ಯುಕೆಪಿ ಯೋಜನೆ ಅನುಷ್ಠಾನಗೊಳಿಸುವಂತೆ ಕೆ,ಆರ್,ವಿ,ಎಸ್ ನಿಂದ ಬೆಂಬಲ
ಭಾರತ ಟೈಮ್ಸ್ ಸುದ್ದಿ :ಬಾಗಲಕೋಟ : ಡಿಸೆಂಬರ್ 13 ಕೃಷ್ಣಾ ಮೆಲ್ದಂಡೆ ಯೋಜನೆ (ಯುಕೆಪಿ) ಯನ್ನು ಅನುಷ್ಠಾನಗೊಳಿಸುವಂತೆ ಹಮ್ಮಿಕೊಳ್ಳಲಾಗಿದೆ ಪ್ರತಿಭಟನೆಗೆ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸೇನೆ ಸಂಘಟನೆಯು ಬೆಂಬಲ ಸೂಚೀಸಿ ಪ್ರತಿಭನೆಯ ಮೂಲಕಮನವಿ ಪತ್ರ ಸಲ್ಲಿಸಿತು. ಈ ವೇಳೆ ಮಾತನಾಡಿದ ಜಿಲ್ಲಾ ಅಧ್ಯಕ್ಷ ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಯ ರೈತರು ಸುಮಾರು 1536,000 ಎಕರೆ ಭೂಮಿ (6,220 ಚದರ ಕಿ.ಮೀ) ನೀರಾವರಿಗಾಗಿ ಕರ್ನಾಟಕ ಸರ್ಕಾರವು ಈ ಯೋಜನೆಗೆ ಕಸಿದುಕೊಂಡಿದೆ
ಆದರೆ ಭೂಮಿ ಕಳೆದುಕೊಂಡ ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಯ ರೈತರಿಗೆ ಪರಿಹಾರದ ವಿಷಯದಲ್ಲಿ ಸರ್ಕಾರ ಅತ್ಯಂತ ನಿಲ್ರಕ್ಷ ವಹಿಸುತ್ತಿವೆ.
ಈ ರೀತಿಯ ದೊರಣೆ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ರೈತರ ಬಗ್ಗೆ ಈ ರೀತಿಯ ಧೋರಣೆ ಸಹಿಸಲು ಸಾಧ್ಯವಿಲ್ಲ.
ಇನ್ನಾದರೂ ಈ ರೀತಿಯ ಧೋರಣೆ ಹೊಗಬೇಕು.
ಮುಂಬರುವ ದಿನಗಳಲ್ಲಿ ಸರ್ಕಾರ ಇದರ ಬಗ್ಗೆ ಗಂಭಿರವಾಗಿ ಪರಿಗಣಿಸದೆ ಇದ್ದರೆ ಉಗ್ರ ಹೊರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಜಿಲ್ಲಾ ಅಧ್ಯಕ್ಷ ಮಂಜುನಾಥ್. ದಡ್ಡಿ,ಮುತ್ತು ಕೆಂಚೋಡಿ
,ಸುಮಿತ್ ಬಾಂಡಗೆ,ಸದಾಶಿವ ಹೊಸಮನಿ, ಸಾಗರ್ ಸುನಗಾರ,ಶ್ರೀನಿವಾಸ್ ಗೆನ್ನೂರು, ಅನಿಲ್ ಗೌಡರ ಪ್ರಕಾಶ ಜಾಲವಾದಿ ಇತರಿದ್ದರು.