BREAKING NEWSCITY

ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ವೈದ್ಯ ಮತ್ತು 6 ವಲಸೆ ಕಾರ್ಮಿಕರ ಹತ್ಯೆ

Share

ಸ್ಥಳೀಯ ವೈದ್ಯ ಹಾಗೂ 6 ವಲಸಿಗ ಕಾರ್ಮಿಕರನ್ನು ಉಗ್ರರು ಹತ್ಯೆಗೈದ ಘಟನೆ ಜಮ್ಮು ಕಾಶ್ಮೀರದ ಗಂಡ್ರೇಬೆಲ್ ಜಿಲ್ಲೆಯ ಸೋನಾಬರ್ಗ್ ನಲ್ಲಿ ನಡೆದಿದೆ.

ಭಾನುವಾರ ಸಂಜೆ ನಿರ್ಮಾಣ ಹಂತದ ಸುರಂಗದ ಮೇಲೆ ದಾಳಿ ಮಾಡಿದ ಉಗ್ರರು 6 ಮಂದಿಯನ್ನು ಹತ್ಯೆಗೈದಿದ್ದಾರೆ. ಭಾರತೀಯ ಸೇನೆ ಘಟನೆ ನಡೆದ ಪ್ರದೇಶವನ್ನು ಸುತ್ತುವರಿದಿದ್ದು, ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಜೆಡ್-ಮಾರ್ಥ್ ಸುರಂಗದ ಕಾಮಗಾರಿ ನಡೆಯುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದಾರೆ. ಘಟನೆಗೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಆಘಾತ ವ್ಯಕ್ತಪಡಿಸಿದ್ದು, ನಾಗರಿಕರ ಮೇಲೆ ಈ ರೀತಿ ದಾಳಿ ಮಾಡುವುದು ಅಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಮೂಲದ ಲಷ್ಕರೆ ಇ-ತೋಯ್ಬಾ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ.


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button