BREAKING NEWSCRIME NEWSKANNADAFLASHNEWSPhoto Gallery

LIFE THREAT, BIGBOSS CONTESTENT JAGADEESH SEEKS POLICE SECURITY.. “ಜೀವಬೆದರಿಕೆ”ಯಿದೆ ಸೂಕ್ತ “ರಕ್ಷಣೆ” ಕೊಡಿ…?! ಪೊಲೀಸ್ ಕಮಿಷನರ್ ಗೆ ಬಿಗ್ ಬಾಸ್ ಸ್ಪರ್ಧಿ ಜಗದೀಶ್ ಮನವಿ

Share

ಬೆಂಗಳೂರು: ನನಗೆ ಜೀವ ಬೆದರಿಕೆ ಇದೆ..ನನಗೆ ಅಭಿಮಾನಿಗಳು ಹೆಚ್ಚಾಗಿರುವಷ್ಟೇ ನನ್ನ ಏಳಿಗೆ-ನೇರವಂತಿಕೆ ಸಹಿಸದೆ ಸಾಕಷ್ಟು ಶತೃಗಳು ಹುಟ್ಟಿಕೊಂಡಿದ್ದಾರೆ.ಹಾಗಾಗಿ ನನಗೆ ಸೂಕ್ತ ಭದ್ರತೆ ಬೇಕು ಎಂದು ಬಿಗ್ ಬಾಸ್ ಸ್ಪರ್ದಿ ಜಗದೀಶ್ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಜಗದೀಶ್ ಅವರು, ಅನ್ಯಾಯದ ವಿರುದ್ಧ ಮೊದಲಿಂದಲು ಹೋರಾಡುತ್ತಿರುವವನು ನಾನು..ನನ್ನ ಮೇಲೆ ಸಾಕಷ್ಟು ಹಲ್ಲೆ ಯತ್ನ ನಡೆದಿವೆ.ನನ್ನ ಮೇಲಿನ ದ್ವೇಷಕ್ಕೆ ನನ್ನ ಮಗನ  ಮೇಲೂ ಹಲ್ಲೆ ನಡೆಸಲಾಗಿದೆ.ಮಾಡದ ತಪ್ಪಿಗೆ ನನ್ನನ್ನು ಜೈಲಿಗೆ ಕಳುಹಿಸಲಾಗಿತ್ತು.ಅದೆಲ್ಲವನ್ನು ನಾನು ಸಹಿಸಿಕೊಂಡಿದ್ದೇನೆ.ಅನ್ಯಾಯದ ವಿರುದ್ಧ ಹೋರಾಡುತ್ತಿರುವ ನನಗೆ ಜೀವಬೆದರಿಕೆ ಇದೆ ಎಂದು ನಾನು ಸುಮ್ಮನೆ ಕೂರುವುದಿಲ್ಲ.ನನ್ನ ಹೋರಾಟ ಮುಂದುವರೆಸುತ್ತೇನೆ.ಆದರೆ ಇದಕ್ಕಾಗಿ ನನಗೆ ಸೂಕ್ತ ಭದ್ರತೆಯ ಅಗತ್ಯವಿದೆ ಎಂದು ದೂರಿನಲ್ಲಿ ಜಗದೀಶ್ ವಿವರಿಸಿದ್ದಾರೆ.

ಒಂದೆಡೆ ಜೀವ ಬೆದರಿಕೆ ಇನ್ನೊಂದೆಡೆ ಅಭಿಮಾನಿಗಳ ಪ್ರೀತಿ.ಬಿಗ್ ಬಾಸ್ ನಿಂದ ಬಂದ ನಂತರವಮತೂ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಕೆಲ ಕಾರ್ಯಕ್ರಮದ ವೇಳೆ ಅಭಿಮಾನಿಗಳು ಮಾತನಾಡಲಿಕ್ಕೆ ಮುಗಿಬೀಳ್ತಿದ್ದಾರೆ. ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನಲೆ ಸೂಕ್ತ ಭದ್ರತೆ  ಬೇಕಿದೆ.ನಾನು ಅಭಿಮಾನಿಗಳಿಂದ ಅಂತರ ಕಾಯ್ದುಕೊಳ್ಳಬೇಕು.ಅವರಿಂದ ತೊಂದರೆ ಇದೆ ಎನ್ನುವ ಕಾರಣಕ್ಕೆ ಭದ್ರತೆ ಕೇಳುತ್ತಿಲ್ಲ.ನಾನು ಸುರಕ್ಷಿತ ಎಂದು ಫೀಲ್ ಮಾಡಲು ನನಗೆ ರಕ್ಷಣೆಯ ಅಗತ್ಯವಿದೆ ಅಷ್ಟೆ.ಅದನ್ನು ಕೇಳಿದ್ದೇನೆ.ನನಗೆ ಪೊಲೀಸರ ಮೇಲೆ ನಂಬಿಕೆಯಿದೆ ಎಂದು ಅವರು ತಿಳಿಸಿದ್ದಾರೆ.ಕೇವಲ  ಪೊಲೀಸ್ ಕಮಿಷನರ್ ಅವರಿಗೆ ಮಾತ್ರವಲ್ಲ ಸಿಎಂ, ಡಿಜಿಪಿಗೂ ಈ ಬಗ್ಗೆ ಜಗದೀಶ್ ಅವರು ಮನವಿ ಸಲ್ಲಿಸಿದ್ದಾರೆ.


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button