ಮಹಿಳಾ ದಿನಾಚರಣೆಯಂದು ಮಹಿಳಾ ಸಮುದಾಯಕ್ಕೆ ಗಿಪ್ಟ್.. ರಾಜ್ಯಸಭೆಗೆ ಸುಧಾಮೂರ್ತಿ ನೇಮಕ
ಬೆಂಗಳೂರು: ಮಹಿಳಾ ದಿನಾಚರಣೆಯಂದೇ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಮಹಿಳಾ ಸಮುದಾಯಕ್ಕೆ ಹೊಸ ಗಿಫ್ಟ್ ನೀಡಿದ್ದಾರೆ.ಕರ್ನಾಟಕದ ಮಹಿಳಾ ಸಮುದಾಯದ ಐಕಾನ್ ( ಮಾದರಿ,ಆದರ್ಶ) ಎನಿಸಿಕೊಂಡಿರುವ ಇನ್ಫೋಸಿಸ್ ಪ್ರತಿಷ್ಟಾನದ ಅಧ್ಯಕ್ಷೆ ಹಾಗೂ ಲೇಖಕಿ,ಸಮಾಜಸುಧಾರಕಿ ಸುಧಾಮೂರ್ತಿ ಅವರನ್ನು ರಾಷ್ಟ್ರಪ್ರತಿ ದ್ರೌಪತಿ ಮುರ್ಮು ನಾಮನಿರ್ದೆಶಕ ಮಾಡಿದ್ದಾರೆ.ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಅಕೌಂಟ್ ನಲ್ಲಿ ಪ್ರಕಟಿಸಿದ್ದಾರೆ.
ರಾ್ಜ್ಯದ ಜನತೆ ಮಟ್ಟಿಗೆ ತೀವ್ರ ಅಶ್ಚರ್ಯಕರ ಹಾಗೂ ಸಂತೋಷದಾಯಕ ಬೆಳವಣಿಗೆ ಎಂದೇ ಕರೆಯಿಸಿಕೊಂಡಿರುವ ಸುಧಾಮೂರ್ತಿ ಅವರ ರಾಜ್ಯಸಭೆಗೆ ನಾಮನಿರ್ದೇಶನ ಪ್ರಕ್ರಿಯೆ ಕರ್ನಾಟಕದ ಮಟ್ಟಿಗೆ ದೊಡ್ಡಮಟ್ಟದ ಸಾಧನೆ ಎನಿಸಿಕೊಂಡಿದೆ.ಅವರ ಸಾಮಾಜಿಕ ಕಳಕಳಿ ಹಾಗೂ ಅನನ್ಯಸೇವೆಗೆ ಪ್ರಧಾನಿ ನರೇಂದ್ರಮೋದಿ ಅವರೇ ಈ ಗಿಫ್ಟ್ ನೀಡಿದ್ದಾರೆ. ಸುಧಾಮೂರ್ತಿ ಅವರಿಗೆ ಸಂದಿರುವ ಈ ಗೌರವಕ್ಕೆ ದೇಶಾಧ್ಯಂತ ಮೆಚ್ಚುಗೆ ಹಾಗೂ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ.ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಸುಧಾಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸುತ್ತದೆ.