BREAKING NEWSCINEMA
ದಸರಾಗೂ ದರ್ಶನ್ ಬಿಡುಗಡೆ ಭಾಗ್ಯವಿಲ್ಲ: ಅಕ್ಟೋಬರ್ 14ಕ್ಕೆ ಜಾಮೀನು ತೀರ್ಪು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅಂತ್ಯಗೊಂಡಿದ್ದು, ಅಕ್ಟೋಬರ್ 14ರಂದು ತೀರ್ಪು ಹೊರಬೀಳಲಿದೆ.
57ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶ ಜೈ ಶಂಕರ್ ವಿಚಾರಣೆಯನ್ನು ಅಂತ್ಯಗೊಳಿಸಿದ್ದು, ಅಕ್ಟೋಬರ್ 14ಕ್ಕೆ ತೀರ್ಪು ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ.
ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ಮತ್ತು ಸರ್ಕಾರದ ಪರ ವಕೀಲ ಪ್ರಸನ್ನ ಕುಮಾರ್ ಗುರುವಾರವೂ ಸುದೀರ್ಘ ವಾದ ಪ್ರತಿವಾದ ನಡೆಸಿದ್ದು, ವಿಚಾರಣೆ ಅಂತ್ಯಗೊಂಡಿದೆ.
ವಾದ-ಪ್ರತಿವಾದ ಸುದೀರ್ಘ ಸಮಯ ತೆಗೆದುಕೊಂಡಿದ್ದರಿಂದ ದಸರಾ ಮುಗಿಯುವ ಮುನ್ನ ಜಾಮೀನು ಸಿಗುವ ವಿಶ್ವಾಸದಲ್ಲಿದ್ದ ದರ್ಶನ್ ಗೆ ನಿರಾಸೆ ಉಂಟಾಗಿದೆ.