BREAKING NEWSDISTRICTDISTRICT NEWS
ಭೀಮಾ ನದಿಪಾಲಾದ ಬಟ್ಟೆ ತೊಳೆಯಲು ನದಿಗೆ ಇಳಿದಿದ್ದ ಇಬ್ಬರು ಬಾಲಕಿಯರು
ಬಟ್ಟೆ ಒಗೆಯಲು ನದಿಗೆ ಇಳಿದಿದ್ದ ಇಬ್ಬರು ಬಾಲಕಿಯರಿಬ್ಬರು ಭೀಮಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ಕಲಬುರಗಿ ಜಿಲ್ಲೆಯ ಅಫ್ಝಲ್ ಪುರ ತಾಲೂಕಿನ ಬನ್ನಹಟ್ಟಿ ಗ್ರಾಮದಲ್ಲಿ ಸಂಭವಿಸಿದೆ.
ಬನ್ನಹಟ್ಟಿ ಗ್ರಾಮದ ಭೂಮಿಕಾ ದೊಡ್ಡಮನಿ (8) ಮತ್ತು ಚಿಂಚೊಳ್ಳಿ ಗ್ರಾಮದ ಶ್ರಾವಣಿ ನಾಟೀಕರ್ (11) ನೀರುಪಾಲಾಗಿದ್ದಾರೆ.
ಬಟ್ಟೆ ಒಗೆಯಲು ತೆರಳಿದ್ದ ಬಾಲಕಿಯರಿಬ್ಬರು ನದಿಯಲ್ಲಿ ಈಜಾಡಲು ಮುಂದಾಗಿದ್ದಾರೆ. ಈ ವೇಳೆ ಭೂಮಿಕಾ ಆಕಸ್ಮಿಕವಾಗಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದು, ಆಕೆಯನ್ನು ರಕ್ಷಿಸಲು ಶ್ರಾವಣಿ ಕೂಡ ಮುಂದಾಗಿದ್ದಾಳೆ.
ನೀರಿನ ಸೆಳೆತಕ್ಕೆ ಸಿಲುಕಿದ ಭೂಮಿಕಾ ಮತ್ತು ಶ್ರಾವಣಿ ಇಬ್ಬರು ಕೊಚ್ಚಿ ಹೋಗಿದ್ದು, ಶ್ರಾವಣಿ ಮೃತದೇಹ ಪತ್ತೆಯಾಗಿದ್ದು, ಭೂಮಿಕಾ ಮೃತದೇಹ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿದ್ದು, ಅಫ್ಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.