BREAKING NEWSCITYKANNADAFLASHNEWS
ನ್ಯೂಯಾರ್ಕ್ ಗೆ ಹೊರಟ್ಟಿದ್ದ 239 ಪ್ರಯಾಣಿಕರಿದ್ದ ವಿಮಾನ ದೆಹಲಿಗೆ ಮಾರ್ಗ ಬದಲಾವಣೆ!
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಮುಂಬೈನಿಂದ ಅಮೆರಿಕದ ನ್ಯೂಯಾರ್ಕ್ ಗೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನವನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಗಿದೆ.
ಎಐ 119 ವಿಮಾನ 239 ಪ್ರಯಾಣಿಕರನ್ನು ಹೊತ್ತು ಮುಂಬೈನಿಂದ ಹೊರಟ್ಟಿದ್ದು, ವಿಮಾನ ಹೊರಟ ಕೆಲವೇ ಕ್ಷಣಗಳಲ್ಲಿ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಕೂಡಲೇ ದೆಹಲಿಗೆ ಮಾರ್ಗ ಬದಲಾಯಿಸಲಾಯಿತು.
ವಿಮಾನದಲ್ಲಿದ್ದ ಪ್ರತಿಯೊಬ್ಬ ಪ್ರಯಾಣಿಕ ಹಾಗೂ ಸಿಬ್ಬಂದಿಯ ಭದ್ರತಾ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಆತಂಕ ಕಂಡು ಬಾರದ ಕಾರಣ ವಿಮಾನ ಮತ್ತೆ ನ್ಯೂಯಾರ್ಕ್ ಕಡೆ ಹೋಗಲು ಅನುಮತಿಸಲಾಯಿತು. ಆದರೆ ವಿಮಾನದ ಭದ್ರತೆ ನಿಯಮಗಳು ಪೂರ್ಣಗೊಳ್ಳುವವರೆಗೂ ನಿಲ್ಲಿಸಲು ಸೂಚಿಸಲಾಗಿದೆ.