BREAKING NEWSDISTRICTDISTRICT NEWSKANNADAFLASHNEWS
ತಲಕಾವೇರಿಯಲ್ಲಿ ಉದ್ಭವಿಸಿದ ಕಾವೇರಿ: ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ
ಕೊಡಗು ಜಿಲ್ಲೆಯ ತಲಕಾವೇರಿ ಪುಣ್ಯಕ್ಷೇತ್ರದಲ್ಲಿ ಇಂದು ಬೆಳಗ್ಗೆ ಕಾವೇರಿ ಪವಿತ್ರ ತೀರ್ಥೋದ್ಭವಿಸಿದ್ದು ಭಕ್ತಾದಿಗಳಿಗೆ ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ ನೀಡಿದಳು.
ತಲಕಾವೇರಿ ಪುಣ್ಯಕ್ಷೇತ್ರದ ಬ್ರಹ್ಮಕುಂಡಿಕೆಯಲ್ಲಿ ನಿರೀಕ್ಷೆಯಂತೆ ಗುರುವಾರ ಬೆಳಗ್ಗೆ 7 ಗಂಟೆ 40 ನಿಮಿಷ ತುಲಾ ಲಗ್ನದಲ್ಲಿ ತೀರ್ಥೋದ್ಭ ಆಯಿತು. ಮೂರು ಬಾರಿ ಉಕ್ಕಿ ಬಂದ ಕಾವೇರಿ ಭಕ್ತರಿಗೆ ಕಾಣಿಸಿಕೊಂಡಿದ್ದು, ನೆರೆದಿರುವ ಭಕ್ತರಿಗೆ ಬ್ರಹ್ಮಕುಂಡಿಕೆಯಿಂದ ತೀರ್ಥ ಪ್ರೋಕ್ಷಣೆ ಮಾಡಲಾಯಿತು.
ಮಂಡ್ಯ, ಮೈಸೂರು, ಹಾಸನ ಅಲ್ಲದೇ ರಾಜ್ಯದ ನಾನಾ ಕಡೆಗಳಿಂದ ಹಾಗೂ ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳದಿಂದ ಸಹಸ್ರ ಸಂಖ್ಯೆಯಲ್ಲಿ ಭಕ್ತರ ಆಗಮಿಸಿದ್ದರು.