ವಿವಿಧ ಗ್ರಾಮಗಳಲ್ಲಿ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಚಿವರು.
ಭಾರತ ಟೈಮ್ಸ್ ನ್ಯೂಸ್ ಬೆಳಗಾವಿ : ಯಾವುದೇ ಭಾಗದ ಆರ್ಥಿಕ ಅಭಿವೃದ್ಧಿಗೆ ಅಲ್ಲಿನ ಮೂಲಸೌಕರ್ಯಗಳು ಅಭಿವೃದ್ಧಿಯಾಗಬೇಕಾದ ಅಗತ್ಯವಿದೆ. ಹಾಗಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಕಲ ರೀತಿಯ ಮೂಲಭೂತ ಸೌಲಭ್ಯ ಒದಗಿಸಲು ಮೊದಲ ಆದ್ಯತೆ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧೆಡೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಮೂಲಭೂತ ಸೌಲಭ್ಯಗಳು ಒಮ್ಮೆ ಮಾಡಿದರೆ ಮುಗಿಯುವಂತದ್ದಲ್ಲ. ರಸ್ತೆ, ಚರಂಡಿ ಮೊದಲಾದವುಗಳನ್ನು ಆಗಾಗ ಮಾಡುತ್ತಲೇ ಇರಬೇಕಾಗುತ್ತದೆ. ಕ್ಷೇತ್ರದ ಯಾವುದೇ ಭಾಗದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ನಾನು ಇಡೀ ರಾಜ್ಯಕ್ಕೆ ಮಂತ್ರಿಯಾಗಿದ್ದರೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಪಾಲಿಗೆ ಎಂದಿಗೂ ಮನೆಮಗಳಾಗಿರುವೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಕನಸು. ಕ್ಷೇತ್ರದ ಮಗಳಾಗಿ ಜನರ ಸೇವೆ ಮಾಡುತ್ತಿರುವೆ. ಚುನಾವಣೆ ಸಂದರ್ಭದಲ್ಲಿ ಉತ್ತಮ ರಸ್ತೆ ನಿರ್ಮಾಣ ಮಾಡಿಕೊಡುವುದಾಗಿ ಗ್ರಾಮದ ಜನರಿಗೆ ಮಾತು ಕೊಟ್ಟಿದ್ದೆ. ಇದೀಗ ಕೊಟ್ಟ ಮಾತಿನಂತೆ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿರುವೆ. ಗ್ರಾಮದ ಅಭಿವೃದ್ಧಿಯಲ್ಲಿ ಜನರು ಕೈಜೋಡಿಸಬೇಕೆಂದು ಸಚಿವರು ಕರೆ ನೀಡಿದರು.
ಗುಣಮಟ್ಟದ ವಸ್ತುಗಳ ಬಳಕೆ ಮಾಡುವ ಮೂಲಕ ಸುಸಜ್ಜಿತ ರಸ್ತೆ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ ಸಚಿವರು, ರಸ್ತೆಗೆ ನೀರು ಕುಡಿಸಿ, ಬಾಳಿಕೆ ಬರುವಂತೆ ನೋಡಿಕೊಳ್ಳಿ ಎಂದು ಜನರಿಗೆ ವಿನಂತಿಸಿದರು.
ಹಲಗಾ ಗ್ರಾಮದ ಶಿವಾಜಿ ಗಲ್ಲಿಯ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಪೂಜೆ ಸಲ್ಲಿಸುವ ವೇಳೆ, ಗಣಪತ್ ಮಾರಿಹಾಳ್ಕರ್, ಸಾಗರ್ ಕಾಮನಾಚೆ, ಮಹಾವೀರ ಪಾಟೀಲ, ಕಿರಣ ಹನಮಂತಾಚೆ, ರೂಪಾ ಸುತಾರ್, ಕಲ್ಪನಾ ಹನಮಂತಾಚೆ, ಲಕ್ಷ್ಮೀ ಸಂತಾಜಿ, ರೇಖಾ ಚಿಕ್ಕಪರಪ್ಪ, ಅಣ್ಣಾಸಾಹೇಬ್ ಘೋರ್ಪಡೆ, ಪಿರಾಜಿ ಜಾಧವ್, ಸುಕುಮಾರ ಹುಡೇದ್, ರಾಜು ವಡಗಾಂವ, ಸಚಿನ ಸಾಮಜಿ, ಶಾಂತು ಬೆಲ್ಲದ, ಪಪ್ಪು ಮಾಸ್ತಮರ್ಡಿ, ಸಂತೋಷ ವಿ ಮುಂತಾದವರು ಉಪಸ್ಥಿತರಿದ್ದರು.
ಹಲಗಾ ಗ್ರಾಮಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಿಂದ ಮಾಸ್ತಮರ್ಡಿ ಕ್ರಾಸ್ ವರೆಗಿನ ರಸ್ತೆಯ ಡಾಂಬರಿಕರಣದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ವೇಳೆ 1108 ಶ್ರೀ ಸಿದ್ಧಸೇನ ಮಹಾರಾಜರು, ಮಂಜುನಾಥ ಕೋಲಕಾರ, ಸಂತೋಷ ಅಷ್ಟೇಕರ್, ನಾಗೇಶ್ ಮಹಾರ್, ಮಾರುತಿ ತಾನಸಿ, ಗೋಪಾಲ್ ಮರಕಟನಾಳ, ಪ್ರಕಾಶ ಪಾಟೀಲ, ಸುರೇಶ ಪಾಟೀಲ, ರಾಜು ಪಾಟೀಲ, ವಿಶ್ವನಾಥ ಕೆ, ನಾಗಪ್ಪ ತಳವಾರ, ರಮೇಶ ಜಳಕನ್ನವರ, ಬಸವರಾಜ ವಾನಿ, ನಾನದೇವ ಜೋಗನ್ನವರ, ಶಿವನಗೌಡ ಪಾಟೀಲ, ಯಮನಪ್ಪ ಸಣ್ಣಮನಿ, ಬಸವರಾಜ ಪಾರ್ವತಿ, ರಾಕೇಶ್ ಪಾಟೀಲ, ಮಹಾವೀರ ಪಾಟೀಲ, ಸುಕುಮಾರ ಹುಡೇದ್, ಭರತೇಶ ಬೆಲ್ಲದ್, ನಾಗಯ್ಯಸ್ವಾಮಿ ಪೂಜಾರ ಉಪಸ್ಥಿತರಿದ್ದರು.
ಬಸ್ತವಾಡ ಗ್ರಾಮದ ವಿದ್ಯಾನಗರದ ಚಂದ್ರಪ್ರಭಾ ಕಾರ್ಯಾಲಯದ ಪಕ್ಕದಲ್ಲಿರುವ ಹಾಗೂ ತಾನಾಜಿ ಗಲ್ಲಿಯ ರಸ್ತೆಗಳ ಅಭಿವೃದ್ಧಿಯ ಕಾಮಗಾರಿಗಳಿಗೆ ಚಾಲನೆ ನೀಡುವ ವೇಳೆ, ಮನೋಹರ್ ಬಾಂಡಗಿ, ಕೇಶವ ಚೌಗುಲೆ, ಜ್ಯೋತಿಬಾ ಚೌಗುಲೆ ರಾಮಾ ಕಾಕತ್ಕರ್, ಮನೋಹರ್ ಮುಚ್ಚಂಡಿ, ಭರ್ಮಾ ಗೊಡಕೆಚಕ್, ರಾಜು ಬಡವಾನವರ್, ಮಹಾವೀರ ಸಂಕೇಶ್ವರಿ, ಅಪ್ಪಯ್ಯ ಬಾಗನವರ, ಸಂಜಯ ಮಾರಗನಾಂಚೆ, ಶಿವಾಜಿ ಕಾಕತ್ಕರ್, ಬಸಿರಸಾಬ್ ಕಿಲವಾಲೆ ಉಪಸ್ಥಿತರಿದ್ದರು.