CHALLENGING STAR, “D BOSS” DARSHAN RELEASE AFTER 131 DAYS OF PRISONMENT ..ದರ್ಶನ್ ಗೆ ದೀಪಾವಳಿ ಗಿಫ್ಟ್.. 131 ದಿನಗಳ ಸೆರೆವಾಸದ ಬಳಿಕ ದರ್ಶನ್ ಗೆ ರಿಲೀಸ್ ಭಾಗ್ಯ-ಇಚ್ಛಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕೋರ್ಟ್ ಅನುಮತಿ
ಬೆಂಗಳೂರು: ಒಂದಲ್ಲಾ ಎರಡಲ್ಲಾ ಬರೋಬ್ಬರಿ 131 ದಿನಗಳ ಸೆರೆವಾಸ ಕನ್ನಡ ಚಿತ್ರನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗದೀಪ ಗೆ ಬೇಲ್ ಭಾಗ್ಯ ಸಿಕ್ಕಿದೆ.ಚಿತ್ರದುರ್ಗದ ರೇಣುಕಸ್ವಾಮಿ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ದರ್ಶನ್ ಗೆ ಎದುರಾಗಿರುವ ಆರೋಗ್ಯ ಸಮಸ್ಯೆ ಸಂಬಂಧ ವೈದ್ಯಕೀಯ ಚಿಕಿತ್ಸೆ ಪಡೆಯೊಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಹೈ ಕೋರ್ಟ್ 6 ವಾರಗಳ ಮದ್ಯಂತರ ಜಾಮೀನು ಮಂಜೂರು ಮಾಡಿದೆ.ಈ ಮೂಲಕ ಕುಟುಂಬ-ಅಭಿಮಾನಿಗಳ ಸಮೇತ ದರ್ಶನ್ ದೀಪಾವಳಿ ಸಂಭ್ರಮ ಆಚರಿಸುವ ಅವಕಾಶ ಸಿಕ್ಕಂತಾಗಿದೆ.
ದರ್ಶನ್ ಪಾಲಿಗೆ ಗಣೇಶ ಹಬ್ಬವಾಗಲಿ, ನಾಡಹಬ್ಬ ದಸರಾವನ್ನಾಗಲಿ ಆಚರಿಸುವ ಭಾಗ್ಯ ದೊರೆತಿರಲಿಲ್ಲ.ಆದರೆ ದೀಪಾವಳಿ ಆಚರಣೆ ಮಾಡುವ ಅವಕಾಶ ಲಭಿಸಿದಂತಾಗಿದೆ.ಹಲವು ಷರತ್ತುಗಳನ್ನೊಳಗೊಂಡು ಜಾಮಿನು ಮಂಜೂರು ಮಾಡಿದೆ.ಭಾರತ ಬಿಟ್ಟು ಹೋಗಬಾರದು, ಪಾಸ್ ಪೋರ್ಟ್ ನ್ನು ಸರೆಂಡರ್ ಮಾಡಬೇಕು ಎನ್ನುವುದು ಪ್ರಮುಖ ಷರತ್ತಾಗಿದೆ.ಹಾಗೆಯೇ ದರ್ಶನ್ ಗೆ 6 ವಾರಗಳ ವಿಶ್ರಾಂತಿ ಅಗತ್ಯವಿರುವುದ ರಿಂದ ಅವರು ಬಯಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಕೋರ್ಟ್ ಅವಕಾಶ ನೀಡಿದೆ.ಮೈಸೂರಿನ ಅಪೋಲೋ ಆಸ್ಪತ್ರೆಗೆ ದರ್ಶನ್ ದಾಖಲಾಗಿ ಚಿಕಿತ್ಸೆ ಪಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ದರ್ಶನ್ ಗೆ ನೀಡಿರುವ ಆರು ವಾರಗಳ ಮದ್ಯಂತರ ಜಾಮೀನು ಮುಗಿಯುವುದರೊಳಗೆ ಜಾಮೀನು ಅವಧಿ ಮುಂದುವರೆಸುವಂತೆಯೂ ಅವರ ಪರ ವಕೀಲರು ಕೋರ್ಟ್ ಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.131 ದಿನಗಳ ಕಾಲ ಜೈಲು ಹಕ್ಕಿಯಾಗಿ ಕಷ್ಟಪಟ್ಟಿದ್ದ ದರ್ಶನ್ ಇಂದೇ ಬಿಡುಗಡೆಯಾಗುವ ಸಾಧ್ಯತೆಗಳಿವೆ.ಅವರ ಪರ ವಕೀಲರು ಇಂದೇ ಬಿಡುಗಡೆಗೆ ಕೋರಿದ್ದಾರೆ ಎನ್ನಲಾಗ್ತಿದೆ.ದರ್ಶನ್ ಬಿಡುಗಡೆ ಆಗುತ್ತಿದ್ದಂತೆ ಎಲ್ಲಿಗೆ ತೆರಳಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ
ಅಭಿಮಾನಿಗಳಲ್ಲಿ ಮನೆ ಮಾಡಿದ ಸಂಭ್ರಮ: ಇನ್ನೊಂದೆಡೆ 131 ದಿನಗಳವರೆಗು ದರ್ಶನ್ ಪರ ನಿಂತು ಅವರ ಬಿಡುಗಡೆಗೆ ಚಾತಕ ಪಕ್ಷಿಗಳಂತಾಗಿದ್ದರು ಅವರ ಅಭಿಮಾನಿಗಳು.ಡಿ ಬಾಸ್ ಯಾವಾಗ ಬಿಡುಗಡೆ ಆಗುತ್ತಾರೆ.ಅವರ ಮುಖ ದರ್ಶನದ ಭಾಗ್ಯ ಯಾವಾಗ ದೊರೆಯಬಹುದೆನ್ನುವ ಕುತೂಹಲ ಅವರಲ್ಲಿತ್ತು.ಇದೀಗ ಕೋರ್ಟ್ ಬೇಲ್ ನೀಡಿರುವುದರಿಂದ ಡಿ ಬಾಸ್ ಅವರನ್ನು ಹೇಗೆ ಸ್ವಾಗತಿಸಬೇಕೆನ್ನುವ ದೊಡ್ಡ ಮಟ್ಟದ ಚರ್ಚೆ ಅಭಿಮಾನಿಗಳಲ್ಲಿ ನಡೆಯುತ್ತಿದೆ.ಬಳ್ಳಾರಿಯಿಂದ ಬೆಂಗಳೂರಿಗೆ ಬರುವ ಮಾರ್ಗ ಮದ್ಯೆ ದರ್ಶನ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸೊಕ್ಕೆ ಸಿದ್ದತೆ ಕೂಡ ಮಾಡಿಕೊಂಡಿದ್ದಾರೆ. ಈ ನಡುವೆ ಡಿ ಬಾಸ್ ಬಿಡುಗಡೆಯನ್ನು ಹಬ್ಬದೋಪಾದಿಯಲ್ಲಿ ಸಂಭ್ರಮಿಸುತ್ತಿರುವ ಅಭಿಮಾನಿಗಳು ಪರಸ್ಪರ ಸಿಹಿ ಹಂಚುವ ಮೂಲಕ ಸಂತೋಷವನ್ನು ವಿನಿಮಯ ಮಾಡಿಕೊಂಡರು