ONLINE NEWS

ಹಣಕಟ್ಟಿಸಿಕೊಂಡು ಮಹಿಳೆಯರಿಗೆ ಮೋಸ,ಅನ್ಯಾಯಕ್ಕೆ ಒಳಗಾದ ಮಹಿಳೆಯರು:ಸಚಿವ ಸತೀಶ್ ಜಾರಕಿಹೊಳಿ.

Share

ಭಾರತ ಟೈಮ್ಸ್ ಸುದ್ದಿ : ಬೆಳಗಾವಿ : ಮೈಕ್ರೋಪೈನಾಸ್ಸ್ ನಿಂದ ಸಾಲ ಪಡೆದು ಜಿಲ್ಲೆಯಲ್ಲಿ ಸುಮಾರು ಹದಿನೈದು ಸಾವಿರ ಜನ ಮಹಿಳೆಯರು ಮೋಸ ಹೋಗಿದ್ದು, ಈ ಕುರಿತು ಮೂವರು ಪೊಲೀಸ್ ಅಧಿಕಾರಿಗಳ ತಂಡ ರಚಿಸಿ, ತನಿಖೆಗೆ ಆದೇಶಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಈ ಕುರಿತು ಮಾತನಾಡಿದ ಅವರು, ಮೈಕ್ರೋಪೈನಾಸ್ಸ್ ನಿಂದ ಸುಮಾರು ಹದಿನೈದು ಸಾವಿರ ಮಹಿಳೆಯರು ಲೀಗಲ್ ಆಗಿ

ಸಾಲ ಪಡೆದು, ಹೆಚ್ಚಿನ ಹಣ ಸಿಗುತ್ತದೆ ಎಂದು ಮೋಸಕ್ಕೆ ಒಳಗಾಗಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯರಿಂದ ಸುಮಾರು ನೂರು ಕೋಟಿ ಪಡೆದಿದ್ದಾರೆಂಬ ಮಾಹಿತಿ ಇದೆ. ಹೀಗಾಗಿ ಈಗಾಗಲೇ ಪೊಲೀಸ್ ಅಧಿಕಾರಿಗಳ ತಂಡ ತನಿಖೆಗೆ ಸೂಚಿಸಲಾಗಿದ್ದು, ಶೀಘ್ರವೇ ಸತ್ಯಾಸತ್ಯೆತೆ ತಿಳಿಯಲಿದೆ. ಮಹಿಳೆಯರಿಗೆ ಮೋಸ ಮಾಡಿದ ಮಧ್ಯವರ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ. ಆದ್ದರಿಂದ ಮೈಕ್ರೋಪೈನಾಸ್ಸ್ ನಿಂದ ಮಹಿಳೆಯರಿಗೆ ಯಾವುದೇ ತರಹ ತೊಂದರೆ ಮಾಡಬಾರದು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಇನ್ನು ಗುತ್ತಿಗೆದಾರ ಆತ್ಮಹತ್ಯೆ ಕೆಸ್ ಬಗ್ಗೆ ಮಾತನಾಡಿದ ಅವರು, ಕೆ.ಎಸ್. ಈಶ್ವರಪ್ಪ ಅವರ ಕೇಸ್ ನಲ್ಲಿ ಸಂತೋಷ ಪಾಟೀಲ ಈಶ್ವರಪ್ಪನವರ ಹೆಸರು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ, ಆದರೆ ಪ್ರಿಯಾಂಕಾ ಖರ್ಗೆ ಅವರ ಹೆಸರು ಎಲ್ಲಿಯೂ ಉಲ್ಲೇಖವಿಲ್ಲ. ಹೀಗಾಗಿ ಈ ಕುರಿತು ತನಿಖೆ ನಡೆಯಲಿ, ತನಿಖೆಯಿಂದ ಸತ್ಯಾಸತ್ಯೆತೆ ತಿಳಿಯುತ್ತೆ. ಇನ್ನು ಬಿಜೆಪಿಯವರು ಪ್ರತಿಭಟಿಸಿದರೆ, ಆಗ್ರಹಿಸಿದರೆ ರಾಜೀನಾಮೆ ನೀಡೊಕ್ಕೆ ಆಗಲ್ಲ ಎಂದರು.

ಬೆಳಗಾವಿಯ ಕಸ ವಿಲೇವಾರಿಗೆ ನಾಲ್ಕು ಘಟಕಗಳನ್ನು ಮಾಡಬೇಕೆಂದು ನಾನು ಮೊದಲೆ ಹೇಳಿದ್ದೆ, ಈ ಕುರಿತು ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆ ಹರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕ ಆಸೀಫ್ ( ರಾಜು) ಸೇಠ್ ಇದ್ದರು.*


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button