಸಂಭ್ರಮಿಸ್ತೇವೆ ಎನ್ನುವಷ್ಟರ ಮಟ್ಟಿಗೆ ಜನ ಮಾತನಾಡಿಕೊಳ್ತಿದಾರೆ ಎಂದ್ರೆ ನಾಗರಾಜಮೂರ್ತಿ ಅಂಥ ಅಧಿಕಾರಿ ಬಿಎಂಟಿಸಿಯ ಅದೆಷ್ಟು ಸಿಬ್ಬಂದಿ ನೆಮ್ಮದಿ ಹಾಳು ಮಾಡಿರಬೇಕೋ ಎಂಬ ಶಂಕೆ ಕಾಡುತ್ತದೆ.
ನಾಗರಾಜಮೂರ್ತಿ ಅವರನ್ನು ಶಿಕ್ಷಿಸದೆ ಹಾಗೆಯೆ ಉಳಿಸಿಕೊಂಡಿರುವುದಕ್ಕೆ ಕೆಎಸ್ ಆರ್ ಟಿಸಿ ಸ್ಟಾಫ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಅನಂತ ಸುಬ್ಬರಾವ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾಗರಾಜಮೂರ್ತಿ ಓರ್ವ ಕರಪ್ಟ್ ಆಫೀಸರ್ ಹಾಗೆಯೇ ಇನ್ ಫ್ಲ್ಯೂಯೆನ್ಸ್ ಇರುವಂಥ ಅಧಿಕಾರಿ,ಅಂಥವರ ವಿರುದ್ಧ ಸಾಕ್ಷ್ಯ ಸಮೇತ ದೂರು ಬಂದಾಗ್ಯೂ ಕ್ರಮ ಜಾರಿಯಾಗೊಲ್ಲ ಎಂದ್ರೆ ಬಿಎಂಟಿಸಿ ಆಡಳಿತ ಎಷ್ಟರ ಮಟ್ಟಿಗೆ ಹಾಳಾಗಿದೆ ಎನ್ನುವುದು ಗೊತ್ತಾಗುತ್ತೆ ಎನ್ನುತ್ತಾರೆ.ನಾಗರಾಜಮೂರ್ತಿ ಅಂಥವರು ಬಿಎಂಟಿಸಿಯಲ್ಲಿದ್ದರೆ ನಿಗಮಗಳು ಸಂಪೂರ್ಣ ಮುಳುಗಿ ಹೋಗುವುದು ನಿಶ್ಚಿತ ಎಂದು ಬೇಸರ-ಅಸಮಾಧಾನ ವ್ಯಕ್ತಪಡಿಸ್ತಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್ ಅವರು ನಾಗರಾಜಮೂರ್ತಿಯಂತ ಅಧಿಕಾರಿ ವಿರುದ್ದ ಕ್ರಮ ಜಾರಿಯಾಗದಂತೆ ಆಟವಾಡುತ್ತಿರುವ ಅಪ್ರಾಮಾಣಿಕರಿಂದ ಎಚ್ಚೆತ್ತುಕೊಳ್ಳದಿದ್ದರೆ, ಆ ಭ್ರಷ್ಟ-ನಿಷ್ಪ್ರಯೋಜಕ ಅಧಿಕಾರಿಗಳು ನಡೆಸೊ ಅಕ್ರಮಗಳ ನೈತಿಕ ಹೊಣೆಯನ್ನುಹೊತ್ತಿಕೊಳ್ಳುವಂತಾಗಿಬಿಡ್ತದಾ ಎನ್ನುವ ಅತಂಕ ಕಾಡ್ತಿದೆ. ಹಾಗಾಗಬಾರದು, ರಾಮಚಂದ್ರನ್ ಅವರು ಎಲ್ಲರನ್ನು ನಂಬದೆ ಅನುಮಾನಾಸ್ಪದವಾಗೇ ಅವರನ್ನೆಲ್ಲಾ ನೋಡುವಂತಾಗಬೇಕು.ಇದೆಲ್ಲದರ ಜತೆಗೆ ಡಿ.ಸಿ. ನಾಗರಾಜಮೂರ್ತಿ ವಿರುದ್ಧವೂ ವಿಚಾರಣೆ-ತನಿಖೆ ನಡೆಯುವಂತೆ ಆದೇಶಿಸಬೇಕಿದೆ.