ONLINE NEWS

ಮಹಾಯೋಗಿ ವೇಮನ ಜಯಂತಿ -2025; ಲೋಕಕ್ಕೆ ಬೆಳಕಾದ ಮಹಾಯೋಗಿ.

Share

ಭಾರತ ಟೈಮ್ಸ್ ಸುದ್ದಿ :ಬೆಳಗಾವಿ, ಜ.19 : ಮಹಾಯೋಗಿ ವೇಮನರು ಸಮಾಜದಲ್ಲಿ ತಾವು ಕಂಡ ಸತ್ಯವನ್ನು ಕಹಿಯಾದ ಭಾಷೆಯಲ್ಲಿ ಹಾಡಿ, ಜನರಲ್ಲಿ ಅರಿವಿನ ಬೀಜ ಬಿತ್ತಿದ್ದರು. ತಮ್ಮ ತತ್ವಪದಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಮುಂದಾಗಿದ್ದರು. ವೇಮನರ ತತ್ವ, ಸಿದ್ಧಾಂತ ಸರ್ವ ಸಮುದಾಯಕ್ಕೂ ತಲುಪಲುಪಬೇಕು ಎಂದು

ಡಾ. ವಾಯ್. ಎಂ ಯಾಕೊಳ್ಳಿ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಹತ್ತಿರದ ರೆಡ್ಡಿ ಭವನದಲ್ಲಿ ರವಿವಾರ (ಜ.19) ನಡೆದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂದಿನ ಕಾಲಮಾನದಲ್ಲಿ ಮಹಾಯೋಗಿ ವೇಮನರು ತಮ್ಮ ಸಾಹಿತ್ಯದ ಮೂಲಕ ಸಮಾಜ ತಿದ್ದುವ ಕಾರ್ಯ ಕೈಗೆತ್ತಿಕೊಳ್ಳುತ್ತಾರೆ. ವೇಮನರು ಬರೆದ ಪದ್ಯ ಅಸಂಖ್ಯವಾಗಿವೆ. ಶರಣರ ಬಹಳಷ್ಟು ಸಾಹಿತ್ಯ, ವಚನಗಳು ವೇಮನರ ಚೌಪದಿಯಲ್ಲಿ ಬಂದಿವೆ ಎಂದು ಹೇಳಿದರು.

ಮಹಾಯೋಗಿ ವೇಮನರ ಕಾಲಾತೀತ ಬುದ್ಧಿವಂತಿಕೆಯನ್ನು ನಾವಿಲ್ಲಿ ಸ್ಮರಿಸಬಹುದು. ಅವರ ಪದ್ಯಗಳು ಮತ್ತು ಬೋಧನೆಗಳು ಸತ್ಯ, ಸರಳತೆಯಿಂದ ಕುಡಿವೆ. ಅಷ್ಟಲ್ಲದೇ ಆಂತರಿಕ ಶಾಂತಿಯ ಜೀವನದ ಕಡೆಗೆ ನಮ್ಮನ್ನು ಮಾರ್ಗದರ್ಶನ‌ ಮಾಡುವ ಜತೆಗೆ ಪ್ರೇರೇಪಣೆ ನೀಡುತ್ತವೆ ಎಂದರು.

ಶರಣರ ವಚನ ಸಾಹಿತ್ಯ ಚಳುವಳಿ ಮತ್ತು ವೇಮನರ ಸಾಹಿತ್ಯಗಳನ್ನು ಸಮನಾಗಿ ಕಾಣಬಹುದು. ಅಂಬಿಗರ ಚೌಡಯ್ಯ ಮತ್ತು ಸರ್ವಜ್ಞ ವೇಮನ ತತ್ವಗಳಿಗೆ ಸಮೀಪವಾದವರು ಎಂದು ಡಾ. ವಾಯ್.ಎಂ ಯಾಕೊಳ್ಳಿ ಅವರು ಉಪನ್ಯಾಸದಲ್ಲಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಬೆಳಗಾವಿ ಜಿಲ್ಲಾ ರೆಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ, ಜಿಲ್ಲಾ ರೆಡ್ಡಿ ಸಂಘದ ಗೌರವಾಧ್ಯಕ್ಷರಾದ ಇಂದಿರಾ ಮಳಲಿ, ಉಪಾಧ್ಯಕ್ಷ ಟಿ.ಕೆ ಪಾಟೀಲ, ಕಾಂತು ಜಾಲಿಬೇರಿ ರೆಡ್ಡಿ ಹಾಗೂ ಸಮಾಜದ ವಿವಿಧ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸುನೀತಾ ದೇಸಾಯಿ ನಿರೂಪಿಸಿ, ವಂದಿಸಿದರು.

ಮೆರವಣಿಗೆ ಕಾರ್ಯಕ್ರಮ:

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ಮಹಾಯೋಗಿ ವೇಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.ಬ

ಳಿಕ ಮೆರವಣಿಗೆ ಚನ್ನಮ್ಮ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನವನದ ಮಾರ್ಗವಾಗಿ ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಹತ್ತಿರ, ರೆಡ್ಡಿ ಭವನದವರೆಗೆ ತಲುಪಿತು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಬೆಳಗಾವಿ ಜಿಲ್ಲಾ ರೆಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ, ಜಿಲ್ಲಾ ರೆಡ್ಡಿ ಸಂಘದ ಗೌರವಾಧ್ಯಕ್ಷರಾದ ಇಂದಿರಾ ಮಳಲಿ, ಉಪಾಧ್ಯಕ್ಷ ಟಿ.ಕೆ ಪಾಟೀಲ, ಕಾಂತು ಜಾಲಿಬೇರಿ ಹಾಜರಿದ್ದರು.


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button