BREAKING NEWSCITY
ಪತಿ ಸಾವಿನ ಸುದ್ದಿ ಕೇಳಿ ಪತ್ನಿ ಆತ್ಮಹತ್ಯೆ: ಆಘಾತ ಮೂಡಿಸಿದ ಸೇನಾಧಿಕಾರಿಗಳ ಸಾವು!
ಪತಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ಪತ್ನಿ ಕೂಡ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ದೆಹಲಿ ಸಮೀಪದ ಆಗ್ರಾದಲ್ಲಿ ನಡೆದಿದೆ.
ಭಾರತೀಯ ವಾಯುಪಡೆಯ ಫ್ಲೈಟ್ ಲೆಫ್ಟಿನೆಂಟ್ ದೀನ್ ದಯಾಳ್ ದೀಪ್ ಸಾವಿನ ಸುದ್ದಿ ಕೇಳಿದ ಭಾರತೀಯ ಸೇನೆಯ ಕ್ಯಾಪ್ಟನ್ ಆಗಿದ್ದ ಪತ್ನಿ ರೇಣು ತನ್ವಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೆಹಲಿಯ ಆರ್ಮಿ ಕಂಟೊನ್ಮೆಂಟ್ ಆಫೀಸರ್ಸ್ ಕಾಲೋನಿಯಲ್ಲಿ ವಾಸವಿದ್ದ ರೇಣು ತನ್ವಾರ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಠಡಿಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಪತಿಯ ಜೊತೆ ನನ್ನ ಕೈ ಇರಿಸಿ ಇಬ್ಬರದ್ದೂ ಒಟ್ಟಿದೆ ಅಂತ್ಯಕ್ರಿಯೆ ಮಾಡಿ ಎಂದು ಮನವಿ ಮಾಡಿದ್ದಾರೆ.
ದೀನ್ ದಯಾಳ್ ದೀಪ್ ಬಿಹಾರ ಮೂಲದವರಾಗಿದ್ದು, ಆಗ್ರಾದ ವಾಯುನೆಲೆಯಲ್ಲಿ ನಿಯೋಜನೆಗೊಂಡಿದ್ದರು. ಅಕ್ಟೋಬರ್ 14 ಮತ್ತು 15ರ ನಡುವೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸೇನಾಧಿಕಾರಿಗಳು ಶಂಕಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.