BREAKING NEWSCITY
ತರಬೇತಿ ವೇಳೆ ಸ್ಫೋಟದಿಂದ ಇಬ್ಬರು ಅಗ್ನಿವೀರ್ ಯೋಧರ ದುರ್ಮರಣ
ಗುಂಡು ಹಾರಿಸುವ ತರಬೇತಿ ವೇಳೆ ಮೈದಾನದ ಗನ್ ಸ್ಫೋಟಗೊಂಡ ಪರಿಣಾಮ ಇಬ್ಬರು ಅಗ್ನಿವೀರ್ ಯೋಧರು ಮೃತಪಟ್ಟ ದಾರುಣ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ಸಂಭವಿಸಿದೆ.
ನಾಸಿಕ್ ರಸ್ತೆಯಲ್ಲಿರುವ ಆರ್ಟಿಲರಿ ಸೆಂಟರ್ ನಲ್ಲಿ ಶುಕ್ರವಾರ ನಡೆದ ತರಬೇತಿ ವೇಳೆ ಈ ದುರಂತ ಸಂಭವಿಸಿದೆ. ಇತ್ತೀಚೆಗಷ್ಟೇ ಅಣಕು ಪ್ರದರ್ಶನದ ವೇಳೆ ಸಂಭವಿಸಿದ ಸ್ಫೋಟದಲ್ಲಿ ಅಗ್ನಿವೀರ್ ಯೋಧ ಮೃತಪಟ್ಟ ಘಟನೆ ಬೆನ್ನಲ್ಲೇ ಮತ್ತೊಂದು ದುರ್ಘಟನೆ ಸಂಭವಿಸಿದೆ.
ಸ್ಫೋಟದಲ್ಲಿ ಮೃತಪಟ್ಟ ಅಗ್ನಿವೀರ್ ಯೋಧರನ್ನು ಗೋಹ್ಲಿ ವಿಶ್ವಾಸ್ ಸಿಂಗ್ (21) ಮತ್ತು ಸೈಫತ್ ಶಿಟ್ (21) ಎಂದು ಗುರುತಿಸಲಾಗಿದೆ.
ತರಬೇತಿ ವೇಳೆ ಶೆಲ್ ಸ್ಫೋಟಗೊಂಡ ಪರಿಣಾಮ ಇಬ್ಬರು ಅಗ್ನಿವೀರ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಆರಂಭಕ್ಕೂ ಮುನ್ನವೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.