ONLINE NEWS
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಧಾನ ಪರಿಷತ ಸದಸ್ಯ ರಾದ ಚನ್ನರಾಜ್ ಹಟ್ಟಿಹೋಳಿ ಬೇಗ ಗುಣಮುಖ ರಾಗಲೆಂದು ಅಲ್ತಾಫ್ ಯಾದವಾಡ ದೇವರಲ್ಲಿ ಪ್ರಾರ್ಥನೆ*
ಭಾರತ ಟೈಮ್ಸ್ ಸುದ್ದಿ :ಬೆಳಗಾವಿ – ಸೋಮವಾರ ಸಿ ಎಲ್ ಪಿ ಸಭೆ ಮುಗಿಸಿ ಸಂಕ್ರಾಂತಿ ಹಬ್ಬದ ನಿಮಿತ್ಯ ಬೆಳಗಾವಿಗೆ ಕಾರಿನ ಮೂಲಕ ಸರ್ಕಾರಿ ವಾಹನದಲ್ಲಿ ಬರುವಂತಹ ಸಂದರ್ಭದಲ್ಲಿ ಮಂಗಳವಾರ ಮುಂಜಾನೆ 5 ಗಂಟೆಗೆ ಬೆಳಗಾವಿ ಜಿಲ್ಲೆ ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿ ಬಳ್ಳಿ ನಾಯಿಗಳು ಅಡ್ಡ ಬಂದ ಕಾರಣದಿಂದ ಸಚಿವರ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.
ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ L1 &L4 ಮೂಳೆ ಪ್ರಕ್ಚರ್ ಆಗಿದೆ ಹಾಗೂ ವಿಧಾನ ಪರಿಷತ ಸದಸ್ಯರಾದ ಚನ್ನರಾಜ ಹಟ್ಟಿಹೋಳಿ ಅವರಿಗೆ ತಲೆಗೆ ಸ್ವಲ್ಪ್ ಪೆಟ್ಟಾಗಿದೆ ಹಾಗೂ ಗನಮ್ಯಾನ್ ಹಾಗೂ ಕಾರಚಾಲಕರಿಗೆ ಸ್ವಲ್ಪ್ ಗಾಯ ವಾಗಿದೆ.
ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇವತ್ತಿಗೆ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಇದ್ದಾರೆ. ಆದ ಕಾರಣ ಸಚಿವರು ಬೇಗ ಗುಣ ಮುಖರಾಗಿ ಕ್ಷೇತ್ರದ ಹಾಗೂ ರಾಜ್ಯದ ಜನತೆಯ ಸೇವೆ ಮಾಡಲೆಂದು ಪಂತ ಬಾಳೆಕುಂದ್ರಿ ಗ್ರಾಮದಲ್ಲಿ ಅವರ ಅಭಿಮಾನಿ ಅಲ್ತಾಫ್ ಯಾದವಾಡ ದರ್ಗಾದಲ್ಲಿ ಪ್ರಾರ್ಥನೆ ಮಾಡಿದರು.