BREAKING NEWSCITY
ಜಪಾನ್ ನ ನಿಹಾನ್ ಹಿಡಾಂಕ್ಯೊಗೆ ಒಲಿದ ನೋಬೆಲ್ ಶಾಂತಿ ಪ್ರಶಸ್ತಿ
ಪರಮಾಣು ಮುಕ್ತ ಜಗತ್ತು ಪ್ರತಿಪಾದಿಸಿ ಜಾಗತಿಕ ಮಟ್ಟದಲ್ಲಿ ಶಾಂತಿ ಸುವ್ಯವಸ್ಥೆಗೆ ಹೋರಾಟ ನಡೆಸುತ್ತಿರುವ ಜಪಾನ್ ನ ನಿಹಾನ್ ಹಿಂಡಾಕ್ಯೊ ಸಂಸ್ಥೆಗೆ ನೋಬೆಲ್ ಶಾಂತಿ ಪ್ರಶಸ್ತಿ ಒಲಿದಿದೆ.
ಹಿರೊಶಿಮಾ ಮತ್ತು ನಾಗಸಾಕಿಯಲ್ಲಿ ಪರಮಾಣು ದಾಳಿಯಿಂದ ಸಂತ್ರಸ್ತರ ನೆರವಿಗೆ ತಳಮಟ್ಟದಲ್ಲಿ ಶ್ರಮ ವಹಿಸುತ್ತಿರುವ ನಿಹಾನ್ ಹಿಂಡಾಕ್ಯೊ ಸಂಸ್ಥೆ ಹಿಬಾಶುಕಾ ಎಂದೇ ಖ್ಯಾತಿ ಪಡೆದಿದೆ.
ಪರಮಾಣುವಿನಿಂದ ಆಗುವ ಹಾನಿಗಳ ಕುರಿತು ಸಾಕ್ಷ್ಯಗಳನ್ನು ಸಂಗ್ರಹಿಸಿ ಅವುಗಳ ಮೂಲಕ ನಿಹಾನ್ ಹಿಂಡಾಕ್ಯೊ ಪರಮಾಣು ಮುಕ್ತ ಜಗತ್ತಿಗಾಗಿ ಹೋರಾಟ ನಡೆಸುತ್ತಾ ಬಂದಿದೆ.