BREAKING NEWSCINEMA
ರಜನಿಕಾಂತ್ `ವೆಟ್ಟಿಯಾನ್’: ಮೊದಲ ದಿನವೇ 30 ಕೋಟಿ ಗಳಿಕೆ!
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ವೆಟ್ಟಿಯಾನ್ ಚಿತ್ರ ಭಾರತದಲ್ಲಿ ಮೊದಲ ದಿನವೇ 30 ಕೋಟಿ ರೂ. ಗಳಿಸುವ ಮೂಲಕ ಭರ್ಜರಿ ಓಪನಿಂಗ್ ಪಡೆದಿದೆ.
ರಜನಿಕಾಂತ್ ಜೊತೆಗೆ ಅಮಿತಾಭ್ ಬಚ್ಚನ್, ರಾಣಾ ದಗ್ಗುಬಾಟಿ, ಫೈಜಲ್ ಫಜಲ್ ಸೇರಿದಂತೆ ದೊಡ್ಡ ತಾರಾಬಳಗವೇ ಹೊಂದಿರುವ ವೆಟ್ಟಿಯಾನ್ ಚಿತ್ರ ಭಾರತದಲ್ಲಿ ಭರ್ಜರಿ ಓಪನಿಂಗ್ ಪಡೆದಿದ್ದು, ಅತೀ ಹೆಚ್ಚು 26.15 ಕೋಟಿ ರೂ. ಪಾಲು ತಮಿಳುನಾಡಿನಿಂದ ಬಂದಿದೆ.
ಮೊದಲ ದಿನದ ಗಳಿಕೆಯಲ್ಲಿ ತೆಲುಗಿನಲ್ಲಿ 3.2 ಕೋಟಿ ರೂ., ಹಿಂದಿಯಲ್ಲಿ ಕೇವಲ 60 ಲಕ್ಷ, ಕನ್ನಡದಲ್ಲಿ 50 ಲಕ್ಷ ರೂ. ಪಾಲು ಹೊಂದಿದೆ. ವೀಕೆಂಡ್ ನಲ್ಲಿ ಸತತ ರಜೆಗಳು ಇರುವುದರಿಂದ ತಮಿಳು ಅಲ್ಲದೇ ಇತರೆ ಭಾಷೆಗಳಲ್ಲೂ ಗಳಿಕೆ ಹೆಚ್ಚಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ 33 ವರ್ಷಗಳ ನಂತರ ಮೊದಲ ಬಾರಿ ತೆರೆ ಹಂಚಿಕೊಂಡಿದ್ದಾರೆ. 1991ರಲ್ಲಿ ಹಮ್ ಚಿತ್ರದಲ್ಲಿ ಕೊನೆಯ ಬಾರಿಗೆ ಇವರು ಜೊತೆಯಾಗಿ ನಟಿಸಿದ್ದರು.