ONLINE NEWS
ಪ್ರಮೋದ ಹುಡೇದ ನಿಧನಕ್ಕೆ ಸಚಿವೆ ಹೆಬ್ಬಾಳಕರ್ ಸಂತಾಪ
ಭಾರತ ಟೈಮ್ಸ್ ಸುದ್ದಿ : ಬೆಳಗಾವಿ : ವಿಸ್ತಾರ ನ್ಯೂಸ್ ಬೆಳಗಾವಿ ಜಿಲ್ಲಾ ವರದಿಗಾರ ಮಂಜುನಾಥ ಹುಡೇದರವರ ಸಹೋದರ, ಇಂಡಸ್ ಇಂಡ್ ಬ್ಯಾಂಕ್ ಉದ್ಯೋಗಿ ಪ್ರಮೋದ ಅಶೋಕ ಹುಡೇದ ಅವರ ಅಕಾಲಿಕ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಮೋದ ಹುಡೇದ ಬುಧವಾರ ಬೆಳಗ್ಗೆ ತಮ್ಮ 26 ನೇ ವಯಸ್ಸಿನಲ್ಲಿ ನಿಪ್ಪಾಣಿಯಲ್ಲಿ ಹೃದಯಾಘಾತದಿಂದ ನಿಧನರಾಗಿರುವ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ಬೇಸರವಾಯಿತು. ಇಷ್ಟು ಚಿಕ್ಕ ವಯಸ್ಸಿನಲ್ಲಿ, ತಂದೆ, ತಾಯಿ, ಸಹೋದರರು, ಪತ್ನಿ ಮತ್ತು ಒಂದು ವರ್ಷದ ಚಿಕ್ಕ ಮಗುವನ್ನು ಬಿಟ್ಟು ಅವರು ಅಗಲಿರುವುದು ತೀವ್ರ ಆಘಾತವನ್ನುಂಟು ಮಾಡಿದೆ. ಮೃತರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿಯನ್ನು ನೀಡಲಿ, ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.