SAHYADRI SCIENCE COLLEGE ALUMNI MEET: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ “ಮಹಾಸಮಾಗಮ”ಕ್ಕೆ ಮುಹೂರ್ತ ಫಿಕ್ಸ್
ನವೆಂಬರ್ 23ಕ್ಕೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ಹಳೆ ವಿದ್ಯಾರ್ಥಿಗಳ ಸಮ್ಮಿಲನ(ಅಲುಮಿನಿ ಮೀಟ್)
ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲ ಜಿಲ್ಲೆ ಶಿವಮೊಗ್ಗ(SHIVAMOGGA OR SHIMOGA) ದ ಮಟ್ಟಿಗೆ ಶಿಕ್ಷಣಕ್ಕೆ ಶ್ರೇಷ್ಟ ಹಾಗೂ ಸರ್ವೋತ್ಕ್ರಷ್ಟ ಆಯ್ಕೆ ಎಂದರೆ ಅದು ಸಹ್ಯಾದ್ರಿ ಕಾಲೇಜ್ (SAHYADRI COLLEGE) ಎನ್ನುವ ಮಾತಿದೆ.ಕಾಲ ಎಷ್ಟೇ ಬದಲಾದ್ರೂ ಶೈಕ್ಷಣಿಕ ವ್ಯವಸ್ಥೆಯಲ್ಲೆ ಎಷ್ಟೇ ಸ್ಥಿತ್ಯಂತರಗೊಂಡ್ರೂ, ಸಾಕಷ್ಟು ಮಗ್ಗಲುಗಳನ್ನು ಬದಲಿಸಿದ್ರೂ..ಆಯಾಮಗಳಲ್ಲಿ ಬದಲಾವಣೆ ಯಾದರೂ ಇವತ್ತಿಗೂ ಸಹ್ಯಾದ್ರಿ ಕಾಲೇಜ್ ತನ್ನ ತನ್ನ ಶೈಕ್ಷಣಿಕ ಶ್ರೇಷ್ಟತೆಯನ್ನು ಕಳೆದುಕೊಂಡಿಲ್ಲ ಎನ್ನುವುದು ಆ ಕಾಲೇಜಿನಲ್ಲಿ ಓದಿದ ಪ್ರತಿಯೊಬ್ಬರ ಅಭಿಮತ.
ಅತ್ಯದ್ಭುತವಾದ ಶೈಕ್ಷಣಿಕ ಹಿನ್ನಲೆ ಹೊಂದಿರುವ ಬಂದಿರುವ ಕಾಲೇಜು ಇದೀಗ ಹೊಸದೊಂದು ಇತಿಹಾಸಕ್ಕೆ ಸಾಕ್ಷಿಯಾಗಲು ಹೊರಟಿದೆ.ಅದೇ, ಹಳೆ ಬೇರು..ಹೊಸ ಚಿಗುರು ಸೇರಿದರೆ ಜೀವನ ಸೊಬಗು ಎನ್ನುವ ಕವಿವಾಣಿಯಂತೆ ಕಾಲೇಜಿನ ಸಮಸ್ತ ವಿದ್ಯಾರ್ಥಿಪರಂಪರೆಯನ್ನು ಒಗ್ಗೂಡಿಸುವ ವಿಶಿಷ್ಟ ಪ್ರಯತ್ನದ “ವಿದ್ಯಾರ್ಥಿಗಳ ಸಮ್ಮಿಲನ” ಹೌದು, ಹಳೇ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ,ಪ್ರತಿಯೊಬ್ಬರ ಜೀವನದಲ್ಲೂ ಕಾಲೇಜು ಜೀವನ ಕಲಿಸಿದ ಜೀವನಪಾಠ, ಅದರಿಂದ ಅರಳಿದ ಬದುಕು, ಉಜ್ವಲಗೊಂಡ ಭವಿಷ್ಯ, ಬೆನ್ನಿಗೆ ನಿಂತು ಸಹಕರಿಸಿದ ಶಿಕ್ಷಕರು.. ಅದಕ್ಕೆ ಕಾರಣೀಭೂತವಾದ ಸಂಗತಿಗಳನ್ನೆಲ್ಲಾ ಮೆಲುಕು ಹಾಕುವುದಷ್ಟೇ ಅಲ್ಲ,ಈ ವಿದ್ಯಾರ್ಥಿಪರಂಪರೆ ಮೂಲಕ ಶಾಶ್ವತಕ್ಕೂ ಸ್ಮರಣೀಯವಾಗುವಂತ ಸಾಧನೆಯೊಂದರ ಸಾಧ್ಯತೆಗೆ ಅಣಿಯಾಗುತ್ತಿರುವ ವೇದಿಕೆ ಈ ಸಮ್ಮಿಲನ ಎನ್ನಬಹುದೇನೋ..?
ಯೆಸ್..ಸಹ್ಯಾದ್ರಿ ವಿಜ್ಞಾನ ಕಾಲೇಜಿನ(SAHYADRI SCINCE COLLEGE) ಹಳೇ ವಿದ್ಯಾರ್ಥಿಗಳ(OLD STUDENTS) ಸಮ್ಮಿಲನ ಕಾರ್ಯಕ್ರಮಕ್ಕೆ ಸಾಕ್ಷಿಪ್ರಜ್ನೆಯಾಗುವಂತ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗುತ್ತಿದೆ.ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳು ಕೂಡ ಬಿರುಸಿನಿಂದ ಸಾಗುತ್ತಿವೆ.ಸಹ್ಯಾದ್ರಿ ವಿಜ್ನಾನ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರಾಜೇಶ್ವರಿ( SAHYADRI SCINCE COLLEGE PRINCIPAL SMT.RAJESHWARI) ಅವರು ಇದರ ಸಾರಥ್ಯ ವಹಿಸಿದ್ದು ಕಾಲೇಜಿನ ಇತಿಹಾಸದಲ್ಲಿ ಇದೊಂದು ಚರಿತ್ರಾರ್ಹ ಬೆಳವಣಿಗೆಯಾಗುವುದರಲ್ಲಿ ಅನುಮಾನವೇ ಇಲ್ಲ. ವಿದ್ಯಾರ್ಥಿ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಗೊಳ್ಳಬೇಕೆನ್ನುವುದು ಕೂಡ ಶ್ರೀಮತಿ ರಾಜೇಶ್ವರಿ ಅವರ ಕನಸು ಹಾಗೂ ಆಶಯ ಕೂಡ.
23ನೇ ನವೆಂಬರ್ 2024 (NOVEMBER 23, 2024)ರಂದು ವಿದ್ಯಾರ್ಥಿಗಳ ಸಮ್ಮಿಲನಕ್ಕೆ ದಿನಾಂಕ ನಿಗಧಿಯಾಗಿದೆ.ಕಾರ್ಯಕ್ರಮ ಎಲ್ಲಿ ನಡೆಯಲಿದೆ. ಕಾರ್ಯಕ್ರಮಗಳ ಸ್ವರೂಪ ಹೇಗಿರಲಿದೆ ಎನ್ನುವುದರ ರೂಪುರೇಷೆ ಸಿದ್ದವಾಗುತ್ತಿದೆ. ಸಮ್ಮಿಲನ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ನಡೆಯೊಕ್ಕೆ ಮೀಟಿಂಗ್ ಮ್ಯಾರಥಾನ್ ಗಳೇ ನಡೆಯುತ್ತಿವೆ.ಹಳೇ ವಿದ್ಯಾರ್ಥಿಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಸಲಹೆ-ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ. ಹಳೆಯ ವಿದ್ಯಾರ್ಥಿಗಳಾದ ಅಶೋಕ ನಾಯ್ಕ, ಜೇಸುದಾಸ್, ಉಮೇಶ್, ಡಾ.ಪರಿಸರ ನಾಗರಾಜ್, ಡಾ.ರವಿಕುಮಾರ್, ಡಾ.ಕೆ.ಎಲ್ ನಾಯ್ಕ, ಶಾಂತಾ, ಡಾ.ನಫೀಜಾ ಬೇಗಮ್, ಡಾ.ವಿಠ್ಠಲ ರಾವ್, ಡಾ.ಯುವರಾಜ್, ಡಾ.ನಾಗರಾಜ್ ಎನ್. ವಿಜಯ್ ರಾಜವತ್ ಅವರು ಮೊನ್ನೆ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ತಮ್ಮ ಸಲಹೆ-ಅಭಿಪ್ರಾಯ ನೀಡಿದ್ದಾರೆ. ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬರಲು ತಮ್ಮಿಂದ ಬೇಕಾದ ಎಲ್ಲಾ ಸಹಕಾರ ನೀಡಲು ಸಿದ್ದವಿರುವುದಾಗಿ ತಿಳಿಸಿದ್ದಾರೆ.ಇದು ಕಾರ್ಯಕ್ರಮದ ರೂವಾರಿಯಾಗಿರುವ ಶ್ರೀಮತಿ ರಾಜೇಶ್ವರಿ ಅವರ ಆತ್ಮವಿಶ್ವಾಸವನ್ನು ನೂರ್ಮಡಿ ಹೆಚ್ಚಿಸಿದೆ.
“ನಮ್ಮ ವಿದ್ಯಾರ್ಥಿಗಳನ್ನು ಒಂದೆಡೆ ನೋಡುವುದೇ ಒಂದು ಹಬ್ಬ…. ನಮ್ಮ ಕಣ್ಮುಂದೆ ಓದಿರುವ ವಿದ್ಯಾರ್ಥಿಗಳನ್ನು ಒಂದೆಡೆ ನೋಡುವುದಕ್ಕಿಂತ ದೊಡ್ಡ ಸಂಭ್ರಮ ಇನ್ನೊಂದಿದೆಯಾ..? ಆ ಸಂದರ್ಭವನ್ನು ಬೆರಗಿನಿಂದ ನಿರೀಕ್ಷಿಸುತ್ತಿದ್ದೇನೆ.ವಿಜ್ನಾನ ಕಾಲೇಜಿನಲ್ಲಿ ಓದಿದ ವಿ್ದ್ಯಾರ್ಥಿಗಳನ್ನು ಒಂದೆಡೆ ಸೇರಿಸುವುದು ಅಂದುಕೊಂಡಷ್ಟು ಸಲೀಸಾದ ಕೆಲಸವಲ್ಲ.ಅದು ಸವಾಲು.ಆ ಸವಾಲನ್ನು ಮೆಟ್ಟಿನಿಲ್ಲುವ ಪ್ರಯತ್ನ ಮಾಡುತ್ತಿದ್ದೇವೆ.ನಮ್ಮ ವಿದ್ಯಾರ್ಥಿಗಳನ್ನು ನೋಡುವುದು, ಅವರೊಂದಿಗೆ ಅಮೂಲ್ಯವಾದ ಕ್ಷಣಗಳನ್ನು ಕಳೆಯುವುದು.ಹಳೆಯ ನೆನಪುಗಳನ್ನು ಮೆಲುಕು ಹಾಕುವುದು ಈ ಕಾರ್ಯಕ್ರಮದ ಉದ್ದೇಶ.ಮೊದಲ ಪ್ರಯತ್ನಕ್ಕೆ ಕೈ ಹಾಕಿದ್ದೇವೆ,ವಿದ್ಯಾರ್ಥಿಗಳ ರೆಸ್ಪಾನ್ಸ್ ಅತ್ಯದ್ಭುತವಾಗಿದೆ.ನಾನು ನಮ್ಮ ವಿದ್ಯಾರ್ಥಿಗಳು ಇಷ್ಟೊಂದು ಸಕಾರಾತ್ಮಕವಾಗಿ ಸ್ಪಂದಿಸಬಲ್ಲರು ಎಂದು ಅಂದುಕೊಂಡಿರಲಿಲ್ಲ.ಅಂದುಕೊಂಡಂತೆಯೇ ಎಲ್ಲಾ ನಡೆದೋದರೆ ನನ್ನ ಪ್ರಯತ್ನ ಸಾರ್ಥಕ. ಅದೊಂದು ಸ್ಮರಣೀಯವಾದ ಐತಿಹಾಸಿಕ ಘಟನೆಯಾಗೋದರಲ್ಲಿ ಅನುಮಾನವಿಲ್ಲ. ವಿದ್ಯಾರ್ಥಿ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಈ ಪ್ರಯತ್ನದಲ್ಲಿ ಸಿಗುವ ಫಲಿತಾಂಶ ಸಹಕಾರಿಯಾಗಲಿದೆ ಎನ್ನುವ ವಿಶ್ವಾಸ ನನ್ನದು.ಅಂದಿನ ಸಮ್ಮಿಲನದಲ್ಲಿ ಹೆಚ್ಚು ಸಂಖ್ಯೆ ಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ನಮ್ಮ ಪ್ರಯತ್ನವನ್ನು ಯಶಸ್ವಿಗೊಳಿಸಬೇಕೆಂದು ಮತ್ತೊಮ್ಮೆ ಕೇಳಿಕೊಳ್ಳುತ್ತಿದ್ದೇನೆ” -ಶ್ರೀಮತಿ ರಾಜೇಶ್ವರಿ, ಸಹ್ಯಾದ್ರಿ ವಿಜ್ನಾನ ಕಾಲೇಜು ಪ್ರಾಂಶುಪಾಲರು ಹಾಗು ಕಾರ್ಯಕ್ರಮದ ರೂವಾರಿ
ಸಮ್ಮಿಲನ ಕಾರ್ಯಕ್ರಮ ಕಾಲೇಜಿನಲ್ಲಿ ಓದಿದ ಎಲ್ಲಾ ವಿದ್ಯಾರ್ಥಿಗಳ ಮಹಾಮಿಲನಕ್ಕೆ ಸಾಕ್ಷಿಯಾಗುತ್ತಿದೆ.ಇದಕ್ಕಾಗಿ ಈಗಾಗಲೇ ವಾಟ್ಸಪ್ ಗ್ರೂಪ್(WATSUP GROUP) ನ್ನು ಕೂಡ ಮಾಡಲಾಗಿದೆ.ಸಾವಿರಕ್ಕೂ ಹಚ್ಚು ವಿದ್ಯಾರ್ಥಿಗಳು ಈಗಾಗಲೇ ಗ್ರೂಪ್ ಗೆ ಸೇರ್ಪಡೆಯಾಗಿ ಸಮ್ಮಿಲನದ ಯಶಸ್ವಿಗೆ ಸಹಕಾರಿಯಾಗುತ್ತಿ ದ್ದಾರೆ.ನಿರ್ದಿಷ್ಟ ವರ್ಷದ ವಿದ್ಯಾರ್ಥಿಗಳಿಗೆ ಸೀಮಿತವಾಗದೆ ಯಾರೆಲ್ಲಾ ಕಾಲೇಜಿನಲ್ಲಿ ಓದಿದ್ದಾರೆ. ಅವರೆಲ್ಲರಿಗೂ ಸಮ್ಮಿಲನದಲ್ಲಿ ಪಾಲ್ಗೊಳ್ಳುವ ಮುಕ್ತ ಅವಕಾಶ ಕಲ್ಪಿಸಲಾಗಿದೆ.ವಿದ್ಯಾರ್ಥಿಗಳು ಕೂಡ ಸಮ್ಮಿಲನದಲ್ಲಿ ಪಾಲ್ಗೊಳ್ಳುವ ಉತ್ಸುಕತೆ ಹೊಂದಿದ್ದಾರೆ.ತಮ್ಮೊಂದಿಗೆ ಓದಿ ಕಾಲಾಂತರದಲ್ಲಿ ದೂರವಾದ ವಿದ್ಯಾರ್ಥಿಮಿತ್ರರನ್ನು ನೋಡುವ ಅವರೊಂದಿಗೆ ಬೆರೆಯುವ, ನೆನಪುಗಳನ್ನು ಹಂಚಿಕೊಂಡು ಪುಳಕಗೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
“ಇದು ವ್ಹಾವ್..ಎನಿಸುವ ಸನ್ನಿವೇಶ.ಎಲ್ಲಾ ಫ್ರೆಂಡ್ಸ್ ಗಳನ್ನು ಹಾಗೆಯೇ ಜೂನಿಯರ್ಸ್, ಸೀನಿಯರ್ಸ್ ಗಳನ್ನು ಒಂದೆಡೆ ನೋಡುವ, ಭೇಟಿ ಮಾಡುವ ಅಪೂರ್ವ ಸಂದರ್ಭ.ಇದರಲ್ಲಿ ಪಾಲ್ಗೊಳ್ಳಲು ನಾನು ಉತ್ಸುಕಳಾಗಿದ್ದಾಳೆ.ಆ ದಿನ ಹೇಗಿರಲಿದೆ ಎನ್ನುವ ಕೌತುಕತೆ ನನ್ನಲ್ಲಿದೆ.ಫ್ರೆಂಡ್ಸ್ ಗಳನ್ನು ಎಷ್ಟೋ ವರ್ಷಗಳ ನಂತರ ಭೇಟಿ ಮಾಡುತ್ತಿರುವುದರ ಬಗ್ಗೆ ತುಂಬಾನೇ ಎಕ್ಸೈಟ್ ಆಗಿದ್ದೇನೆ.ಅದರಲ್ಲೂ ಇಂತದ್ದೊಂದು ಅಪೂರ್ವ ಸಮ್ಮಿಲನ ಆಯೋಜಿಸುತ್ತಿರುವುದು ನನ್ನ ಮೆಚ್ಚಿನ ಶ್ರೀಮತಿ ರಾಜೇಶ್ವರಿ ಮೇಡಮ್ ಎನ್ನುವುದು ಮತ್ತಷ್ಟು ಖುಷಿ ಕೊಟ್ಟಿದೆ.ಹಳೇ ಸ್ನೇಹಿತರನ್ನು-ಲೆಕ್ಚರರನ್ನು ಒಂದೇ ವೇದಿಕೆಯಲ್ಲಿ ಭೇಟಿ ಮಾಡುವ ವೇದಿಕೆ ಈವರೆಗೂ ಸೃಷ್ಟಿಯಾಗಿರಲಿಲ್ಲ. ಇವತ್ತಾಗಬಹುದು, ನಾಳೆಯಾಗಬಹುದು ಎಂಬ ನಿರೀಕ್ಷೆಯಲ್ಲೇ ದಶಕಗಳೇ ಕಳೆದೋದವು.ಆದರೆ ಆ ಸನ್ನಿವೇಶ ಸೃಷ್ಟಿಯಾಗಿರಲೇ ಇಲ್ಲ.ಅಂತದ್ದೊಂದು ಅವಕಾಶವನ್ನು ರಾಜೇಶ್ವರಿ ಮೇಡಮ್ ಅವರು ದೊರಕಿಸಿಕೊಡುತ್ತಿರುವುದಕ್ಕೆ ಥ್ಯಾಂಕ್ಸ್..ಆ ದಿನಕ್ಕಾಗಿ ಕಾತುರದಿಂದ ಕಾಯುತ್ತಿದ್ದೇನೆ”-ಶ್ರೀಮತಿ ವಿನುತಾ ಎಸ್ ನೀರಲಹಳ್ಳಿ-ಹಳೆಯ ವಿದ್ಯಾರ್ಥಿನಿ
ಸಮ್ಮಿಲನ ಕಾರ್ಯಕ್ರಮದ ದಿನಾಂಕ ನಿಗಧಿಯಾಗಿದ್ದರೂ ಅಂದಿನ ಕಾರ್ಯಕ್ರಮಗಳ ಸ್ವರೂಪ ಇನ್ನೂ ಅಂತಿಮವಾಗಿಲ್ಲ.ಕಾರ್ಯಕ್ರಮದ ಯಶಸ್ವಿಗೆ ಕೆಲವೊಂದು ಕಮಿಟಿಗಳನ್ನು ಮಾಡಲಾಗಿದೆ.ನಿರ್ದಿಷ್ಟ ಜವಾಬ್ದಾರಿಗಳ ಉಸ್ತುವಾರಿಯನ್ನು ಕಮಿಟಿಗಳು ನೋಡಿಕೊಳ್ಳಲಿವೆ.ಅವರಿಗೆ ಯಾವ್ಯಾವ ಕೆಲಸ ಎನ್ನುವುದನ್ನು ಕೆಲವೇ ದಿನಗಳಲ್ಲಿ ನಿರ್ದರಿಸಲಾಗುವುದು.ಅದೇ ವೇದಿಕೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಕಾರಣೀಭೂತರಾದ ಗುರುಗಳನ್ನು ಸನ್ಮಾನಿಸಿ ಗೌರವಿಸುವ ಕೆಲಸ ನಡೆಯಲಿದೆ.ಹಾಗೆಯೇ ಕಾಲೇಜು ಇಷ್ಟು ದಶಕಗಳ ಅವಧಿಯಲ್ಲಿ ಸಾಧಿಸಿದ ಪ್ರಗತಿ, ಮಾಡಿದ ಸಾಧನೆಯ ಪಕ್ಷಿನೋಟದ ವೀಡಿಯೋವನ್ನು ಸ್ಕ್ರೀನ್ ಮಾಡಲು ಉದ್ದೇಶಿಸಲಾಗಿದೆ.ಸಧ್ಯಕ್ಕೆ ಇಷ್ಟು ಕಾರ್ಯಕ್ರಮಗಳ ಪಟ್ಟಿ ಸಿದ್ದವಾಗಿದ್ದು ಅದಕ್ಕೊಂದು ಸ್ಪಷ್ಟ ಸ್ವರೂಪ ಕೆಲವೇ ದಿನಗಳಲ್ಲಿ ದೊರೆಯಲಿದೆ.
“ಸಹ್ಯಾದ್ರಿ ಕಾಲೇಜ್ ಎನ್ನುವುದು ಕೇವಲ ನಮ್ಮ ಭೌತಿಕ ಹಾಗೂ ಬೌದ್ದಿಕ ಬೆಳವಣಿಗೆಗೆ ವೇದಿಕೆ ಯಾದ ಶಿಕ್ಷಣ ಕೇಂದ್ರ ಅಷ್ಟೇ ಅಲ್ಲ, ನಮ್ಮ ವ್ಯಕ್ತಿತ್ವ ವಿಕಸನ ಮತ್ತು ಭವಿಷ್ಯ ರೂಪಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಜ್ನಾನದೇಗುಲ.ಹಾಗಾಗಿ ಕಾಲೇಜ್ ಬಿಟ್ಟು ಒಂದೂವರೆ ದಶಕವೇ ಕೇಳದರೂ ಇವತ್ತಿಗು ಕಾಲೇಜಿನೊಂದಿಗೆ ಒಂದಲ್ಲಾ ಒಂದು ರೀತಿಯಲ್ಲಿ ನಿಕಟ ಸಂಪರ್ಕ ಇಟ್ಟು ಕೊಂಡಿದ್ದೇನೆ ಎನ್ನುವುದೇ ಸಂತೋಷದ ವಿಷಯ.ಇದರ ನಡುವೆ ನಮ್ಮೊಂದಿಗೆ ಓದಿದ, ಹಾಗೆ ಯೇ ನಮ್ಮ ಜ್ಯೂನಿಯರ್ಸ್-ಸೀನಿಯರ್ಸ್ ಗಳನ್ನು ನೋಡುವ,ಅವರೊಂದಿಗೆ ಹಳೆಯ ನೆನಪು ಗಳನ್ನು ಹಂಚಿಕೊಳ್ಳೊಕ್ಕೆ ಒಂದು ವೇದಿಕೆ ಸಮ್ಮಿಲನದ ಸ್ವರೂಪದಲ್ಲಿ ಸಿಗುತ್ತಿರುವುದು ನನ್ನ ಪೂರ್ವಜನ್ಮದ ಸುಕೃತ ಎಂದು ಭಾವಿಸು ತ್ತೇನೆ.ಅವತ್ತಿನ ದಿನಕ್ಕಾಗಿ ಕಾಯುತ್ತಿದ್ದೇನೆ.ನನ್ನ ಹಳೆಯ ಫ್ರೆಂಡ್ಸ್ ಗಳನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ.ನಿಮ್ಮ ಮೂಲಕ ನನ್ನ ಎಲ್ಲಾ ಫ್ರೆಂಡ್ಸ್ ಗಳನ್ನು ಅವತ್ತಿನ ಸಮ್ಮಿಲನಕ್ಕೆ ಹೃದಯಪೂರ್ವಕವಾಗಿ ಆಮಂತ್ರಿಸುತ್ತಿದ್ದೇನೆ..ಬನ್ನಿ ಅವತ್ತಿನ ದಿನ ಭೇಟಿಯಾಗೋಣ ಫ್ರೆಂಡ್ಸ್” ಸಂಕೇತ್ ಮೇಘರವಳ್ಳಿ –ಹಳೆಯ ವಿದ್ಯಾರ್ಥಿ
ಸಹ್ಯಾದ್ರಿ ಎನ್ನುವ ಜ್ನಾನತಪೋಭೂಮಿಯಲ್ಲಿ ಬೆಳೆದು,ಒಡನಾಡಿ,ಅದರ ಸಾಂಗತ್ಯದಿಂದ ಬದುಕು- ಭವಿಷ್ಯ ರೂಪಿಸಿಕೊಂಡ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವ ಚರಿತ್ರಾರ್ಹ ಘಟನೆಗೆ ಈ ಮಹಾಮಿಲನ ಸಾಕ್ಷಿಯಾಗಲಿದೆ.ಹೆಚ್ಚೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಆಯೋಜಕರ ಪ್ರಯತ್ನ ಯಶಸ್ವಿಯಾಗಿ ನಿರೀಕ್ಷೆ ಸಾಕಾರಗೊಳ್ಳಲಿ ಎನ್ನುವುದು ಕನ್ನಡ ಫ್ಲ್ಯಾಶ್ ನ್ಯೂಸ್ ನ ಆಶಯ.